ವಿಧ್ಯಾರ್ಥಿ ದೆಸೆಯಿಂದಲೂ ನಾನು ಕಮ್ಮಟಗಳಿಗೆ ಹಾಜರಿ ಹಾಕಿದ್ದು ಅತೀ ಕಡಿಮೆ . ವಿಮರ್ಶೆಗೆ ಬೇಕಾದ ಆಳವಾದ ಅರಿವು , ಸಾಹಿತ್ಯದ ಓದು ಎರಡೂ ನನಗಿಲ್ಲವಾದ್ದರಿಂದ ವಿಮರ್ಶಾ ಕಮ್ಮಟಕ್ಕೆ ಹೋಗಲು ಅಳುಕಿನಿಂದಲೇ ಒಪ್ಪಿದ್ದೆ. ಸ್ಥಳವನ್ನು ತಲುಪಿದಾಕ್ಷಣ ಆಯೋಜಕಿ , ಕಮ್ಮಟದ ಕನಸಿನ ಮೂಲ ಜಯಲಕ್ಷ್ಮಿ ಪಾಟಿಲ್ ಗುರುತು ಹಿಡಿದು ಮಾತನಾಡಿಸಿದ್ದು ಸ್ವಲ್ಪ ಧೈರ್ಯ ಬಂದಿತು . ನಂತರ ಜಯಶ್ರ್ರೀ ಕಾಸರವಳ್ಳಿ , ಜಯಶ್ರೀ ದೇಶಪಾಂಡೆ , ಸುಧಾ ಶೆರ್ನೋಬತ್, ತೇಜಸ್ವಿನಿ ಹೆಗಡೆ ಮುಂತಾದವರೊಂದಿಗೆ ಕಮ್ಮಟಕ್ಕೆ ತಯಾರಾದೆವು .
ಓದಿಗೆ ದಿಕ್ಕು ಸೂಚಿಸಬಲ್ಲ ದಿವಾಕರ್ ಸರ್ ಮಾತು ಕೇಳುವುದು ಎಂದಿಗೂ ಹಿತ. ಮನುಷ್ಯ ಬೆಳೆದಂತೆ ಅವನೊಳಗಿನ ವಿಚಾರಗಳೆಲ್ಲವೂ ಶಬ್ಧವಾಗಲಾರವು , ಆಗಬಾರದು ಕೂಡ . ಇದು ಮನುಷ್ಯನಲ್ಲಿ ನಡೆಯುವ ಪ್ರಾಥಮಿಕ ಹಂತದ ವಿಮರ್ಶೆ . ರಾಜಾಸ್ಥಾನಗಳಲ್ಲಿದ್ದ ವಿದೂಷಕರು ವ್ಯವಸ್ಥೆಯನ್ನು ವಿಮರ್ಶಿಸಿದ , ಈಗಲೂ ಸ್ಟಾಂಡ್ ಅಪ್ ಕಾಮೆಡಿಯನ್ಸ್ ಆಗಿ ವಿಮರ್ಶಿಸುತ್ತಿರುವ ಎರಡನೇ ಹಂತದ ವಿಮರ್ಶಕರು . ಹೀಗೆ ಸಾಗುತ್ತಾ ಪಂಪ ತನ್ನ ಕೃತಿಗಳಲ್ಲಿ ಮಂಡಿಸಿದ ಅಂದಿನ ಸ್ಥಿತಿಗಳ ವಿಮರ್ಶೆ , ಮಾಸ್ತಿಯವರಂತಹ ಸಾಹಿತಿಗಳ ವಿಮರ್ಶೆಯ ಬಗ್ಗೆ ವಿವರಿಸಿದ ದಿವಾಕರ್ ರವರು ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಿಮರ್ಶಾ ಪ್ರಸ್ಥಾನಗಳ ಬಗ್ಗೆ ವಿವರಿಸಿದರು. ಕಡೆಯಲ್ಲೀ ಬೇಂದ್ರೆಯವರ 'ಗಾರುಡಿಗ' ಕವಿತೆಯ ಸಾಲುಗಳು ಕುವೆಂಪುರವರ ಸಾಲುಗಳನ್ನು ಉದ್ಘರಿಸಿ ಕಮ್ಮಟಕ್ಕೊಂದು ಭಧ್ರ ಬುನಾದಿ ಹಾಕಿದರು .
ಸಿ.ಏನ್. ಆರ್ .ರಂತಹ ಉಪನ್ಯಾಸಕರ ಮಾತು ಯಾರಿಗೆ ತಾನೇ ರುಚಿಸುವುದಿಲ್ಲ ? ಸಾಹಿತ್ಯ ವಿಮರ್ಶೆಯ ವಿವಿಧ ಆಯಾಮಗಳನ್ನು ವಿವರಿಸುತ್ತಾ ಅನಂತಮೂರ್ತಿಯವರ ಸಂಸ್ಕಾರವನ್ನು ಪ್ರಾಕ್ಟಿಕಲ್ ಆಗಿ ವಿಮರ್ಶಿಸಿದ ರೀತಿ ಸೊಗಸಾಗಿತ್ತು . ಕಾರಂತರ ಕಾದಂಬರಿಗಳ ಓದು ಮೊದಲು ಕೆಲವು ಪುಟಗಳವರೆಗೆ , ನನ್ನ ಮಟ್ಟಿಗೆ ಕಷ್ಟ . ಅವಧಿಯಲ್ಲಿ ಮೈ ಮನಗಳ ಸುಳಿಯಲ್ಲಿ ಬಗ್ಗೆ ಬರೆದಾಗ ಈ ಬಗ್ಗೆ ನಾನು ಉಲ್ಲೇಖಿಸಿದ್ದೆ . ಸಿ.ಏನ್.ಆರ್ ಕೂಡ ಅದೇ ಮಾತನ್ನು ಸಭೆಯಲ್ಲಿ ಹೇಳಿದಾಗ ವಿಮರ್ಶಕ ಮತ್ತು ಸಾಮಾನ್ಯ ಓದುಗರ ಅಭಿಪ್ರಾಯಗಳು ಒಂದೇ ಆಗಿರಬಹುದು ಎಂದು ಬೀಗಿದ್ದೆ. ಮತ್ತೆ ಅವರೊಂದಿಗೆ ಆ ಬಗ್ಗೆ ಪ್ರಸ್ತಾಪಿಸಿದಾಗ ಅದನ್ನವರು ನಗುತ್ತಲೇ ಒಪ್ಪಿದ್ದರು . ಕೃತಿಯೊಂದನ್ನು ಪ್ರತೀ ಬಾರಿಯೂ ಓದಿದಾಗ ವಿಮರ್ಶಕನ ಗ್ರಹಿಕೆಯೂ ಬದಲಾಗಬಹುದು ಮತ್ತು ಅವನದನ್ನು ಒಪ್ಪಿಕೊಳ್ಳುತ್ತಾನೆ ಎಂದು ಯಾವುದೇ ಅಳುಕಿಲ್ಲದೇ ಅವರು ಹೇಳಿದ್ದು ಸದಾ ಸ್ಮರಣೀಯ. ದೊಡ್ಡವರು ದೊಡ್ದವರಾಗುವುದೇ ಇಂತಹ ಮಾತುಗಳಿಂದ. ಅವರೇ ಬರೆದ 'ಸಾಹಿತ್ಯ ವಿಮರ್ಶೆ ' ನಮಗೆಲ್ಲರಿಗೂ ಕಮ್ಮಟದ ಕುರುಹಾಗಿ ದೊರೆತದ್ದು ಬೋನಸ್.
ನವೋದಯದ ರಮ್ಯಕಾಲದ ವಿಮರ್ಶೆಯೂ ರಮ್ಯವಾಗಿತ್ತೆಂದು ಖಾತರಿಯಾಗಿದ್ದು ಡಾ.ಜಿ.ಬಿ. ಹರೀಶರ ಮಾತುಗಳನ್ನು ಕೇಳಿದಾಗ. 'ವಿಮರ್ಶಕ ದಂಡಧಾರಿಯಲ್ಲ ದೀಪಧಾರಿ ' ಎಂಬ ಕುವೆಂಪುರವರ ಮಾತು ಆ ಕಾಲದ ಕನ್ನಡಿ . ಎ.ಆರ್.ಕೃಷ್ಣಶಾಸ್ತ್ರಿಗಳಿಂದ ಮೊದಲುಗೊಂಡು ಡಿವಿಜಿ, ಮಾಸ್ತಿಯವರ ವಿಮರ್ಶೆಯ ವಿವಿಧ ಮಗ್ಗಲುಗಳನ್ನು ಪರಿಚಯಿಸಿದ ಹರೀಶರು ತಮ್ಮ ಉಪನ್ಯಾಸವನ್ನು ಪೂರ್ತಿ ಮಾಡಿದ್ದು ಚಿಂತನೆಗೆ ಹಚ್ಚಿದ ಮಾತೊಂದರಿಂದ : 'ವಸ್ತು ಕಾಣುವುದು ನೋಡುವ ಹಂಬಲವಿದ್ದಾಗ ಮಾತ್ರ ' ಮುಂದುವರೆದ ಚರ್ಚೆಯಲ್ಲಿ ಕೆ.ವೈ.ಏನ್. ಕೂಡ ಜೊತೆಯಾದದ್ದು ಹುಗ್ಗಿಯ ಮೇಲೆ ತುಪ್ಪ ಸುರಿದಂತಿತ್ತು .
ಎಸ್.ಆರ್ . ವಿಜಯಶಂಕರ್ ಅವರ ಲೇಖನಗಳನ್ನು ಅಲ್ಲಲ್ಲಿ ಓದಿದ್ದರೂ ಇದೇ ಮೊದಲ ಬಾರಿ ಅವರ ಉಪನ್ಯಾಸ ಕೇಳಿದ್ದು . ಸಾಪೋಕ್ಲಿಸ್ ನ ಅಗೆಮೆಮ್ನಾನ್ ಮನಸ್ಥಿತಿಯಿಂದ ಮೊದಲುಗೊಂಡ ಉಪನ್ಯಾಸ ಅದೆಷ್ಟೋ ಪಾತ್ರಗಳ , ಲೇಖಕರ ಪರಿಚಯ ಮಾಡಿಸಿತ್ತು . ಎಂ.ಜಿ. ಕೃಷ್ಣ ಮೂರ್ತಿ , ಸುರೇಂದ್ರನಾಥ್ ಮಿಣಜಗಿ , ಕುರ್ತಕೋಟಿ , ಪುಣೇಕರ್ ಎಲ್ಲರೂ ನಮ್ಮ ನಡುವೆ ಬಂದಿದ್ದರು . ಓದಲೇ ಬೇಕಾದ ಒಂದಷ್ಟು ಪ್ರಬಂಧಗಳು , ವಾಕ್ಯವೊಂದು ಒಳಗಿಳಿಯುವ ಬಗೆ ಎಲ್ಲವನ್ನೂ ಮನಮುಟ್ಟುವಂತೆ ವಿವರಿಸಿದ ಉಪನ್ಯಾಸ ಅವಧಿಯ ಅರಿವೆಯೇ ಇಲ್ಲದಂತೆ ಸಾಗಿತ್ತು.
ಕೃತಿಯೊಂದರ ರೂಪಕ್ಕೆ ತಕ್ಕ ಆಶಯ, ಆಶಯಕ್ಕೆ ತಕ್ಕ ಆಕೃತಿ ಇರಬೇಕೆಂಬುದು ರೂಪ ನಿಷ್ಠವಿಮರ್ಶೆಯ ಸಾರ . ವಿವರಿಸಿದವರು ಡಾ.ಮಧುಸೂಧನ . ಸಾಹಿತ್ಯ ಪ್ರಕಾರಗಳು , ಛಂದೋ ರೂಪಗಳಿಂದ ಮೊದಲಾಗುವ ವಿಮರ್ಶೆ ಸಾಹಿತ್ಯ ಪ್ರಕಾರವೊಂದರ ಸಾಧ್ಯತೆಗಳನ್ನು ಕುರಿತು ಚಿಂತಿಸುತ್ತದೆ . ೨೦ನೇ ಶತಮಾನದಿಂದೀಚೆಗೆ ಪ್ರವರ್ಧಮಾನಕ್ಕೆ ಬಂದ ಮನೋವಿಶ್ಲೇಷಣಾತ್ಮಕ ವಿಮರ್ಶೆಯ ಪರಿಚಯವನ್ನೂ ಉಪನ್ಯಾಸಕಾರರು ಮಾಡಿಸಿದರು . ವಿಮರ್ಶಾ ಪ್ರಸ್ಥಾನವೊಂದು ಸರ್ವತಂತ್ರ ಸ್ವತಂತ್ರವಲ್ಲ , ಒಂದರೊಳಗೊಂದು ಬೆರೆತಾಗಲೇ ವಿಮರ್ಶೆ ಪೂರ್ಣವಾಗಬಹುದೆಂಬ ಮಾತನ್ನು ಎಲ್ಲ ಉಪನ್ಯಾಸಕಾರರು ಒತ್ತಿ ಹೇಳಿದರು .
ಎಲ್ಲೆಡೆಯಲ್ಲೂ ಸ್ತ್ರೀಯನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡುವ ಸಮಾಜ , ವೇದಿಕೆಯ ಮೇಲಿನಿಂದ ಮಾತನಾಡುವುದಕ್ಕೂ ಆಕೆಗೆ ಸರಿಯಾದ ಪೋಡಿಯಮ್ ವ್ಯವಸ್ಥೆಮಾಡಿಲ್ಲವೆಂದು ವ್ಯಂಗ್ಯ ಭರಿತ ಹಾಸ್ಯದೊಂದಿಗೆ ಮಾತಿಗಿಳಿದ ಡಾ.ಬಿ.ಏನ್. ಸುಮಿತ್ರಾ ಬಾಯಿ , ಮಹಿಳೆಯರು ಮೊದಲು ಬರೆಯಲು ಪ್ರಾರಂಭಿಸಿದಾಗ ಎದುರಿಸಿದ ಸವಾಲುಗಳು , ಮಾಸ್ತಿಯವರ ವಿಮರ್ಶೆಯಿಂದಾಗಿ ಬರಹವನ್ನೇ ನಿಲ್ಲಿಸಿದ ತಿರುಮಲಾಂಬರ ಪ್ರಸಂಗ, ವಿಜಯಾ ದಬ್ಬೆ , ಪ್ರತಿಭಾ ನಂದಕುಮಾರ್ , ಸ.ಉಷಾ ಅವರ ಕವಿತೆಗಳಲ್ಲಿ ಕಾಣುವ ಸ್ತ್ರೀ ಜಗತ್ತುಗಳನ್ನೂ ವಿವರಿಸುತ್ತಲೇ ಸ್ತ್ರೀವಾದಿ ವಿಮರ್ಶೆ ಎಂಬುದು ಸಮಾಜದಲ್ಲಿ ತನ್ನಿರುವಿಕೆಯನ್ನು ಸಾಬೀತು ಮಾಡಲು ಹೊರಟ ಮಹಿಳಾ ಹೋರಾಟದ ಒಂದು ಮುಖ ಮಾತ್ರ ಎಂಬುದನ್ನು ಒತ್ತಿ ಹೇಳಿದರು . ಸಮಾನತೆಯನ್ನು ಸಾಧಿಸುತ್ತಿರುವ ಇಂದಿನ ಮಹಿಳೆಯ ಸಾಹಿತ್ಯವನ್ನು ಸ್ತ್ರೀವಾದಿ ತಕ್ಕಡಿಯಲ್ಲಿಡುವುದು ಎಷ್ಟು ಸರಿ ? ಎಂಬ ಜಯಶ್ರೀ ಕಾಸರವಳ್ಳಿಯವರ ಪ್ರಶ್ನೆಗೆ ಸಮಯಾಭಾವದಿಂದ ಉತ್ತರ ದೊರೆಯಲಿಲ್ಲ .
`ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ' ಘೋಷವಾಕ್ಯವನ್ನು ವಿವರಿಸುತ್ತಲೇ ಚಳುವಳಿಯಲ್ಲಿ ನಡೆದ ಕೆಲವು ಕಹಿ ಘಟನೆಗಳನ್ನೂ ನೆನಪಿಸಿಕೊಂದವರು ಬಂಡಾಯ ಸಾಹಿತ್ಯ ವಿಮರ್ಶೆಯನ್ನು ವಿವರಿಸಿದ ಡಾ.ಕೆ.ವೈ. ನಾರಾಯಣ ಸ್ವಾಮಿ ಯವರು. ಸಾಹಿತ್ಯವೆಂಬುದು ಸಮಾಜಕ್ಕೆ ಹಿಡಿದ ಕನ್ನಡಿಯಾಗಬೇಕೆಂಬ ಆಶಯದೊಂದಿಗೆ ಉದಯಿಸಿದ ,ಇತಿಹಾಸದಿಂದಲೂ ಬೇರೆ ರೂಪಗಳಲ್ಲಿ ಚಾಲ್ತಿಯಲ್ಲಿರುವ ಬಂಡಾಯ ಸಾಹಿತ್ಯದ ಚರ್ಚೆ ಈ ಉಪನ್ಯಾಸದ ತಿರುಳು .
ಕಮ್ಮಟದ ಕೊನೆಯ ಉಪನ್ಯಾಸವಾದ 'ಆಧುನಿಕೋತ್ತರ ವಿಮರ್ಶೆ' ಯ ಉಪನ್ಯಾಸ ಮುಗಿದ ನಂತರ ಅನಿಸಿದಿದ್ದು , ಅದು ವಿಮರ್ಶೆಯ ಉಪನ್ಯಾಸದ ಜೊತೆಗೆ ಇಂದಿನ ಸಮಾಜದ ಮನಸ್ಥಿತಿಯ ಬಗೆಗಿನ ಉಪನ್ಯಾಸವೂ ಆಗಿತ್ತು . ವಿರಚನೆಯಿಂದಲೇ ಶಬ್ಧವೊಂದು ಅರ್ಥಗಳಿಸಿಕೊಳ್ಳುವ ಪರಿಯನ್ನು ಡಾ. ಓ.ಎಲ್. ನಾಗಭೂಷಣ ಸ್ವಾಮಿಯವರು ವಿವರಿಸಿದ ರೀತಿ ಅದ್ಭುತವಾಗಿತ್ತು . ಡೆರಿಡಾ, ಗಾಯತ್ರಿ ದೇವಿ ಸ್ಪೀವಾಕ್ ರ ಸಿಧ್ಧಾಂತಗಳನ್ನು ಸರಳ ಉದಾಹರಣೆಗಳೊಂದಿಗೆ ಉಪನ್ಯಾಸಕಾರರು ವಿವರಿಸಿದರು . ಜ್ಞಾನವೆಂಬುದು ಸ್ಥಾನಾವಲಂಬಿತ (knowledge is positional) ಎಂಬ ಫುಕೋನ ಸಿಧ್ಧಾಂತ ಬಹುಶಃ ಇಂದು ನಾವರಿಯಬೇಕಿರುವ ಪ್ರಮುಖ ಸಿಧ್ಧಾಂತಗಳಲ್ಲೊಂದು . ಕೃತಿ , ಕೃತಿಕಾರ , ಓದುಗ , ಲೋಕ ಇವುಗಳಲ್ಲಿ ಯಾವುದನ್ನೂ ತನ್ನ ಕೇಂದ್ರವನ್ನಾಗಿ ಪರಿಗಣಿಸದಿರುವುದು ಆಧುನಿಕೋತ್ತರ ವಿಮರ್ಶೆಯ ಪ್ರಮುಖ ಲಕ್ಷಣ ಎಂಬುದು ಈ ಉಪನ್ಯಾಸದ ಭಾರತ ವಾಕ್ಯವಾಗಿತ್ತು . ಭಾಷೆ ಎಂಬುದು ಅರ್ಥಗಳ ಲೀಲೆ ಎಂಬುದು ನನಗಿಷ್ಟವಾದ ಸಾಲು.
ಎರಡು ದಿನಗಳ ಕಮ್ಮಟದಿಂದ ವಿಮರ್ಶೆಯನ್ನಲ್ಲದಿದ್ದರೂ ಸಾಹಿತ್ಯವನ್ನು ಓದುವ - ಅರ್ಥೈಸಿಕೊಳ್ಳುವ ರೀತಿ , ಕಾಲದೊಂದಿಗೆ ಹೆಜ್ಜೆಹಾಕುತ್ತ ಬದಲಾದ ಪರಿಮಾಣಗಳು, ಪತ್ರಿಕೆಗಳಲ್ಲಿ ಮರೆಯಾಗುತ್ತಿರುವ ವಿಮರ್ಶೆ ಮತ್ತು ಅದರಿಂದಾಗಿ ದಿಕ್ಕುತಪ್ಪುತ್ತಿರುವ ಅಥವಾ ದಿಕ್ಕುತಪ್ಪಬಹುದಾದ ಓದುಗ , ವಿಮರ್ಶಕನಿಗಿರಬೇಕಾದ ಸಾಹಿತ್ಯದ ಒಟ್ಟು ನೋಟ ... ಮುಂತಾದ ವಿಷಯಗಳ ಪರಿಚಯವಾಯಿತು . ಆಯೋಜಿಸಿದ ಜಯಲಕ್ಷ್ಮಿ ಪಾಟೀಲ್ ,ವೀರೇಂದ್ರ ಗೌಡ , ನಿರ್ದೇಶಿಸಿದ ದಿವಾಕರ್ ಸರ್ ಅವರಿಗೆ ವಂದನೆಗಳು .

ಸ್ವರ್ಣಾ,
ReplyDeleteಕಮ್ಮಟದಲ್ಲಿ ಜರುಗಿದ ವಿಮರ್ಶೆಯ ವಿವಿಧ ಮುಖಗಳ ಪರಿಚಯವನ್ನು ಸಾರವತ್ತಾಗಿ, ಸಂಗ್ರಹವಾಗಿ, ಸುಸಂಬದ್ಧವಾಗಿ ನೀಡಿದ್ದೀರಿ. ನಿಮ್ಮ ಲೇಖನವು ಕಮ್ಮಟದಲ್ಲಿ ಭಾಗವಹಿಸಲಾರದ ನಮ್ಮಂತಹ ಆಸಕ್ತರಿಗೆ ಸೂಚಕವಾಗಿದೆ. ಧನ್ಯವಾದಗಳು.
ಚಿಕ್ಕ ಚೊಕ್ಕ ಒಳನೋಟ! ರಮ್ಯವಾದ ಸ್ವರ್ಣಾ.
ReplyDelete