ಮೊದಲ ಪ್ರೀತಿಗೆ ಕನ್ನಡದಲ್ಲೊಂದು ಸುಂದರ ಪದವಿಲ್ಲವೇ? ಇದು ಅವನನ್ನ ಈ ಬಾರಿ ಕಂಡಾದ ಮೇಲೆ ಅವನಿಗಿಂತಲೂ ಹೆಚ್ಚು ಕಾಡಿದ ಪ್ರಶ್ನೆ. ಹಿಂದಿಯಲ್ಲಿ 'ಪೆಹಲ ಪ್ಯಾರ್' ಅಂತರಾಲ್ಲ ಹಾಗೆ.
"ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು "
ಅವ ಬದಲಾಗಿದ್ದ, ಈಗ ಹಿಂಜರಿಕೆ ಇಲ್ಲದೇ ಮಾತಾಡುತ್ತಿದ್ದ. ಮೊದಲೆಲ್ಲ ಅವನ ವಾಕ್ಯಗಳು ಪೂರ್ತಿಯಾಗುತ್ತಲೇ ಇರಲಿಲ್ಲ, ಮೊನ್ನೆ ಅದೆಷ್ಟು ಸುಲಲಿತವಾಗಿ ಮಾತಾಡಿದ. ಆ ದಿನ ಹೋಟೆಲ್ನಲ್ಲಿ ಕಾಫಿ ಮುಗಿದ ಕೂಡಲೇ ಏಳುತ್ತಾನೆ ಅಂತ ನಾನೆದ್ದರೆ ನಾನು ತಿಂಡಿ ತೊಗೋತೀನಿ ಅಂತ ಮತ್ತೆ ಆರ್ಡರ್ ಮಾಡಿ ಕೂತ. ಅವನ ಕಾಲೇಜ್ ಬಗ್ಗೆ ಅದೇನೋ ಹೇಳುತ್ತಿದ್ದ. ಅವನಿದ್ದ ಊರಿನ ಸುತ್ತ ಹಲವಾರು ಪ್ರೇಕ್ಷಣೀಯ ಸ್ಥಳಗಳಿದ್ದವು. ಅದರ ವಿವರದಿಂದ ಕ್ರಿಕೆಟ್ ವರೆಗೆ ಎಲ್ಲದರ ಬಗ್ಗೆ ಮಾತಾಡಿದ್ದ. ಅವನಿಗಷ್ಟು ಮಾತು ಬರತ್ತೆ ಅಂತ ನನಗೆ ತಿಳಿದದ್ದೇ ಆವತ್ತು! ನಿಧಾನವಾಗಿ ಒಂದೊಂದೆ ವಾಕ್ಯ ಮಾತಾಡುತ್ತಿದ್ದ ಆದರೆ ಎಲ್ಲದರಲ್ಲೂ ಖಚಿತತೆ ಇತ್ತು. ಎಂ.ಡಿ ಮುಗಿಸಿ ಯಾವ ಊರಿನಲ್ಲಿ ಸೆಟ್ಲ್ ಆಗ ಬೇಕು, ಯಾವ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕು, ಯಾವ ಕಾಲೇಜ್ ನಲ್ಲಿ ಲೆಕ್ಚರರ್ ಆಗಬೇಕು ಎಲ್ಲ ನಿರ್ಧರಿಸಿದವನಂತೆ ಮಾತಾಡುತ್ತಿದ್ದ. "ಯಾರ ಜೊತೆ ಸೆಟ್ಲ್ ಆಗ್ತಿಯ?" ಅಂತ ಕೇಳಬೇಕು ಅನ್ನಿಸಿದರೂ ಯಾಕೋ ಕೇಳಲಾಗಲಿಲ್ಲ. ಅವ ಹೇಳಿದ್ದ ಊರಿನಲ್ಲಿ ಒಂದು ಪ್ರಸಿಧ್ಧ ಚಿತ್ರ ಕಲಾ ಶಾಲೆ ಇತ್ತು. ಅಲ್ಲಿ ಕಲಿಯ ಬೇಕೆಂಬುದು ನನ್ನ ಬಾಲ್ಯದ ಕನಸು. ಅದನ್ನ ಅವನಿಗೆ ಹೇಳಿದ್ದಕ್ಕೆ "ಗೊತ್ತು ನೀನೊಮ್ಮೆ ಹೇಳಿದ್ದಿ " ಅಂದು "ಈಗಲೂ ಹೋಗಿ ಕಲೀ ಬಹುದಲ್ಲ? " ಅಂತ ಸೇರಿಸಿದ. ಒಂದು ಘಂಟೆಗೂ ಮೀರಿತ್ತು ಅಂದಿನ ಭೇಟಿ. ಅದರಲ್ಲಿ ಮುಕ್ಕಾಲು ಘಂಟೆಗೂ ಹೆಚ್ಚು ಹೊತ್ತು ಅವ ಮಾತಾಡಿದ್ದ.ಮುಗಿದ ಹರೆಯ ಇದಕೆ ಕಾರಣವೇನೋ ಅಂತ ಸ್ವಲ್ಪ ಹೊತ್ತು ಅನ್ನಿಸಿದರೆ ಮತ್ತೆ ಕೆಲಹೊತ್ತು ಅವನು ನಮ್ಮ ಸ್ನೇಹವನ್ನ ತುಂಬಾ ಕ್ಯಾಶ್ಯುಯಲ್ ಆಗಿ ತೊಗೊಂಡಿದಾನೆ ಅನ್ನೋ ಅನುಮಾನ ಕಾಡಿ ತುಂಬಾ ನೋವುಂಟು ಮಾಡುತ್ತಿತ್ತು.
ಈ ಬಂಧಕ್ಕೊಂದು ಹೆಸರ ಹಂಗೇಕೆ ಎಂದು ಇಷ್ಟುವರ್ಷ ನಾ ನನ್ನದೇ ಭಾವ ಲೋಕ ಸೃಷ್ಟಿಸಿದ್ದೆ. ಆದರೀಗ ಕೆಲ ಪ್ರಶ್ನೆಗಳಿಗೆ ಉತ್ತರ ಹುಡುಕಲೇ ಬೇಕಿತ್ತು. ಹಲವು ಬಾರಿ ಹುಡುಗ ತನ್ನ ಸಂಗಾತಿಯನ್ನ ಆಯ್ಕೆ ಮಾಡಲು ತೆಗೆದು ಕೊಳ್ಳುವ ಸಮಯ ಹುಡುಗಿ ತೆಗೆದುಕೊಳ್ಳುವ ಸಮಯಕ್ಕಿಂತಲೂ ಹೆಚ್ಚು. ಆಯ್ಕೆಗಳು ಹೆಚ್ಚಾದ ಹಾಗೆ ತೆಗೆದು ಕೊಳ್ಳುವ ಸಮಯವೂ ಹೆಚ್ಚು. ಅವ ನಾಲ್ವರಲ್ಲಿ ಎದ್ದು ಕಾಣುವಂತಿದ್ದವ, ಮೆಡಿಕಲ್ ಕಾಲೇಜ್ ನೋಡಿದ, ಅದೆಲ್ಲೆಲ್ಲಿಂದಲೋ ಬಂದು ಇಲ್ಲಿ ಕಲಿವ ಸುಂದರ ಹುಡುಗಿಯರು, ಅವರ ವೇಷ ಭೂಷಣ , ಹಾವ ಭಾವ ಎಲ್ಲವೂ ಬೇರೆ. ಈಗ ಓದಲು ಬೇರೆ ಊರಿಗೆ ಹೋಗಿದ್ದಾನೆ, ಬದುಕಿನ ಎಲ್ಲ ಸೌಕರ್ಯಗಳನ್ನೂಕೇಳುವ ಮುಂಚೆ ಪಡೆದವ. ಸೌಕರ್ಯಗಳು ಕನಸುಕಾಣುವ ಶಕ್ತಿಯನ್ನ ಹೆಚ್ಚು ಮಾಡುತ್ತವೆ. ಸೈಕಲ್ಲಿನಲ್ಲಿ ಬರುವ ಹುಡುಗನಿಗಿಂತ ಬೈಕಿನಲ್ಲಿ ಬರುವ ಹುಡುಗನಿಗೆ ಹುಡುಗಿ ಒಲಿಯುತ್ತಾಳೆಂಬ ವಿಶ್ವಾಸ ಹೆಚ್ಚು.
ಉತ್ತರ ಹುಡುಕಲು ಮೊದಲು ಆರಿಸಿಕೊಂಡ ದಾರಿ ರಾಶಿ ಫಲದ್ದು. ಹುಟ್ಟಿದ ತಾರೀಖಿನ ಮೇಲೆ ಮಾತ್ರ ಅವಲಂಬಿತವಾಗುವ ಸನ್ ಸೈನ್ ಎನ್ನುವ ಇಂಗ್ಲಿಷಿನ ರಾಶಿಗಳು ಯಾವ ರಾಶಿಗಳು ಯಾವ ರಾಶಿಗಳೊಡನೆ ಹೊಂದುತ್ತವೆ ಅಂತ ಕೆಲವು ಖ್ಯಾತನಾಮರು ಅಂದಾಜಿಸುತ್ತಾರೆ. ಒಮ್ಮೆ ಅಂತಹ ಒಂದು ಪುಸ್ತಕ ಲೈಬ್ರರಿಯಲ್ಲಿ ಕಣ್ಣಿಗೆ ಬಿತ್ತು. ಕೈಗೆತ್ತಿಕೊಂಡರೆ ಮೊದಲು ಕಣ್ಣು ಹೋದದ್ದೇ ನನ್ನ ಅವನ ರಾಶಿಗಳ ಹೊಂದಾಣಿಕೆಗಳ ಬಗ್ಗೆ. ಈ ಮದುವೆ ತುಂಬಾ ಸಫಲವಾಗತ್ತೆ ಹಾಗೆ ಹೀಗೆ ಅಂತ ಬರೆದದ್ದು ನೋಡಿ ಉಬ್ಬಿ ಹೋದೆ. ಬದುಕೆಲ್ಲ ಅವನ ನಗೆಯ ಕಾಣುವ ಕನಸನ್ನ ಆರಂಭಿಸುವ ಮೊದಲೆ, ಅವನ ರಾಶಿಯ ಹುಡುಗರ ವಿವರಗಳು ಕಂಡವು. ಮೊದಲ ಸಾಲು "ಈ ರಾಶಿಯವರ ನಗೆ ಅದೆಷ್ಟು ಆಕರ್ಷಕ ಅಂದರೆ ಅವರನ್ನ ಬೈಯ್ಯ ಬೇಕೆಂದು ಹೊರಟವರೂ ಅದಕೆ ಮಾರು ಹೋದಾರು" ಇದನ್ನ ಹೇಳಲು ಈ ಪುಸ್ತಕ ಬೇಕಿತ್ತೆ?. ನನಗದರ ಅನುಭವವೇ ಇದೆಯಲ್ಲ! ಮುಂದೆ ಕಾದಿತ್ತು ಕಹಿ ಸತ್ಯ. ಅವರಿಗೆ ತುಂಬಾ ಸುಂದರವಾದ ಹುಡುಗಿಯರು ಇಷ್ಟ, ನಾಲ್ಕು ಜನರ ಗುಂಪಲ್ಲಿ ಎದ್ದು ಕಾಣುವಂಥ ಹುಡುಗಿಯ ಕಡೆಗೆ ಅವರು ಆಕರ್ಷಿತರಾಗುತ್ತಾರೆ ಅನ್ನೋದನ್ನ ಓದಿ ತಳಪಾಯದ ಮುನ್ನ ಭೂಮಿ ಕುಸಿದ ಅನುಭವ.
ನನಗವನನ್ನ ಪರಿಚಯಿಸಿದ ಗೆಳತಿಯೂ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆಂದು ಬೇರೆ ಊರಿಗೆ ಹೋಗಿದ್ದಳು. ಎಷ್ಟೋ ಬಾರಿ ಅವಳು ಭೇಟಿಯಾದರೂ ಅವನ ವಿಷಯ ಬಂದಿರಲಿಲ್ಲ, ಅಥವಾ ಎಚ್ಚರಿಕೆಇಂದ ನಾನದನ್ನ ಬರಗೊಟ್ಟಿರಲಿಲ್ಲ. ಹುಡುಕುತ್ತಿದ್ದ ಉತ್ತರವೂ ನನ್ನನ್ನ ಹುಡುಕುತ್ತಿತ್ತೇನೋ ? ಒಂದೆರಡು ದಿನದಲ್ಲಿ ಆ ಗೆಳತಿ ಭೇಟಿಯಾದಳು. ಅವಳೇ ಅವನ ವಿಷಯ ತೆರೆದಳು. ಫೋನ್ ಮಾಡಿದ್ದ, ಎಂ.ಡಿ. ಸೀಟ್ ಸಿಕ್ಕಿದೆ ಅಂತೆ ಅಂದಳು. ಫೋನ್ ಮಾಡಿದ್ದ ಅಂದರೆ ಇವಳ ಫೋನ್ ನಂಬರ್ ಅವನ ಹತ್ತಿರ ವಿದೆಯೇ? ಅನ್ನೋ ವಿಷಾದಮುಗಿವ ಮುಂಚೆ ನಿನ್ನೆ ಸಿಕ್ಕಿದ್ದ ನಾವು ಆ ಹೊಟೇಲಿಗೆ ಹೋಗಿದ್ವಿ ಅಂತ ಊರಿನ ಒಂದು ಪ್ರತಿಷ್ಟಿತ ಹೋಟೆಲಿನ ಹೆಸರು ಹೇಳಿದರೆ ನಾ ಮುಖದ ಭಾವ ಮುಚ್ಚಿಡುವುದು ಹೇಗೆಂಬ ಯೋಚನೆಯಲ್ಲಿದ್ದೆ. ಪುಣ್ಯಕ್ಕೆ ಅವಳು ಕಾಫಿ ತರ್ತೀನಿ ಅಂತ ಒಳಗೆ ಹೋದಳು. ಆಮೇಲೆನಾಯಿತು ಅಂತ ನೆನಪಿಡಲು ನಾ ಅಲ್ಲಿದ್ದರೆ ತಾನೇ? ಏನೋ ನೆಪ ಹೇಳಿ ಅವಳ ಮನೆಇಂದ ಬಂದೆ.
ಕನ್ನಡಿಯಲ್ಲಿಲ್ಲದ ಬಿಂಬವನ್ನ ನಾನೇ ಸೃಷ್ಟಿ ಮಾಡಿ, ಇಂದದು ಕಾಣೆಯಾಯ್ತು ಅಂತ ನಾನತ್ತರೆ ಕೇಳುವವರ್ಯಾರು .
ಎಲ್ಲ ಗೆಳೆಯ ಗೆಳತಿಯರ ಹತ್ತಿರ ವರ್ತಿಸಿದ ಹಾಗೆ ನನ್ನಲ್ಲೂ ವರ್ತಿಸಿದ, ಅದಕ್ಕೆ ನಾನು ಬೇರೆಯದೇ ರೂಪ ಕೊಟ್ಟರೆ ಅವನ ತಪ್ಪೇನು ? ಕೆಲಕಾಲ ಗೆಳತಿಯನ್ನ ಅವನ ಬಗ್ಗೆ ನಿನಗಿನ್ನೇನು ಗೊತ್ತು , ಯಾವಾಗ ಸಿಕ್ಕಿದ್ದ ಅಂತ ವಿವರ ಕೇಳಬೇಕು ಅನ್ನಿಸುತ್ತಿತ್ತು. ಯಾಕೋ ಕೇಳಲಾಗಲಿಲ್ಲ. ದೃಷ್ಟಿಯಿಂದ ದೂರಾದದ್ದು ಮನಸಿಂದಲೂ ದೂರಾಗತ್ತೆ ಅನ್ನೋದು ಮನಃಶಾಸ್ತ್ರ ಗೊತ್ತಿರದವರಿಗೂ ಗೊತ್ತಿರುವ ವಿಚಾರ. ಹೇಗೂ ಅವನಿನ್ನೂ ನನಗೆ ಸಧ್ಯ ಸಿಗಲಾರ, ಎಲ್ಲ ದಾರಿಗಳು ಕೊನೆಗೊಂದು ನಿರಾಕರಣೆಯಲ್ಲಿ ಮುಗಿದ ಮೇಲೆ ಮರೆವ ಪ್ರಯತ್ನವನ್ನ ಗಟ್ಟಿಗೊಳಿಸಬೇಕು ಅಂತ ನಿರ್ಧಾರ ಮಾಡಿದೆ. ಆದರೆ ಏನನ್ನ ಮರೆಯುವುದು ? ಅವ ಪ್ರಪಂಚ ನೋಡಿದ, ನನ್ನ ಪ್ರಪಂಚವೇ ಅವನಾಗಿದ್ದನೇ ?
" माय री मैं का से कहूं पीर अपनी जिया की ?
..........................................................
आँखों में चलते फिरते ,
रोज़ मिले पीया बावरे ,
बैय्याँ के च्य्याँ आके मिलते नहीं कभी सावरे
दुःख यह मिलन का लेके काह करूँ ? कहाँ जावूरें ?
पाकर भी नहीं उनको मैं पाती "
ಇನ್ನೆರಡು ದಿನಲ್ಲಿ ಗೌರಿ ಗಣಪತಿ ಹಬ್ಬವಿತ್ತು. ಎಲ್ಲೆಡೆ ಗೌರಿ ಗಣಪತಿಯ ಬಣ್ಣ ಬಣ್ಣದ ಮೂರ್ತಿಗಳು, ಬರಿ ಮಣ್ಣಿನ ಮೂರ್ತಿಗಳು, ಅಲಂಕಾರಿಕ ಸಾಮಗ್ರಿಗಳು, ಪೇರಿಸಿಟ್ಟ ಮೊರದ ಗುಂಪು. ಕೈಲಾಸದಿಂದ ವರುಷಕೊಮ್ಮೆ ಬರುವ ಮಗಳನ್ನು, ಮೊಮ್ಮಗನನ್ನು ಸ್ವಾಗತಿಸಲು ಭರ್ಜರಿ ತಯಾರಿ ನಡೆಯುತ್ತಿತ್ತು. ಕಾಲೇಜನ್ನೂ ಶೃಂಗಾರ ಮಾಡುತ್ತಿದ್ದರು. ಕಾಲೇಜು ಮುಗಿಸಿ ಮನೆ ದಾರಿ ಹಿಡಿದವಳ ಹಿಂದೆ ಯಾರೋ ನಿಂತಂತಾಗಿ ತಿರುಗಿದರೆ ಅವನೇ! ವಾರದಲ್ಲಿನ ಎರಡನೇ ಭೇಟಿಗೆ ನಗಲೋ ಬೇಡವೋ ಎಂಬ ಗೊಂದಲದಲ್ಲಿ ಸುಮ್ಮನೆ ನಿಂತೆ.
"ಹಬ್ಬ ಮುಗಿಸಿ ವಾಪಸ್ ಹೋಗ್ತಾ ಇದೀನಿ, ನಮ್ಮ ಕಾಲೇಜ್ ಹತ್ರ ಹೋಗಿ ಬರ್ತಾ ಇದೀನಿ" ಅಂದ.
"ಓಹ್ ಹೌದಾ" ಅಂತ ನಾ ಮತ್ತೆ ಸುಮ್ಮನೆ ನಿಂತೆ.
"ಏನ್ ಟೀಚರಮ್ಮ ಇಷ್ಟು ಮೌನಿ ಆದ್ರೆ ಪಾಠ ಹೇಗ್ ಮಾಡ್ತಿ?" ಎಂದೂ ಬದಲಾಗದ ನಗು .
ಉತ್ತರಕ್ಕೆ ಶಬ್ಧಗಳು ಹೊಳೆಯದೆ ನಾನೂ ನಕ್ಕೆ.
"ನಮ್ಮನೆಗೆ ಬಾ ಗಣಪತಿ ನೋಡೋಕೆ ಬೈ "
ಅಂತ ನನ್ನ ಉತ್ತರಕ್ಕೂ ಕಾಯದೆ ಹೊರಟೇ ಹೋದ.
ಹಬ್ಬ ಬಂತು ಹೋಯ್ತು.ಅವನ ಮನೆ, ಮನ ನಾ ತಲುಪಲಾರದ ದ್ವೀಪ ಎನ್ನೋದು ನಾ ಒಪ್ಪಿಕೊಳ್ಳದಿದ್ದರೂ ಸತ್ಯ ಎಂಬ ಅರಿವು ಇದ್ದದ್ದರಿಂದ ಹೋಗುವ ಯೋಚನೆಯೇ ಬರಲಿಲ್ಲ. ನಾನು ಮತ್ತೆ ಕಾಲೇಜಿನ ಕಡೆ ಗಮನ ಕೊಡಲು ನಿರ್ಧರಿಸಿದೆ.
ಹಬ್ಬ ಮುಗಿದ ಮಾರನೆ ದಿನ ಕಾಲೇಜು ಮುಗಿಸಿ ಬೀದಿಯಲ್ಲಿಟ್ಟಿದ್ದ ಥರಾವರಿ ಗಣಪನ್ನ ನೋಡಿಕೊಂಡು ಬರ್ತಾ ಇದ್ದೆ.
ಆ ದಿನ ಮತ್ತೆ ಸಿಕ್ಕ "ಏನ್ ಮೇಡಂ ಮನೆಗೆ ಬರಲಾರದಷ್ಟು ಬ್ಯುಸಿನಾ ? ಅಥವ ನಮ್ಮನೆ ದಾರಿ ಮರೆತು ಹೋಗಿದ್ಯಾ?"
"ಇನ್ನೊಮ್ಮೆ ಬರ್ತೀನಿ ಬಿಡು" ಅಂದದ್ದಕ್ಕೆ
"ಈ ಸಾರಿ ಬರ್ಲಿಲ್ಲ ಅಲ್ಲ" ಅಂತ ನಕ್ಕ .
"ಸರಿ ನಾನಿವತ್ತು ವಾಪಾಸ್ ಹೋಗ್ತಾ ಇದೀನಿ. ಬರ್ತೀನಿ" ಅಂತ ಹೇಳಿ ಹೊರಟೇ ಹೋದ.
' ಬರ್ತೀನಿ ' ಅಂತ ಯಾಕೆ ಕೊನೆಯಲ್ಲಿ ಸೇರಿಸಿದ ? ಈ ಬಾರಿ ಹೊಸ ಪ್ರಶ್ನೆಯೊಂದನ್ನ ಬಿಟ್ಟು ಹೋಗಿದ್ದ.
"कुछ दिल ने कहाँ
कुछ भी नहीं
कुछ दिल ने सुना
कुछ भी नहीं
ऐसी भी बातें होती हैं "

Swarna,
ReplyDeleteThis romantic narration is very very
heart-stealing! The style you have employed reminds the `flow of consciousness' style adopted by some great English writers of 20th century and a few Kannada writers as well. MY heartfelt compliments for your good writing.
Thank you Kaakaa. I must say your encouragement has improved the style of writing a lot.
DeleteThanks once again
Swarna
ನಾನೂ ರಾಶಿ ಫಲ, ಪುಟ್ಟ ಪಾಕೆಟ್ ಕ್ಯಾಲೆಂಡರಿನ ಹಿಂದೆ ಚೌಕಗಳ ಸಂಖ್ಯೆಗಳನ್ನ ಕಣ್ಮುಚ್ಚಿ ಮುಟ್ಟಿದವನೇ.
ReplyDeleteಟೀಚರಮ್ಮನ ಮೌನದಿಂದಲೂ ಹುಡುಗನಿಗೆ ಪ್ರಶ್ನೆಯಾಗುವ ಅಪಾಯವಿದೆ.
ಮನೆಗೆ ಗಣಪತಿ ನೋಡಲು ಹೋಗಬಹುದಿತ್ತೋನೋಪ್ಪಾ?
ಹಿಂದಿ ಗೀತೆಗಳು ಚೆನ್ನಾಗಿ ಒಪ್ಪಿವೆ.
ಹೋಗ್ಬಹುದಿತ್ತೆನ್ನೋದು ನಿಮ್ಮ ಆಸೆ...ಹೋಗಬಾರದೆಮ್ಬುದು ಅವಳ ನಿರ್ಧಾರ :)
Deleteಧನ್ಯವಾದಗಳು ಬದರಿ ಸರ್.
ಆ ಕಡೆ ಅವ್ರ್ನಾ ಮನಸ್ಸು ಬಿಚ್ಚಿ ಮಾತಾಡಕ್ಕೂ ಬಿಡ್ತಾ ಇಲ್ಲ,ಈ ಕಡೆ ಎನೋ ಆಗೋಯ್ತು ಅಂತೆಳಿ ಮರ್ಯಕ್ಕೂ ನೋಡ್ತಾ ಇಲ್ಲ.....ಕಷ್ಟ ಇದೆ ಜೀವನ ...ಮುಂದಿನ ಭಾಗಕ್ಕೆ ಕಾಯ್ತಿದಿನಿ ಅಷ್ಟೇ...
ReplyDeleteಅಲ್ವಾ ಚಿನ್ಮಯ್ ?
Deleteಧನ್ಯವಾದಗಳು
ಸ್ವರ್ಣಾ