![]() |
| ಚಿತ್ರಕೃಪೆ : ಅಂತರ್ಜಾಲ |
ಹಚ್ಚಡ ಹೊದಿಸಿ ಅಪ್ಪ ಅಮ್ಮ ಆಡಲು ಬಿಟ್ಟರು
ಕೈಗಿಷ್ಟು ಬಣ್ಣ ಬಣ್ಣದ ಆಟಿಕೆ ಕೊಟ್ಟರು
ಮತ್ತೆ ಜೊತೆಗಾಡಲು ಆರ್ವರು
ನನಗೆ ತಿಳಿದಿರಲೇ ಇಲ್ಲ ಅಂದು
ರಾತ್ರಿ ಕಳೆದರೆ ತಾರೆ ಮರೆಯಾಗುವಳೆಂದು
ಗೆಳೆಯ ಗೆಳತಿಯರು ಕೂಡಿ ಆಡಿ
ಬಂಧು ಬಾಂದವರೊಡನೆ ಮೋಜು ಮಾಡಿ
ಆರ್ವರೊಡನೆ ಬಾಳ ಬಂಡಿ ಹೂಡಿ
ನನಗೆ ತಿಳಿದಿರಲೇ ಇಲ್ಲ ಅಂದು
ನೇಹಗಳು ದೂರಾಗುವುವೆಂದು
ಬರಬರುತ್ತಾ ಆಟವಾಯ್ತು ಕಷ್ಟ
ಆದರೂ ನನಗಾಗಿತ್ತದು ಬಹು ಇಷ್ಟ
ಆರ್ವರ ಸಂಗದಲ್ಲಿ ಕಾಣಲೇ ಇಲ್ಲ ನಷ್ಟ
ನನಗೆ ತಿಳಿದಿರಲೇ ಇಲ್ಲ ಅಂದು
ಹಚ್ಚಡ ಸವೆಯುತ್ತಿದೆ ಎಂದು
ಇಂದು ಹಚ್ಚಡದಲ್ಲಿ ಬರೀ ತೇಪೆ ತುಂಬಿದೆ
ಆಟ ಮುಗಿವ ಸಮಯ ಬಂದಿದೆ
ಆರ್ವರಿಗೆ ಎಲ್ಲ ಗೆಲುವು ಸಂದಿದೆ
ಅರಿವಾಗುತ್ತಿದೆ ನನಗಿಂದು
ಹಚ್ಚಡವ ನೆಚ್ಚ ಬಾರದಿತ್ತೆಂದು !

ಸ್ವರ್ಣಾ,
ReplyDeleteತುಂಬಾ ತುಂಬಾ ಸುಂದರವಾದ ರಚನೆ. ಹಚ್ಚಡದ ಹಿಂದೆ ಮುಚ್ಚಿದ ಭಾವ! ಭಾವಕ್ಕೆ ತಕ್ಕ ಸಂಯಮದ ಛಂದಸ್ಸು. ನಿಮಗೆ ಅನೇಕ ಅಭಿನಂದನೆಗಳು.
ಧನ್ಯವಾದಗಳು ಕಾಕಾ
Deleteಹಚ್ಚಡದ ಸುತ್ತ ಹೆಣೆದ ಈ ಕವನದಲ್ಲಿ ಹಲವು ಜೀವನ ಪಾಠಗಳಿವೆ.
ReplyDeleteಪ್ರತಿ ಚರಣದ ಕಡೆಯ ಸಾಲು ಹೇಳುವ ಅನನ್ಯ ವಿಷಾದವು ಅನಿವಾರ್ಯ ಕರ್ಮ ಅಲ್ಲವೇ?
ಅತ್ಯುತ್ತಮ ಕವನ ಓದಿದ ಖುಷಿ ನನಗಾಯಿತು.
ಧನ್ಯವಾದಗಳು ಬದರಿ ಸರ್.
Deleteಸ್ವರ್ಣಕ್ಕ
ReplyDeleteತುಂಬಾ ತುಂಬಾ ಹಿಡಿಸಿತು ನಿಮ್ಮಿ ಭಾವ ಮಂಥನ.ಪ್ರತಿಯೊಂದು ಸಾಲು ಇಷ್ಟವಾಯ್ತು.Fantastically penned.take a bow!:-)
That's very sweet of you thank you :)
Delete