"ಕೊಳಲುಲಿವಾಲಿಪೆವೆಲ್ಲ
ಮುರಳಿಧರ ಕಾಣಲೇವೊಲ್ಲ"
ಗೋಕುಲ ನಿರ್ಗಮನ ನಾ ನೋಡಬೇಕೆಂದಿದ್ದ ಬಹುದಿನಗಳ ಕನಸು.
ಸುಂದರ, ರಮಣೀಯ, ಮನಮೋಹಕ ದೃಶ್ಯ ಕಾವ್ಯ ಅದಕ್ಕಷ್ಟೇ ಮಧುರವಾದ ಸಂಗೀತ.
ಬಹುಶ ಇಂದಿನ ದಿನಗಳಲ್ಲಿ ಗೋಕುಲ ನಿರ್ಗಮನವನ್ನ ಯಾವ ಕವಿಗೂ ಯೋಚಿಸಲು ಆಗದೇನೋ? ಎಚ್ ಎಸ್ ವೀ ಯವರ ತೂಗುಮಂಚ ತಟ್ಟನೆ ನೆನಪಾಗುತಿದೆ ಸೊ ನನ್ನ ಹಿಂದಿನ ವಾಕ್ಯವನ್ನ ಹಿಂತೆಗೆದುಕೊಳ್ಳುತ್ತಿದ್ದೇನೆ :-)
ಕೃಷ್ಣ ಮಗನಾಗಬಲ್ಲ, ಸಖನಾಗಬಲ್ಲ, ಇನಿಯನಾಗಬಲ್ಲ, ತಂದೆಯಾಗಬಲ್ಲ, ಗುರುವಾಗಬಲ್ಲ, ಜಗತ್ತಿನ ಎಲ್ಲ ಸಂಬದಗಳನ್ನೂ ಮೀರಿ ನಿಲ್ಲಬಲ್ಲ. ಅಂತ ಕೃಷ್ಣ ರಾಧೆ ಯೊಂದಿಗೆ ಆಡಿದ ಸರಸದ ಚಿತ್ರಣವೇ ಗೋಕುಲ ನಿರ್ಗಮನ. ರಾಧೆ ಕೃಷ್ಣನ ಮನದನ್ನೆ ಮುರಲಿಧರನ ಮುರಳಿಯ ಸೊಲ್ಲು.
ಉಸಿರೊಂದು ಕೊಳಲಲಿ ಬೆರೆಯೇ ರಾಗ
ನಾನು ನೀನು ಸೇರಿ ಹಾಡೇ ಅನುರಾಗ
Will write more on Gokula Nirgamana in the next post.
No comments:
Post a Comment