Thursday, December 15, 2011

ಆನಂದವಾತ್ಮ ಗುಣ

ಧುಮ್ಮಿಕ್ಕುವ ಜಲಕ್ಕೊಂದು
ಪ್ರಪಾತ ಬೇಕು
ಭೋರ್ಗರೆವ  ಮನ-ನದಿಗೊಂದು
ಜಲಧಿ ಬೇಕು
ಎಲ್ಲ ಸೇರಿ ಒಂದಾಗುವ
ಗಮ್ಯ ಅದಾಗಬೇಕು
ಹರಿದ ನೋವೆಲ್ಲ
ಅಲ್ಲಿ ಕರಗಬೇಕು

ಹುಚ್ಚು ಕನಸಿಗೊಂದು
ಕಣ್ಣು ಬೇಕು
ಕೋಮಲ ಕಣ್ಣ
ಕಾಯಲೊಂದು ರೆಪ್ಪೆ ಬೇಕು
ಎಲ್ಲ ಕನಸುಗಳಿಗಲ್ಲಿ
ರಕ್ಷೆಯಾಗ ಬೇಕು
ಹರಿದ ಭಾವ ಬಿಂದುಗಳೆಲ್ಲ
ಅಲ್ಲಿ ಮುತ್ತಾಗಬೇಕು

ಹಾಗೆ ಹೀಗೆ  ಹಬ್ಬುವ ಬಳ್ಳಿಗೊಂದು
 ಮರ ಬೇಕು
ಕಾಲ್ತುಳಿತಕ್ಕೆ ಸಿಕ್ಕದಿರಲು  
ಆಸರೆ  ಬೇಕು
ಹಬ್ಬುವ ಸ್ವಂತಂತ್ರ
ಬಳ್ಳಿಯದೇ ಆಗಿರಬೇಕು
ಎಲ್ಲ ಗಾಯಗಳೂ
ಅಲ್ಲಿ ಹೂವಾಗಬೇಕು

ಹರಿದಾಡುವ ಮನಸ
 ಹಿಡಿದಿಡಲೊಂದು   ಆತ್ಮ ಬೇಕು
ಮೌನ ಕೇಳ ಬಲ್ಲ
 ಕರಣ ಬೇಕು
ಲೋಕದಿಂದಾಚೆ ನಡೆಯಲೊಂದು
ಜೊತೆ ಬೇಕು

3 comments:

  1. ಸುಂದರ ಆಧ್ಯಾತ್ಮಿಕ ಕವನ.ಇಷ್ಟವಾಯಿತು.

    ReplyDelete
  2. ಧನ್ಯವಾದಗಳು ಸರ್

    ReplyDelete
  3. "ಎಲ್ಲ ಗಾಯಗಳೂ
    ಅಲ್ಲಿ ಹೂವಾಗಬೇಕು"
    ಇದು ನಿಜವಾಗಿಯೂ ಮನದುಂಬುವ ಕನಸು, ಬಯಕೆ.

    ReplyDelete