ವಾರದಲ್ಲಿ ಮೂರು ಬಾರಿ ಸಿಕ್ಕವ ಹೊರಟು ಹೋಗಿದ್ದ. ಕೆಲ ದಿನ ಊರೇ ಖಾಲಿಯಾದಂತೆನಿಸಿತ್ತು.
"तुम्हारी सदा बिन नहीं एक सुनी मोरी नगरिया.... "
" वह चलें तो साथ चांदनी भी चलती हैं,
कम्बक्त , अपना साया भी हामारे साथ नहीं देता "
ವರ್ಷಗಳ ನಂತರದ ಭೇಟಿ ವರ್ಷಗಳಿಗಾಗುವಷ್ಟು ನೋವನ್ನು ಕೊಟ್ಟಿತ್ತು. ಆದರೆ ಕಾಲೇಜು, ಕೆಲಸ ಅಂತ ತೊಡಗಿಕೊಳ್ಳಲು ಪ್ರಯತ್ನಿಸಿದೆ. ಪ್ರಶ್ನೆಗೆ ಉತ್ತರ ಹುಡುಕಲೇ ಬೇಕೇ ?ಎಂಬ ತಾಕಲಾಟ ಕೆಲ ದಿನ ಇದ್ದದ್ದು ನಿಜ. ಆದರೆ ಅವ್ಯಕ್ತವಾದದನ್ನ ಬಹುಕಾಲ ಆರಾಧಿಸಲು ಬೇಕಾದ ಮನಃ ಸ್ಥಿತಿ ನನಗಿರಲಿಲ್ಲ. ಆದ್ದರಿಂದ ಅವನ ನೆನಪಿಂದ ದೂರ ಇರುವುದೇ ಒಳ್ಳೆಯದು ಎಂಬ ನಿರ್ಧಾರವೇ ಸರಿ ಅಂತ ಮತ್ತೊಮ್ಮೆ ಅನ್ನಿಸಿತು. ದಶಕಕ್ಕೂ ಮೀರಿದ ಪರಿಚಯವನ್ನ ಮರೆವುದು ಅಷ್ಟು ಸುಲಭವಾಗಿರಲಿಲ್ಲ. ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಇದ್ದರೂ ಅದನ್ನು ಶಾಸ್ತ್ರೀಯವಾಗಿ ಕಲಿವ ಪ್ರಯತ್ನ ನಾನ್ಯಾವತ್ತೂ ಮಾಡಿರಲಿಲ್ಲ. ಈಗದಕ್ಕೆ ಕಾಲ ಕೂಡಿ ಬಂತು. ಸಮಸ್ಯೆಯೊಂದು ಎದುರಾದಾಗ ಮಾನವ ಬದಲಾಗುತ್ತಾನೆ, ಹೊಸ ದಾರಿ ಹುಡುಕುತ್ತಾನೆ, ಎತ್ತರಕ್ಕೇರುತ್ತಾನೆ . ಅದಕ್ಕೆ ಕೃಷ್ಣ ಏನು ಬೇಕೆಂದಾಗ ಕುಂತಿ ಕಷ್ಟಗಳೇ ಬರುತಿರಲಿ ಅಂದಳೇನೋ ? ಅವನ ವಿಷಯವನ್ನ ಮರೆಯುವುದರಲ್ಲಿ ಚಿತ್ರಕಲೆಯ ಪಾಠ , ಕಾಲೇಜು, ಮಕ್ಕಳೊಂದಿಗಿನ ಕೆಲಸ ಎಲ್ಲ ಸಹಾಯ ಮಾಡಿದ್ದವು.ಇಷ್ಟೆಲ್ಲಾ ಆದರೂ ಯಾಕೋ ನನ್ನ ಅವನ ಪರಿಚಯದ ಬಗ್ಗೆ ನಾನೆಲ್ಲೂ ತುಟಿ ಬಿಚ್ಚಲಿಲ್ಲ.
ಸುಮಾರು ತಿಂಗಳ ನಂತರ ನನ್ನ ಮೊಬೈಲ್ಗೆ ಒಂದು ಕರೆ ಬಂತು. ತೆರೆಯ ಮೇಲೆ ಬರಿ ನಂಬರ್ ಮಾತ್ರ ತೇಲುತ್ತಿದ್ದರಿಂದ ಯಾರಿರಬಹುದು ಎಂಬ ಕುತೂಹಲದೊಂದಿಗೆ ನಾನು ಕರೆ ಸ್ವೀಕರಿಸಿದೆ.
ಧನಿ ಕೇಳಿ ಬೆಚ್ಚುವುದೊಂದೇ ಬಾಕಿ.
"ಏನ್ ಮೇಡಂ ಬ್ಯುಸಿ ಇದ್ದೀರಾ ?" ಸೀದಾ ಮಾತಿಗಿಳಿದಿದ್ದ.
"ಇಲ್ಲ ಹೇಳು, ನನ್ನ ನಂಬರ್ ನಿಂಗೆ ಹೇಗೆ ಸಿಕ್ತು?"
"ಬೇಕು ಅಂದ್ರೆ ಮಾಧುರಿ ದೀಕ್ಷಿತ್ ನಂಬರ್ ಸಿಗತ್ತೆ, ನಿಂದೇನು ಮಹಾ" ಅಂದ.
"ಈಗ ಮಾಧುರಿ ಅಂತ ತಪ್ಪಿ ನನಗೆ ಮಾಡಿದ್ದ?" ಮೊದಲ ಬಾರಿ ಅವನ ಮಾತಿಗೆ ಮಾತು ಸೇರಿಸಿದ್ದೆ ನಾ.
ನನ್ನ ತಾಕಲಾಟಗಳು ಅವನ ಮೇಲಿನ ಸಿಟ್ಟಾಗಿ ಪರಿವರ್ತನೆಯಾಯ್ತೆ? ಜೋರಾಗಿ ನಕ್ಕ, ಅವನ ನಗೆಯ ಮುಂದೆ ಬದುಕಿನೆಲ್ಲ ಸಂತಸಗಳು ಗೌಣ.
"ಇಲ್ಲ ನೀನು ಅಂತ ಗೊತ್ತಿದ್ದೇ ಮಾಡಿದ್ದು, ನನ್ನ ಮೊದಲ ವರ್ಷ ಮುಗಿಯಿತು."
ಉತ್ತಮ ಅಂಕಗಳೊಡನೆ ತೇರ್ಗಡೆಯಾಗಿದ್ದ.
"ಕಂಗ್ರಾಟ್ಸ್"
"ಹಾಂ"
ಒಂದಷ್ಟು ಕುಶಲೋಪರಿ ಮಾತಾಡಿ "ಇದು ನನ್ನ ನಂಬರ್"
"ನಂಗೆ ನಿನ್ನ ನಂಬರೇ ಹುಡುಕೋಕೆ ಆಗಲ್ಲ, ಶಾರುಖ್ ಖಾನ್ ಮಾತು ದೂರ ಬಿಡು" ಅಂದೆ.
ಮತ್ತೆ ನಕ್ಕು "ಬೈ" ಅಂತ ಕರೆ ಕಟ್ ಮಾಡಿದ.
ನಾ ಬಿಡಿಸಲು ಪ್ರಯತ್ನ ಪಡುತ್ತಿದ್ದ ಗಂಟನ್ನ ಮತ್ತೆ ಹೆಣೆದು ಗಂಟು ಹಾಕಿದ್ದನೆಂಬುದು ನನ್ನ ಭ್ರಮೆಯೇ ?
ಪರಿಚಿತರ ವಲಯಗಳಲ್ಲಿ ಫೋನ್ ನಂಬರ್ ಹುಡುಕುವುದು ಕಷ್ಟವಲ್ಲ, ಆದರೆ ಇಂದೇಕೆ ಫೋನ್ ಮಾಡಿದ ? ಇಷ್ಟು ವರ್ಷ ಇಲ್ಲದ್ದು ಈಗೇಕೆ ? ಬಹುಶಃ ಎಂ.ಬಿ.ಬಿ.ಎಸ್. ನಲ್ಲೂ ಕೆಲವು ಬಾರಿ ಒಳ್ಳೆ ಅಂಕ ಬಂದಿರಬಹುದು. ಆಗೆಲ್ಲ ಫೋನ್ ಮಾಡದವ ಈಗೇಕೆ ಮಾಡಿದ ? ಬಹು ಬಾರಿ ಹೆಣ್ಣಿನ ತಾಕಲಾಟಗಳು ಒಂಥರಾ ಆಡಲಾಗದು ಅನುಭವಿಸಲಾಗದು ಅಂತಾರಲ್ಲ ಹಾಗಿರುತ್ತವೆ. ಗಂಡಿಗೂ ಹಾಗೆ ಇರುತ್ತವೇನೋ ? ಅವನ ಮನಸಲ್ಲೆನಿದೆ ಅಂತ ತಿಳಿಯಬೇಕೆ ? ಅವನ್ಯಾವತ್ತೂ ನನ್ನೊಂದಿಗೆ ವಿಶೇಷವಾಗಿ ವ್ಯವಹರಿಸಿಲ್ಲ. ಹುಟ್ಟುಹಬ್ಬಕ್ಕೆ ಒಂದು ಮೆಸ್ಸೇಜ್ ಮಾಡಿಲ್ಲ, ವ್ಯಾಲನ್ ಟೈನ್ ದಿನದ ಬಗ್ಗೆ ಯೋಚಿಸುವ ಮಾತು ದೂರ ದೂರ. ದಶಕಕ್ಕೂ ಮೀರಿದ ಪರಿಚಯಕ್ಕೆ ಇಂದೇ ನಾನವನೊಂದಿಗೆ ಫೋನ್ನಲ್ಲಿ ಮಾತಾಡಿದ್ದು.ಫೋನ್ ಮಾಡಿದ್ದನ್ನೇ ವಿಶೇಷ ಅನ್ನುವುದಾದರೆ ನನ್ನ ಗೆಳತಿಗೂ ಮಾಡಿದ್ದ . "ಅಗಣಿತ ತಾರ ಗಣಗಳ ನಡುವೆ ನಿನ್ನನೆ ಹುಡುಕಿದೆ ನಾನು" ಎನ್ನುವ ಸ್ಥಿತಿ. ಇದನ್ನ ಅವನಿಗೆ ಹೇಗೆ ವಿವರಿಸುವುದು ? ಪ್ರೀತಿ ಎಂಬ ಹೆಸರು ಕೊಟ್ಟರೆ ? " ಈಗಾಗಲೇ ನನ್ನ ಕಾಲೇಜಿನಲ್ಲಿ ನನ್ನಂತೆಯೇ ಮೆಡಿಕಲ್ ಓದುತ್ತಿರುವ ಹುಡುಗಿಯರು ಬೇಕಾದಷ್ಟು ಜನ ನನಗೆ ಇದನ್ನ ಹೇಳಿದ್ದಾರೆ " ಅಂದರೆ ? ಮೆಡಿಕಲ್ ಓದಿದ್ದರೆ ಪ್ರಶ್ನೆ ಕೇಳಬಹುದಿತ್ತೆ ? ಕನಿಷ್ಠ ಎಂಜಿನಿಯರಿಂಗ ಮಾಡಿದ್ದರೆ ಚೆನ್ನಾಗಿತ್ತೆ? ಅವನ್ಯಾವತ್ತೂ ತಾನು ಮೆಡಿಕಲ್ ಓದುತ್ತಿರುವ ಬಗ್ಗೆ , ತನ್ನ ಹಣ ಕಾಸಿನ ಸ್ಥಿತಿಯ ಬಗ್ಗೆ ಗರ್ವ ಪಟ್ಟಿದ್ದನ್ನ ನಾ ನೋಡಿರಲಿಲ್ಲ, ಹಾಗಾಗಿದ್ದರೆ ಅವನ ನೆನಪಿಷ್ಟು ಕಾಡುತ್ತಲೇ ಇರಲಿಲ್ಲವೇನೋ ? ವಯಸ್ಸೇಷ್ಟಾದರೂ ಪ್ರೀತಿ ಎಂಬ ಮಾಯೆ ಮತ್ತೆ ಹರೆಯಕ್ಕೆ ದೂಡುತ್ತದೆ.
ಎಲ್ಲ ಮುಗಿದ ಮೇಲೆ ಉಳಿದ ನೆನಪು ಅವ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದಾನೆ. ದೇವರಲ್ಲಿ ಅಚಲವಾದ ನಂಬಿಕೆ ಇಟ್ಟವಳಲ್ಲ ನಾನು. ಯಾವಾಗಲೋ ಮನಸ್ಸು ಬಂದಾಗ ಕಂಡ ದೇವರನ್ನ ಮೊರೆ ಹೋಗಿದ್ದು ಬಿಟ್ಟರೆ ದೇವರಿಗೂ ನನಗೂ ಅಂಥಾ ನಂಟೇನಿರಲಿಲ್ಲ . ಆದರೆ ಒಮ್ಮೆ ಅವ ನಾನು ಕ್ಲಿಯರ್ ಮಾಡ್ಲಿಲ್ಲ ಅಂದಾಗ, ಅವನ ಕಣ್ಣಲ್ಲಿರುತ್ತಿದ್ದ ನಗೆಯ ಮಿಂಚಿನ ಸ್ಥಳದಲ್ಲಿ ನೋವ ಎಳೆ ಇದ್ದದ್ದು ಯಾಕೋ ನೆನಪಿಂದ ಮಾಸಿರಲಿಲ್ಲ. ಅಂದವನ ಭೇಟಿಯಾದ ನಂತರ ಒಂದು ಗುಡಿಯ ಆವರಣಕ್ಕೆ ಸುಮ್ಮನೆ ಹೋಗುತ್ತಿದ್ದೆ. ಅವನ ನಗೆ ಮಾಸದಿರಲಿ ಎಂಬ ಪ್ರಾರ್ಥನೆ ಇತ್ತೇ ? ಗೊತ್ತಿಲ್ಲ. ಆವರಣದ ಒಂದು ಅಶ್ವತ್ಥ ಮರದ ಬಳಿ ಸುಮ್ಮನೆ ಕೂತಿರುತ್ತಿದ್ದೆ. ಇಂದೇಕೋ ಮತ್ತೆ ಅಲ್ಲಿಗೆ ಹೋದೆ. ಬದುಕಿನ ಕೆಲ ಘಟ್ಟಗಳಲ್ಲಿ ಮಾನವರಿಗೆ ಅರ್ಥವಾಗದ ನೋವುಗಳನ್ನ ಮನುಷ್ಯ ಕಾಣದೊಂದು ಶಕ್ತಿಯ ಮುಂದೆ ತೋಡಿಕೊಳ್ಳುತ್ತಾನೆ. ನೀರಿನಲ್ಲಿಲ್ಲದ ಬಿಂಬ , ಒಮ್ಮುಖವಾಗಿ ಹೆಣೆದ ನವಿರಾದ ಕನಸುಗಳು ಇವೆಲ್ಲ ಅರ್ಥವಾಗುವ ಮನುಷ್ಯರು ವಿರಳ.
ಆಗೊಮ್ಮೆ ಈಗೊಮ್ಮೆ ಎಲ್ಲೋ ಕಂಡವನಿಗೆ ನಾನೆಂದರೆ ಇಷ್ಟ, ಅವ ನನ್ನ ಮದುವೆಯಾಗ್ತಾನೆ ಅಂತ ಹರೆಯ ದಾಟಿರುವ ಹುಡುಗಿ ಇರಲಿ, ಹರೆಯದಲ್ಲಿದ್ದವಳೂ ಯೋಚಿಸಲಾರಳಲು. ತಂದೆ ತಾಯಿ ಹುಡುಗನ ನೋಡುವ ತಯಾರಿಯಲ್ಲಿದ್ದರು. ಕೆಲ ಬಂಧಗಳು ಎಲ್ಲಿಗೂ ಮುಟ್ಟಲಾರವು. ನಾನ್ಯಾವ ಹುಡುಗನನ್ನೂ ಭೇಟಿ ಮಾಡಿರಲಿಲ್ಲ. ಇನ್ನೂ ಚಿತ್ರ ಕಲೆ, ಕಾಲೇಜು, ಮಕ್ಕಳು ಅನ್ನೋ ಲೋಕದಲ್ಲಿದ್ದೆ. ಬದುಕು ಮುನ್ನಡೆದಿತ್ತು. ಅವನ ಮೊಬೈಲ್ ನಂಬರನ್ನ ಅಳಿಸಿಯಾಗಿತ್ತು.
"ತನ್ಮಯಳಾದೆನು ಅರಿಯುವ ಮುನ್ನವೆ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೆ
ನಿನ್ನಲ್ಲೇ ಜೀವವನ್ನು ಅಡವಿಟ್ಟು ಬಂದೆ ನಾನು....
..........ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತಾ ನಾ ನಿಂತೆ.....
.....ನೆನಪನ್ನು ರಾಶಿ ಹಾಕಿ ಎಣಿಸುತ್ತ ಕೂರಲೇನು ? "

ಅವನು ಆಗಾಗ ಮಿಂಚಿ ಮರೆಯಾಗುವ ತಾರೆ.
ReplyDeleteಕಾಯುವಿಕೆಯ ಹುಡುಗಿ, ನೋವ ಗೆರೆಯಲ್ಲೂ ಒಳ್ಳೆಯ ಬೆಳಕನೇ ಅರಿಸುವ ಜೀವ.
ಅಂತೂ ಮೊಬೈಲ್ ನಂಬರ್ ಹುಡುಕಿದನಲ್ಲ, ಅನ್ನುವುದಕ್ಕಿಂತ ಮೊದಲೇ ಯಾಕೆ ಹುಡುಕಲಿಲ್ಲ ಎಂದು ಆಕೆಯ ತಳಮಳ.
ದೃಶ್ಯ ಕಟ್ಟಿಕೊಡುವುದರಲ್ಲಿ ನಿಮಗೆ ನೀವೇ ಸಾಟಿ.
ಧನ್ಯವಾದಗಳು ಬದರಿ ಸರ್.
Deleteಸ್ವರ್ಣಾ,
ReplyDeleteಹರಿಯುತ್ತಿರುವ ಮನಸ್ಸನ್ನು ಹಿಂಬಾಲಿಸುತ್ತಿರುವ ನಿಮ್ಮ ಲೇಖನಿ ತುಂಬ ಸೊಗಸಾಗಿ ಬರೆಯುತ್ತಿದೆ.
"ತನ್ಮಯಳಾದೆನು ಅರಿಯುವ ಮುನ್ನವೆ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೆ"
ಎನ್ನುವ ಈ ಸಾಲು ಕಿಶೋರಪ್ರೇಮದ ಹಾಗು ತನ್ನಂತರದ ಅವಸ್ಥೆಯ ಸಾರ್ಥಕ ವರ್ಣನೆಯಾಗಿದೆ.
ಹೋದ ಸಲ ಪ್ರತಿಕ್ರಿಯಿಸುವಾಗ ಕನ್ನಡ fonts ಇರದ ಗಣಕಯಂತ್ರದಲ್ಲಿ ಬರೆಯುವುದು ಅನಿವಾರ್ಯವಾಗಿತ್ತು. ಅಲ್ಲಿ ನಾನು ಸೂಚಿಸಿದ ಶೈಲಿಗೆ ಕನ್ನಡದಲ್ಲಿ ‘ಪ್ರಜ್ಞಾಪ್ರವಾಹ ಶೈಲಿ’ ಎಂದು ವಿಮರ್ಶಕರು ಕರೆದಿದ್ದಾರೆ.
ಕಾಕಾ, ಶೈಲಿಯ ಬಗ್ಗೆ ತಿಳಿಸಿದ್ದಕ್ಕಾಗಿ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು.
Deleteಇದು ಬರೆಯುತ್ತಾ ಹೋದಂತೆ ತನ್ನಷ್ಟಕ್ಕೆ ತಾನೇ ಹುಟ್ಟಿದ ಶೈಲಿ,
ಇನ್ನಷ್ಟು ತಿಳಿಯಲು ಪ್ರಯತ್ನಿಸುತ್ತೇನೆ.