ನೋವಿನಲ್ಲಿದ್ದವರಿಗೆ
ತಿಳುವಳಿಕೆಯನ್ನೆಲ್ಲಾ ಪಣಕ್ಕಿಟ್ಟು
ಸಲಹೆ ಕೊಡಬೇಡಿ .
ಅಸಹಾಕತೆ
ಸಿಟ್ಟಿನ ತುತ್ತ ತುದಿಯನು
ತಲುಪಿಸಿರುತ್ತದೆ.
ಅಲ್ಲಿ
ಮಂಡಿಯೂರಿ ಕಂಬನಿಯಲ್ಲಿ
ಮೀಯುತ್ತಿರುವರಿಗೆ ಸಂಪೂರ್ಣ
ಕಿವುಡು.
ಇತ್ತೀಚಿಗೆ
ಇದನ್ನು ಓದಿದ್ದು ಭಾರತಿ ಬಿ.ವಿ
ಬರೆದ ಸಾಸಿವೆ ತಂದವಳು..
ದಲ್ಲಿ
. ಅನುಭವವಾಗಿದ್ದು
ಇತ್ತೀಚಿಗೆ .
ಮಂಡಿಯೂರಿ
'ಅಮ್ಮಾ....'
ಎಂದೆ
, 'ಎದುರಿನವರು
ಎಲ್ಲ
ಸರಿಹೋಗತ್ತೆ ಬಿಡು'
ಎನ್ನುವರೆಂದು
ಕಾದೆ
'ಈ
ವಯಸಿಗೆ ನೋವೇ ?
,
ತೂಕ
ಕಡಿಮೆ ಮಾಡಿ ,
ಎಣ್ಣೆ
ಬಿಟ್ಟು ಬಿಡಿ ,
ಬೆಣ್ಣೆಯ
ಕಡೆ ನೋಡ ಬೇಡಿ '
ಮುಂದಿನ
ಮಾತುಗಳು ಕೇಳಲಿಲ್ಲ
ಮಾಡಿದ
ತಪ್ಪಿಗೀಗ ಅನುಭವಿಸು
ಎಂಬಂತ
ನೋಟ ಇರಿಯಿತು
ಕಟ್ಟಿದ್ದ
ಕಟ್ಟೆ ಒಡೆಯಿತು
ಹರಿದ
ನೀರು ನೋವ ನೀಗಲಿಲ್ಲ
ನೋವಿನ
ಕಾರಣ ಅವರಿಗೆ ತಿಳಿಯಲಿಲ್ಲ
ವಯಸ್ಸೇ
ಕೇಳಿ ಬರದು
ಇನ್ನು
ನೋವಿಗೆ ಅನುಮತಿಯೇ ?
ತಪಸ್ಸಿನ
ಫಲವೇ ತೂಕ ?
ಎಣ್ಣೆಯಲ್ಲೇನು
ಈಜಬಹುದೇ ?
ನೋವಿಗೆ
ಬೇಕಿದ್ದದ್ದು ಒಂದಷ್ಟು ಮುಲಾಮು
,
ಬಂದ
ನೋವಿಗೆ ಹೋಗುವ ದಾರಿಯೂ ಗೊತ್ತು
ಎಂಬ
ಭರವಸೆ .
ತನ್ನದಲ್ಲದ
ನೋವಿಗೆ ನಾಲಿಗೆಯನುಳಿದು
ಎಲ್ಲ
ಇಂದ್ರಿಯಗಳು ಕಿವುಡು
ಜಗಕೆ
ಕವಿದಿದೆ ಎಂಥದೋ ಕುರುಡು .
ಹತ್ತರ
ಹುತ್ತದ ನಡುವೆನಿಂತು :
ಬ್ಲಾಗ್
ಬರೆಯಲು ಆರಂಭಿಸಿ ಹತ್ತು ಬಾರಿ
ವರುಷಗಳು ಬದಲಾಗಿವೆ .
ಕುಂಟುತ್ತಾ
, ಎಡುವುತ್ತಾ
, ತೆವಳುತ್ತಾ
ಇಲ್ಲಿಗೆ ಬಂದು ನಿಂತಿದೆ .
ನಾನು
ಬ್ಲಾಗ್ ಓದಿ ಎಂದು ಹೇಳಿದ್ದು
ಅತೀ ಕಡಿಮೆ ಜನಕ್ಕೆ .
ಇಲ್ಲಿಗೆ
ಬಂದು ಓದಿದವರ ಸಂಖ್ಯೆ ೧೦ ಸಾವಿರ
ಮೇಲೊಂದಷ್ಟು.
ತಪ್ಪದೇ
ಓದಿ ಪ್ರತಿಕ್ರಯಿಸುವ ಹಿರಿಯರಾದ
ಸುನಾತ್ ಕಾಕಾ ,
ಎಷ್ಟು
ದಿನವಾಯ್ತು ಬ್ಲಾಗ್ ಕಡೆ ಬಂದು
ಎಂದು ನೆನಪಿಸುವ ಬದರಿ ಸರ್ ಮತ್ತು
ಪ್ರೋತ್ಸಾಹಿಸಿದ ಎಲ್ಲರಿಗೂ
ಅಭಾರಿ.
ಚಿತ್ತ
ಹುತ್ತ ಕಟ್ಟಿದರೆ
ಹುಟ್ಟುವುದೊಂದು
ಮಹಾಕಾವ್ಯ
ಹುತ್ತದ
ಹಾವು ಮಲಗಿ
ಮೇಲೇರಿ
ಹೂವಾದೊಡೆ
ಬದುಕಿನ
ಕಾವ್ಯ ಸುಶ್ರಾವ್ಯ .
ಸ್ವರ್ಣಾ,
ReplyDeleteರುಚಿ ಇಲ್ಲದ ಹತ್ತು ಪದಾರ್ಥಗಳಿಗಿಂತ, ಸವಿಸವಿಯಾದ ಒಂದು ಪದಾರ್ಥ ಮೇಲಲ್ಲವೆ? ನೀವು ಬರೆದ ಹನಿ-ಬನಿಗಳನ್ನು, ಕಿರುಕಾದಂಬರಿಯನ್ನು ಓದಿ ನಾನು ಸಾಹಿತ್ಯಸುಖವನ್ನು ಪಡೆದಿದ್ದೇನೆ. ಇದು ಪ್ರೋತ್ಸಾಹಿಸುವದಕ್ಕೆ ಹೇಳುವ ಮಾತಲ್ಲ; ನನ್ನ ಮನದಾಳದ ಮಾತು. ನಿಮ್ಮ ಬರಹ ಇತ್ತೀಚಿಗೆ ಕಡಿಮೆಯಾಗಿದ್ದರೆ, ಅದಕ್ಕೆ ಅನೇಕ ಕಾರಣಗಳು ಇರಬಲ್ಲವು. ಅವೆಲ್ಲವನ್ನು ಹಿಂದೊತ್ತಿ, ನೀವು ಮತ್ತೆ ಸಕ್ರಿಯರಾಗಿರಿ ಎಂದು ಹಾರೈಸುತ್ತೇನೆ. ನಿಮ್ಮ ಬರಹದ, ನಿಮ್ಮ ಬದುಕಿನ ಕಾವ್ಯ ಸುಶ್ರಾವ್ಯವಾಗಲಿ!