 |
| ಚಿತ್ರಕೃಪೆ : ಅಂತರ್ಜಾಲ |
ಒಂದು ಕಾಲದಲ್ಲಿ 30X40 ಜಾಗವೇ ಆದರೂ ಸುತ್ತ ನಾಲ್ಕು ಗಿಡಗಳಿಗೆ ಜಾಗ ಬಿಟ್ಟು ಮನೆ ಕಟ್ಟುತ್ತಿದ್ದೆವು. ಈಗಲೂ ನಾಲ್ಕೇನು ಎಂಟು ಗಿಡ ನೆಡುತ್ತೇವೆ
ಆದರೆ ನಮ್ಮ ಜಾಗದಲ್ಲಲ್ಲ, ನಮಗೆ 80X100 ಜಾಗವೇ ಇದ್ದರೂ ಅದರಲ್ಲಿ ಒಂದಿಂಚೂ ಬಿಡದಂತೆ ಮನೆ ಕಟ್ಟಿ ಮನೆ ಮುಂದಿನ ಫುಟ್ಪಾತಿಗೆ ಬೇಲಿ ಹಾಕಿ ನಮ್ಮ ಹಸಿರ ಪ್ರೇಮ ಮೆರೆಸುತ್ತೇವೆ ! ಸುತ್ತ ಗಿಡಗಳಿರುವ ಮನೆಗಳು ಕಾಣೆಯಾಗುತ್ತಿವೆ.
 |
| ಚಿತ್ರಕೃಪೆ : ಅಂತರ್ಜಾಲ |
ನಮ್ಮಮ್ಮ ಬಾಡಿಗೆ ಮನೆ ಹುಡುಕುವಾಗ ಪರಿಚಯಸ್ತರಲ್ಲಿ ಮೊದಲು ಹೇಳುತ್ತಿದ್ದುದು ನೀರು ಕಾಯಿಸಲು ಒಂದು ಹಂಡೆ ಒಲೆ ಹೂತಿರಬೇಕು ಮತ್ತು ತಿರುವಲು (ರುಬ್ಬಲು)
ಒಂದು ಒರಳು ಕಲ್ಲಿರಬೇಕು ಅಂತ. ಎಲ್ಲೆಂಲ್ಲಿಂದಲೋ ಪುಳ್ಳೆ ,ಚಿಪ್ಪು, ಇದ್ದಿಲು, ಕಟ್ಟಿಗೆ ಮತ್ತು ಉರಿದು ಶಾಖ ಕೊಡಬಲ್ಲ ಎಲ್ಲವಸ್ತುಗಳನ್ನೂ ಹೊಂದಿಸಿ ದಿನವೂ ಸ್ನಾನಕ್ಕೆ
ನೀರು ಕಾಯಿಸುವುದು ಅಮ್ಮಂದಿರ ನಿತ್ಯ ಹೋರಾಟದ ಒಂದು ಭಾಗವಾಗಿತ್ತು . ಇನ್ನು ಈ ಹಂಡೆಯನ್ನು ತುಂಬಿಸುವುದರ ಬಗ್ಗೆ ಕಥೆ ಬರಿಬಹುದು. ಮಿಕ್ಸಿ ಐಶಾರಾಮದ
ವಸ್ತುವಾಗಿದ್ದಾಗ ದೋಸೆ, ಇಡ್ಲಿ ಇಂದ ದಿನ ನಿತ್ಯದ ಹುಳಿಗೆ(ಸಾಂಬಾರಿಗೆ)
ಸಾಮಾಗ್ರಿಗಳನ್ನ ಅರಿಯುವುದಕ್ಕೆ ಒರಳಕಲ್ಲು ಇರಲೇ ಬೇಕಿತ್ತು. ಒರಳಿನ ಪಕ್ಕ ಸಾಮಾನ್ಯವಾಗಿ ಒಂದು ತೆಂಗಿನ
ಕರಟ (ಚಿಪ್ಪು) , ಹಾರೆ ಕೋಲು, ಒಂದು ಒನಕೆ ಇಟ್ಟಿರುತ್ತಿದ್ದರು. ಒರಳು ತೊಳೆದಾದ
ಮೇಲೆ ಗುಂಡಿಯಲ್ಲಿ ಸೇರುವ ನೀರನ್ನು ಎತ್ತಿ ಚೆಲ್ಲಲು ಕರಟ.
ದಿನವೂ ಒರಳು ಬಳಸುವ ಮನೆಗಳಲ್ಲಿ ಆ ಕರಟದ ಮೇಲ್ಮೈ ಸಪಾಟವಾಗಿ ಮೃದುವಾಗುತ್ತಿತ್ತು. ಈ ಕೆಲಸಕ್ಕೆ ವಿಶೇಷವಾದ ಕರಟವೇ ಬೇಕಿತ್ತು , ಗುಂಡಗಿರಬೇಕು, ಒರಳಿನ ಗಾತ್ರಕ್ಕೆ ತಕ್ಕಂತಿರಬೇಕು ಹೀಗೆ.ನಮ್ಮಜ್ಜಿ ಕಾಯಿ ತುರಿದಾದ ಮೇಲೆ ಈ
ಕರಟವನ್ನ ಎಷ್ಟು ಚೆನ್ನಾಗಿ ಆರಿಸಿಟ್ಟು ಕೊಳ್ಳುತ್ತಿದ್ದರೆಂದರೆ ಅದು ನಯಸ್ಸಾದ ಮೇಲೆ
ಹೇಮಮಾಲಿನಿ ಕೆನ್ನೆಯನ್ನ ಹೋಲುತ್ತಿತ್ತು ! ಸಾರಿನ ಪುಡಿ, ಹುಳಿ
ಪುಡಿ ಅಂತ ನೂರೆಂಟು ಬಗೆಯ ಪುಡಿ ಕುಟ್ಟಲು ಹಾರೆ ಕೋಲು ಅಗತ್ಯವಾಗಿತ್ತು. ತನ್ನಲ್ಲಿ ವರ್ಷಗಳಿಂದ ಇದ್ದ ಹಾರೆ
ಕೋಲನ್ನು ನೆರೆ ಮನೆಯವರು ಕಳೆದಾಗ ಅಮ್ಮ ಅಲವತ್ತುಕೊಂಡಿದ್ದು ನನಗಿನ್ನೂ ನೆನಪಿದೆ.
ನಾ ನೋಡುವ ಹೊತ್ತಿಗೆ ಭತ್ತ ಕುಟ್ಟುವ ಕಾಲ ಹೋಗಿ, ಒನಕೆಯ ಬಳಕೆಯೂ ಸರಿ ಸುಮಾರು ಪುಡಿಕುಟ್ಟಲೆಂದೇ ಆಗುತ್ತಿತ್ತು. ಹಂಡೆ ಒಲೆ ಬಹುತೇಕ ಕಳೆದಿದೆ. ಒರಳು ಅಲ್ಲಿ ಇಲ್ಲಿ ಒಂದೊಂದು ಹಳೆ ಮನೆಗಳಲ್ಲಿ, ಹಳೆ ಜನರಿದ್ದ ಮನೆಗಳಲ್ಲಿ ಕಂಡರೂ ಉಪಯೋಗಿಸುವ ಜನ ಕಡಿಮೆಯಾಗುತ್ತಿದ್ದಾರೆ.
 |
| ಚಿತ್ರಕೃಪೆ: ಕಣಜ |
ಮಿಕ್ಸಿ ಇಲ್ಲದ ಕಾಲದಲ್ಲಿ ಇದ್ದ ಇನ್ನೊಂದು ಸಾಧನ ಬೀಸುವ ಕಲ್ಲು. ಅಮ್ಮನೋ ಅಜ್ಜಿಯೋ ಗೂಟ
ಹಿಡಿದು ತಿರುಗಿಸುತ್ತಿದ್ದರೆ , ಇಡ್ಲಿಗೆ ಅಕ್ಕಿರವೆ, ತಿಂಡಿಗೆ ಅರಳಿಟ್ಟು
ಸಿಧ್ಧವಾಗುತ್ತಿತ್ತು. ಕೆಲ ಪಂಗಡಗಳಲ್ಲಿ ವಧು ಮದುವೆಯ ಮೊದಲು ಬೀಸುವ ಕಲ್ಲು, ಒರಳ ಕಲ್ಲು, ಒನಕೆಗಳನ್ನ
ಪೂಜಿಸುವ ಪರಿಪಾಟವಿದೆ. ಮುಂದೆ ಸಹಾಯಕವಾಗುವ ಪರಿಕರಗಳ ಬಗ್ಗೆ ಪೂಜ್ಯ ಭಾವನೆ ಇರಲೆಂಬ
ಆಶಯವಿರಬಹುದು.
ನನ್ನ ತಲೆಮಾರಿನ ವಧುಗಳು ಈ ಪರಿಕರಗಳು ಸಿಗದೇ, ಅವುಗಳ ಮರದ ಪುಟ್ಟ ಪುಟ್ಟ
ಬೊಂಬೆಗಳನ್ನು ಪೂಜೆ ಮಾಡಿದ್ದೇವೆ ! ಇನ್ನು ಮುಂದೆ, ಅದರ ಬದಲು ಮಿಕ್ಸಿ ಮತ್ತು ವೆಟ್
ಗ್ರೈಂಡರ್ಗೆ ಪೂಜೆ ಮಾಡಿಸಬಹುದು.
 |
| ಚಿತ್ರಕೃಪೆ : ಅಂತರ್ಜಾಲ |
ಕೆಲ ಮನೆಗಳಲ್ಲಿ ಇಂದಿಗೂ ಸ್ಟೀಲ್ ಪಾತ್ರೆಯಲ್ಲಿ ಮಾಡಿದ ಅಡುಗೆ ದೇವರ
ನೈವೇದ್ಯಕ್ಕೆ ಸಲ್ಲದು. ಶ್ರಾಧ್ಧ, ಹಬ್ಬದ ದಿನಗಳಲ್ಲಿ ಹಿತ್ತಾಳೆ ಪಾತ್ರೆಗಳು ಅಟ್ಟದಿಂದ
ಇಳಿದು ಒಂದು ದಿನದ ಫ್ಯಾಷನ್ ಶೋ ಮುಗಿಸಿ ಮತ್ತೆ ಸ್ವಸ್ಥಾನ ಸೇರುತ್ತವೆ. ಬಹುಶಃ ಹಿತ್ತಾಳೆಯ ಶಾಖವಾಹಕ ಗುಣ ಮತ್ತು ಇನ್ನು ಕೆಲ ವೈದ್ಯಕೀಯ ಕಾರಣಗಳಿಂದ
ಹಿಂದಿನವರು ಅದರಲ್ಲಿ ಮಾಡಿದ ಅಡುಗೆಯೇ ಶ್ರೇಷ್ಠ ಎಂಬ ತೀರ್ಮಾನ ಕೊಟ್ಟಿರಬಹುದು.
ಸ್ಟೀಲ್
ಪಾತ್ರೆ ಹೇಗೆ ವರ್ಜ್ಯವೋ ಹಾಗೆ ಅಡುಗೆ ಅನಿಲ ಬಳಸಿ ಮಾಡಿದ ಅಡುಗೆ. ಇದಕ್ಕಾಗೆ ಕನಿಷ್ಠ
ಒಂದು ಇದ್ದಿಲಿನ ಒಲೆ ಇರುತ್ತಿತ್ತು.
 |
| ಚಿತ್ರಕೃಪೆ : ಅಂತರ್ಜಾಲ |
ಒಮ್ಮೆ ಚೆನ್ನಾಗಿ ತಿಕ್ಕಿ ತೊಳೆದರೆ ಬೆಳ್ಳಿಯಂತೆ ಹೊಳೆಯುತ್ತಿದ್ದ 'ಸಿಲ್ವರ್' ಎಂದು ಕರೆಸಿಕೊಳ್ಳುತ್ತಿದ್ದ ಅಲ್ಯೂಮಿನಿಯಂ ಪಾತ್ರೆಗಳು , ಡಬ್ಬಗಳ ಸ್ಥಾನವನ್ನ ಮನೆಯಲ್ಲೇ ಹೆಂಗಸರು ಮಾರುವ ಟಪ್ಪರ್ವೇರ್ ಆಕ್ರಮಿಸಿಕೊಂಡಿದೆ. ಅಮ್ಮ ತನ್ನ ಹಳೆಯ ಸೀರೆ ,ಅಪ್ಪನ ಪ್ಯಾಂಟು - ಶರ್ಟು,ಕಡೆಗೆ ನಮ್ಮ ಚೂಡಿದಾರ್ಗಳನ್ನ ಕೊಟ್ಟು 'ಸಿಲ್ವರ್' ಡಬ್ಬಿ, ಪಾತ್ರೆ, ಸೌಟು ಮುಂತಾದವುಗಳನ್ನು ಕೊಳ್ಳುತ್ತಿದ್ದಳು. ಮರಾಟಿ ಹೆಂಗಸೊಬ್ಬಳು ತನ್ನ ಮಗಳು ಅಥವಾ ತನ್ನ ತಾಯಿಯೊಂದಿಗೆ ಮಾರಲು ಬರುತ್ತಿದಳು. ಹೆಂಗಸಿನ ತಲೆಯ ಮೇಲಿನ ಪುಟ್ಟಿಯ ತುಂಬಾ ಸಾಮಾನಗಳು ಆಕೆಯ ಜೊತೆಗಾರರ ತಲೆಯ ಮೆಲೆ ಸಣ್ಣ ಪುಟ್ಟಿ, ಕಂಕುಳಲ್ಲಿ ಬಟ್ಟೆ ಕಟ್ಟಿಕೊಳ್ಳಲು
ಒಂದು ಗಂಟು. ' ಪಾತ್ರಿಮಾ...ಪಾತ್ರಿ' ಅಂತ ಆಕೆ ಕೂಗು ಹಾಕಿದರೆ ಹೆಂಗಸರ ಕಿವಿ ನೆಟ್ಟಗಾಗುತ್ತಿತ್ತು. ಆಕೆಗೆ ಒಂದು ಟೀ , ತಿಂಡಿ ಕೊಟ್ಟು ವ್ಯಾಪಾರ ಮಾಡುತ್ತಿದ್ದರು. ಹಾಗೇ ತಮ್ಮ ಕಷ್ಟ ಸುಖವನ್ನು ಆಕೆಯ ಮುಂದೆ ತೋಡಿ ಕೊಳ್ಳುತ್ತಿದ್ದರು, ಬಸುರಿ ಹೆಂಗಸೊಬ್ಬಳು ಈ ಬಾರಿ ಗಂಡು ಮಗುವಾಗಿಲ್ಲ ಅಂದ್ರೆ ನಮ್ಮತ್ತೆ ನನ್ನ ಏನು ಮಾಡುತ್ತಾರೋ ಅಂತ ಹೆದರಿದರೆ , ಆಕೆ "ಏನಿಲ್ಲ ಬಿಡು ನಾಗೇಂದ್ರ ಹುಟ್ತಾನೆ " ಅಂತ ಸಮಾಧಾನ ಮಾಡೋಳು ನಾಗೇಂದ್ರ ಅಂದ್ರೆ ಸುಬ್ರಮಣ್ಯ ಅಲ್ಲ ರಾಘವೇಂದ್ರ ಸ್ವಾಮಿ ! ರಾಘವೇಂದ್ರ ಸ್ವಾಮಿಗಳ ಭಕ್ತ ಳಾಗಿದ್ದ ಆಕೆಯ ಬಾಯಲ್ಲಿ ರಾಘವೇಂದ್ರ ನಾಗೇಂದ್ರ ಆಗಿದ್ದ .ಇತ್ತಿಚಿಗೂ ಅಮ್ಮ ಬಟ್ಟೆ ಕೊಟ್ಟು ನನಗೊಂದು
'ಸಿಲ್ವರ್' ಪಾತ್ರೆ ತಂದುಕೊಟ್ಟಳೆಂದರೆ ಅದರ ಆಕರ್ಷಣೆ ಎಂಥದಿರಬಹುದು ? ನನಗೆ ಇದನ್ನ
ನೆನಸಿಕೊಂಡಾಗೆಲ್ಲ ವಸುದೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ದ 'ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳು' ಬರಹ ಜ್ಞಾಪಕ ಆಗತ್ತೆ.
 |
| ಚಿತ್ರಕೃಪೆ : ಅಂತರ್ಜಾಲ |
ಶ್ರೀಮಂತರ ಮನೆಗಳಲ್ಲಿ ಹೆಚ್ಚಾಗಿ ವ್ಯಾಪಾರಸ್ಥರ ಮೆನೆಗಳಲ್ಲಿ ಒಡವೆ ಮತ್ತು ಹಣವನ್ನಿಡಲು ತಿಜೋರಿ ಬಳಕೆಯಾಗುತ್ತಿತ್ತು. ಕೆಲ ಮನೆಗಳಲ್ಲಿ ಇದಕ್ಕೆ ವಿಭೂತಿ, ಊದುಕಡ್ಡಿ ಹಚ್ಚಿ ದಿನವೂ ಪೂಜೆ ಮಾಡುತ್ತಿದರು. ಪ್ಲಾಸ್ಟಿಕ್ ಕಾರ್ಡ್ ನಲ್ಲಿ ಹಣ ಬಂದ ಮೇಲೆ ಎಲ್ಲೋ ಕೆಲವರು
ಭಾವನಾತ್ಮಕ ನಂಟಿಗಾಗಿ ಇಂತಹ ತಿಜೋರಿಗಳನ್ನ ಇಟ್ಟುಕೊಂಡಿರಬಹುದು.
 |
| ಚಿತ್ರಕೃಪೆ :http://en.wikipedia.org/wiki/Doordarshan |
ದೂರದರ್ಶನ ಮೊದಲು ಬಂದಾಗ ಸುಮಾರು ಸಂಜೆ ೬ ಘಂಟೆಯ ಹೊತ್ತಿಗೆ 'ಕಾಣೆಯಾದವರ ಪ್ರಕಟಣೆಗಳು' ಅಂತ ಒಂದು ಕಾರ್ಯಕ್ರಮ ಬರುತ್ತಿತ್ತು. ೫೦-೬೦ ವರ್ಷದವರು ಕಾಣೆಯಾಗಿದ್ದಾರೆ ಎಂದಾಗ ಸ್ಕೂಲ್ನಲ್ಲಿದ್ದ ನನಗೆ ಸೋಜಿಗವಾಗುತ್ತಿತ್ತು. ಮಕ್ಕಳು ದಾರಿ ಮರೆವುದು ಸಹಜ ಆದರೆ ದೊಡ್ಡವರೇಕೆ ಕಾಣೆಯಾದರು ? ದೊಡ್ದವರೇ ಹೆಚ್ಚು ದಾರಿ ಮರೆವುದೆಂದು ಈಗ ಗೊತ್ತಾಗಿದೆ !
' ಕಾಣೆ ಯಾದವರ ಬಗ್ಗೆ ಪ್ರಕಟಣೆಗಳು' ಕಾರ್ಯಕ್ರಮವೇ ಕಾಣೆಯಾಗಿದೆ !
ಕಾಲ ಸರಿದಿದೆ ಎನ್ನುವುದರ ಸಾಕ್ಷಿ ಬದಲಾವಣೆ. ಬದಲಾವಣೆಇಂದ ಪ್ರಯೋಜನವಿದ್ದರೆ ಅಥವಾ ಅನಿವಾರ್ಯವಾದಲ್ಲಿ ಬದಲಾಗುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಅನಿಸಿಕೆ. 'ನಮ್ಮ ಕಾಲದಲ್ಲಿ......' ಅಂತ ಮುಂದಿನ ತಲೆಮಾರಿಗೆ ನೆನಪಿಟ್ಟುಕೊಂಡು ಹೇಳಲು ಈ ಬರಹ.
ಹಂಸಲೇಖರವರು ಹೇಳಿದಂತೆ "ನೆನ್ನೆ
ಮೊನ್ನೆಗಳೆಲ್ಲ ಅಟ್ಟದ ಮೇಲಿವೆ ಅಂತಲೇ ನಂಬಿ "
ಮೇಲಿನಿಂದ ಕೆಳಗಿಳಿಸಬೇಕಾದವರೂ ನಾವೇ....ಆಗತ್ತಾ..?
ReplyDeleteಚೆನ್ನಾಗಿದೆ ಲೇಖನ....
ಪ್ರಯತ್ನ ಪಡೋಣ ದಿನಕರ್ ಅವರೇ ಧನ್ಯವಾದಗಳು
Deleteತುಂಬ ಮಜವಾದ ಬರಹ. ಈಗೀಗ ಮನೆಯ ಹೊರಗಿನ ಜಾಗವನ್ನು ಆಕ್ರಮಿಸುತ್ತಾರೆ ಎನ್ನುವ ನಿಮ್ಮ observationಅನ್ನು ಹಾಗು civil senseಅನ್ನು ಮೆಚ್ಚಲೇ ಬೇಕು.ಇನ್ನು ಕಾಲ ಬದಲಾಗಿದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸರಿ!
ReplyDeleteಧನ್ಯವಾದಗಳು ಕಾಕಾ
Deleteನನಗೆ ನನ್ನ ಹಳ್ಳಿ ಮನೆಯ ಪರಿಸರವನ್ನು ನೆನಪಿಸಿದ ಈ ಬರಹ ನನ್ನ ಕಣ್ಣ ಅಂಚಲ್ಲೇಕೋ ಹನಿ ಮೂಡಿಸಿತು.
ReplyDeleteಈಗ ಹಳ್ಳಿ ಮನೆ ಮನೆಯಲೂ ಟೀವಿಯ ಡಿಷ್.
ಹ್ಮ್ , ಕೆಲ ವಿಷಯಗಳೇ ಹಾಗಲ್ಲವೇ ಸರ್. ಧನ್ಯವಾದಗಳು
Deleteಚೆನ್ನಾಗಿದೆ .ಹಳೆಯ ಆಲ್ಯೂಮಿನಿಯಂ ಹೊಸ ಸಿಲಿಂಡರಿನ ಬೆಂಕಿಗೆ ಕಳೆದೊಯ್ತು...
ReplyDeleteಹಾಂ ಮತ್ತೊಂದು ಹಳೆಯ ಕಾಲದ ಮರದ ಪಾತ್ರೆಗಳ ಮೇಲಿನ ಆ ಕುಶಲ ಕಲೆ ನೋಡಲು ಕಣ್ಣೆಗೆ ಎಷ್ಟು ಚಂದ..ಇವುಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ಎಲ್ಲೋ ಓದಿದ್ದೆ..ಅವಶ್ಯಕವಾದ ಪ್ರಯತ್ನ ಅದು..
ಹಮ್..ಚೆನಾಗಿತ್ತು..
ಚಿತ್ರಗಳನ್ನೂ ಚೆನ್ನಾಗಿ ಆರಿಸಿದ್ದೀರಿ..
ಬರೆಯುತ್ತಿರಿ .
ನಮಸ್ತೆ
ಧನ್ಯವಾದಗಳು ಚಿನ್ಮಯ್
Deleteಸ್ವರ್ಣಕ್ಕ Thanks for dis article....ಇದರಲ್ಲಿ ಕೆಲವನ್ನ ನಾನು ಚಿತ್ರದಲ್ಲಿ ಮಾತ್ರ ನೋಡಿದ್ದೇನೆ.ಅಟ್ಟ ಸೇರುವ ಇಂತಹ antique ಪರಿಕರಗಳಿಗೆ ಧೂಲಿಡಿಯುವ ವರೆಗೂ ಒಂಥರಾ ರಾಜ ಮರ್ಯಾದೆ ಎನ್ನಬಹುದು.ಹಂ ನಿಮ್ಮ ಮಾತು ನಿಜಾ ದೊಡ್ದವರೇ ಹೆಚ್ಚು ದಾರಿ ಮರಿಯುವುದು.:-)
ReplyDeleteನಿಮ್ಮ ಪ್ರತಿಕ್ರಿಕೆಯೆಗೆ ಧನ್ಯವಾದಗಳು ವೈಶು :)
ReplyDeleteನಮ್ಮಮ್ಮ ಯಾವಾಗಲೂ ಹೇಳೋದು...ಮಣ್ಣಿನ ಪಾತ್ರೆಲಿ ಮಾಡಿದ ಅಡಿಗೆ ಊಟ ಮಾಡ್ತಾ ಇದ್ರೆ ಈಗಿನ ಹೊಸ ಹೊಸ ಪಾತ್ರೆಗಳ ಅಡಿಗೆನ ನೀನು ಮೂಸೋಕು ಹೋಗ್ತಾ ಇರ್ಲಿಲ್ಲ ಅಂತ....ಅದ್ಕೆ ಅನ್ನೋದು ಅನ್ಸುತ್ತೆ ಓಲ್ಡ್ ಇಸ್ ಗೋಲ್ಡ್ ಅಂತ....ಕೆಲವು ವಸ್ತುಗಳು, ಉಪಕರಣಗಳು ಕೇವಲ ನೆನಪಾಗಿ ಬಿಟ್ಟಿವೆ....ಸೌದೆ ಹಾಕಿ ಉರಿಸುವ ಓಲೆ ಹೋಗಿ, ಗ್ಯಾಸ್ ಒಲೆ ಬಂತು...ಈಗ ನೋಡಿ ವಿದ್ಯುತ್ ಚಾಲಿತ ಒಲೆ ಗಳು ಶುರು ಆಗಿವೆ.....ಉಪಯುಕ್ತ ಲೇಖನ.....
ReplyDeleteಹೌದು ಸರ್ , ಹಿತ್ತಾಳೆ ಪಾತ್ರೆಲಿ ಇದ್ದಿಲು ಒಲೆಲಿ ಮಾಡಿದ ಹುಳಿಯೇ ಹುಳಿ ಹೇಳೋದನ್ನೂ ಕೇಳಿದ್ದೇನೆ ಧನ್ಯವಾದಗಳು
Deleteಸೋದರಿ, ಒಳಮನಕ್ಕೆ ಲಗ್ಗೆಯಿಟ್ಟಿರುವಿರಿ. ಇಂತಹ ಲೇಖನಗಳು ಇನ್ನಷ್ಟು ಬರಲಿ.
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Delete