ಬಹುಪಾಲು ಜನರಿಗೆ ಬದುಕಲ್ಲಿ ಸದಾ ಒಂದು ಗೊಣಗಾಟ
ತಂಗಳನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ್ನ ಮಾಡುವುದು ಪರಿಪಾಟ
ಅಜ್ಜಿ ಹೇಳಿದ ಚಿತ್ರಾನ್ನ:
ಮೊದಲು ಪಾತ್ರೆಯಲ್ಲಿ ಎಣ್ಣೆ ಇಡು
ಜೋಪಾನ,
ಕೊಬ್ಬು ಜಾಸ್ತಿಯಾಗಬಾರದು, ಹೃದಯಕ್ಕೆ ಒಳಿತಲ್ಲವಂತೆ
ಕಡಿಮೆಯಾದರೆ ದೇಹಕ್ಕೆ ಸತ್ವವೇ ದೊರಕದು !
ಎಣ್ಣೆ ಕಾಯಲು ಬಿಡು
ಕಾಯದ ಎಣ್ಣೆಗೆ ಒಗ್ಗರಣೆ ಕೊಟ್ಟರೆ,
ಹೊಟ್ಟೆಗೆ ತ್ರಾಸು
ನಂತರ,
ಸಾಸಿವೆ ಜೀರಿಗೆ ಹಾಕು
ಸ್ವಲ್ಪ ಚಟ ಪಟ ಸಿಡಿಯಲಿ
ಹುಷಾರು,
ಸಿಡಿಯುವಾಗ ದೂರ ನಿಲ್ಲು
ಆದರೆ ಸಿಡಿಯಲು ಬಿಡು,ಸಿಡಿದರೆ ಒಳಿತು !
ಈಗ, ಕಡಲೆಬೀಜ , ಕಡ್ಲೆ ಬೇಳೆ, ಉದ್ದಿನ ಬೇಳೆಯ ಸರದಿ
ಅನ್ನದ ಅಳತೆ ನೋಡಿ, ತಿನ್ನುವವರ ಹಲ್ಲು ನೋಡಿ
ಎಲ್ಲ ಅಳತೆಯಲ್ಲಿ ಹಾಕು
ಆಮೇಲೆ,
ಬೀಜ ಬೇಳೆ ಹದವಾಗಿ,
ಕೆಂಪಾದ ಮೇಲೆ
ಮೆಣಸಿನಕಾಯಿ, ಕರಿಬೇವು,ನೀರುಳ್ಳಿ ಹಾಕು
ಎರಡು ನಿಮಿಷ ಬಾಡಿಸು
ಹಸಿವಾಸನೆ ಅಷ್ಟು ಸಹ್ಯವಲ್ಲ
ಈಗ, ರಂಗೇರುವ ಸರದಿ
ಪ್ರಮಾಣದಲ್ಲಿ ಅರಿಶಿನ ಹಾಕು
ಬಣ್ಣ ಹೆಚ್ಚಾದರೆ ಎಲ್ಲ ಮಸಿ, ಕಡಿಮೆಯಾದರೆ ಅದು ಚಿತ್ರಾನ್ನವಲ್ಲ !
ನಂತರ,
ಎಲ್ಲ ಪದಾರ್ಥಗಳು ಬೆರೆಯುವವರೆಗೆ, ಬೇಯುವವರೆಗೆ ಬಿಡು.
ಎಚ್ಚರ, ಒಲೆಯ ಕಡೆ ಗಮನ ವಿರಲಿ
ಉರಿ ಹೆಚ್ಚಾದರೆ ಸೀದು ಎಲ್ಲ ಕರುಕಲು ,
ಕಡಿಮೆಯಾದರೆ ಬೇಯದಿರಬಹುದು.
ಕರುಕಲು, ಅರ್ಧ ಬೆಂದದ್ದು ಎರಡೂ ದೇಹಕ್ಕೆ ಸುಖವಲ್ಲ
ಇನ್ನು ಅನ್ನ, ಮುದ್ದೆಯಾದರೆ,
ಅದು ಚಿತ್ರಾನ್ನಕ್ಕೆ ನಿರುಪಯೋಗಿ
ಹಾಗಂತ, ಪೂರ್ತ ಉದುರು ತಿನ್ನುವವರ್ಯಾರು?
ಅನ್ನವು ಹದವಾಗಿ ಬೆಂದು,ಮುದ್ದೆಯಾಗದಿದ್ದರೆ ,
ಅದು ಚಿತ್ರಾನ್ನವಾಗಲು ಯೋಗ್ಯ
ಕೊಬ್ಬು, ಖಾರ, ರಂಗು, ರುಚಿ, ಅನ್ನದ ಹದ ಎಲ್ಲ ಒಪ್ಪವಾಗಿದ್ದರೆನೇ ಚಿತ್ರಾನ್ನ ಚೆನ್ನ .
ತಂಗಳನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ್ನ ಮಾಡುವುದು ಪರಿಪಾಟ
ಅಜ್ಜಿ ಹೇಳಿದ ಚಿತ್ರಾನ್ನ:
ಮೊದಲು ಪಾತ್ರೆಯಲ್ಲಿ ಎಣ್ಣೆ ಇಡು
ಜೋಪಾನ,
ಕೊಬ್ಬು ಜಾಸ್ತಿಯಾಗಬಾರದು, ಹೃದಯಕ್ಕೆ ಒಳಿತಲ್ಲವಂತೆ
ಕಡಿಮೆಯಾದರೆ ದೇಹಕ್ಕೆ ಸತ್ವವೇ ದೊರಕದು !
ಎಣ್ಣೆ ಕಾಯಲು ಬಿಡು
ಕಾಯದ ಎಣ್ಣೆಗೆ ಒಗ್ಗರಣೆ ಕೊಟ್ಟರೆ,
ಹೊಟ್ಟೆಗೆ ತ್ರಾಸು
ನಂತರ,
ಸಾಸಿವೆ ಜೀರಿಗೆ ಹಾಕು
ಸ್ವಲ್ಪ ಚಟ ಪಟ ಸಿಡಿಯಲಿ
ಹುಷಾರು,
ಸಿಡಿಯುವಾಗ ದೂರ ನಿಲ್ಲು
ಆದರೆ ಸಿಡಿಯಲು ಬಿಡು,ಸಿಡಿದರೆ ಒಳಿತು !
ಈಗ, ಕಡಲೆಬೀಜ , ಕಡ್ಲೆ ಬೇಳೆ, ಉದ್ದಿನ ಬೇಳೆಯ ಸರದಿ
ಅನ್ನದ ಅಳತೆ ನೋಡಿ, ತಿನ್ನುವವರ ಹಲ್ಲು ನೋಡಿ
ಎಲ್ಲ ಅಳತೆಯಲ್ಲಿ ಹಾಕು
ಆಮೇಲೆ,
ಬೀಜ ಬೇಳೆ ಹದವಾಗಿ,
ಕೆಂಪಾದ ಮೇಲೆ
ಮೆಣಸಿನಕಾಯಿ, ಕರಿಬೇವು,ನೀರುಳ್ಳಿ ಹಾಕು
ಎರಡು ನಿಮಿಷ ಬಾಡಿಸು
ಹಸಿವಾಸನೆ ಅಷ್ಟು ಸಹ್ಯವಲ್ಲ
ಈಗ, ರಂಗೇರುವ ಸರದಿ
ಪ್ರಮಾಣದಲ್ಲಿ ಅರಿಶಿನ ಹಾಕು
ಬಣ್ಣ ಹೆಚ್ಚಾದರೆ ಎಲ್ಲ ಮಸಿ, ಕಡಿಮೆಯಾದರೆ ಅದು ಚಿತ್ರಾನ್ನವಲ್ಲ !
ನಂತರ,
ಎಲ್ಲ ಪದಾರ್ಥಗಳು ಬೆರೆಯುವವರೆಗೆ, ಬೇಯುವವರೆಗೆ ಬಿಡು.
ಎಚ್ಚರ, ಒಲೆಯ ಕಡೆ ಗಮನ ವಿರಲಿ
ಉರಿ ಹೆಚ್ಚಾದರೆ ಸೀದು ಎಲ್ಲ ಕರುಕಲು ,
ಕಡಿಮೆಯಾದರೆ ಬೇಯದಿರಬಹುದು.
ಕರುಕಲು, ಅರ್ಧ ಬೆಂದದ್ದು ಎರಡೂ ದೇಹಕ್ಕೆ ಸುಖವಲ್ಲ
ಇನ್ನು ಅನ್ನ, ಮುದ್ದೆಯಾದರೆ,
ಅದು ಚಿತ್ರಾನ್ನಕ್ಕೆ ನಿರುಪಯೋಗಿ
ಹಾಗಂತ, ಪೂರ್ತ ಉದುರು ತಿನ್ನುವವರ್ಯಾರು?
ಅನ್ನವು ಹದವಾಗಿ ಬೆಂದು,ಮುದ್ದೆಯಾಗದಿದ್ದರೆ ,
ಅದು ಚಿತ್ರಾನ್ನವಾಗಲು ಯೋಗ್ಯ
ಕೊಬ್ಬು, ಖಾರ, ರಂಗು, ರುಚಿ, ಅನ್ನದ ಹದ ಎಲ್ಲ ಒಪ್ಪವಾಗಿದ್ದರೆನೇ ಚಿತ್ರಾನ್ನ ಚೆನ್ನ .
ವಾಹ್! ರೆಸಿಪಿಗೂ ಒಂದು ಕವನ! ಆದರೆ ಇದು ಬದುಕಿಗೂ ಅನ್ವಯಿಸುತ್ತದೆ, ಅಲ್ಲವೆ?
ReplyDeleteಹೌದು ಸರ್, ಬದುಕೂ ಒಂಥರಾ ಚಿತ್ರಾನ್ನವೇ :)
ReplyDeleteಇಲ್ಲಿ ನಾ ಬರೆವ ಎಲ್ಲ ಪೋಸ್ಟ್ಗಳಿಗೆ
ಕಾಮೆಂಟ್ ಹಾಕುವ ನಿಮ್ಮ ಪ್ರೋತ್ಸಾಹ ಹಾಗು
ತಾಳ್ಮೆಗೆ ಧನ್ಯವಾದಗಳು ಸರ್
ಕವನ ಸೊಗಸಾಗಿದೆ ಕಣ್ರಿ.... ಹೊಸತನವಿದೆ... ಬರೀ ಚಿತ್ರಾನದ ತಯಾರಿ ಬಗ್ಗೆ ಮಾತ್ರ ಹೇಳಿಲ್ಲ ಎನ್ನುವುದನ್ನೂ ಕವನ ಅರ್ಥಮಾಡಿಸುತ್ತದೆ :)
ReplyDeleteಧನ್ಯವಾದಗಳು ಸರ್ :)
ReplyDelete