Thursday, December 01, 2011

ಸ್ವತಂತ್ರ ಗೀತ

೧.  ಆ ಸುಡುಗಾಡು ಲೇಖಕಿಗದೇನೋ, ಒಂದೇ ನೋವು
      ಅದೆಂಥದೋ ನಾಲ್ಕು ಸಾಲು ಬರೆದಳು
      ಕವಿತೆ ಅಂದಳು !
     ಅದೆಂತದೋ ಒಂದೆರಡು ಪುಟ ಬರೆದಳು
     ಕಥೆ (ವ್ಯಥೆ?) ಅಂದಳು !
     ಅದ್ಯಾರೋ ಇವಳ ತಧ್ಧಿಮಿ ಗೆ  ತಾಧಿಮಿ ಅಂದು
     ಇವಳು ಬರೆದ ತಿಕ್ಕಲಿಗೆ, ಅರ್ಥ ಕೊಡುವ ಪ್ರಯತ್ನ ಪಟ್ಟರು
     ವಿಮರ್ಶೆ ಅಂದರು !
     ಅಷ್ಟೆಲ್ಲ ಬರೆದೂ, ಅತ್ತೂ ಇನ್ನು ಆ ಮನೆಇಂದ ಬಿಕ್ಕಳಿಕೆ ನಿಂತಿಲ್ಲ !


೨   ಚಿಪ್ಪುಗಳ ತರಲು ತೆರಳಿದ್ದೆ  ತೀರಕ್ಕೆ 
    ತೀರದ ವಿಳಾಸ ಬದಲಾಗಿದ್ದನ್ನು ನನಗಾರು ಹೇಳಲೇ ಇಲ್ಲ !

೩   ಬರೆದ ಅಕ್ಷರಗಳಿಗೆಲ್ಲ ನೂರು ವಿವರಣೆ 
     ಅವಳಿಗೋ ಕಾಣದ ಭಾವಗಳದ್ದೆ ಭವಣೆ!

೪  ಪೋಣಿಸದೆ ಚಲ್ಲಾಪಿಲ್ಲಿಯಾಗಿವೆ  ನೂರು ಮುತ್ತುಗಳು
     ಸಾಯಲಿ, ಮುತ್ತುಗಳಿಗೇಕೆ ದಾರದ ಬಂಧನ !

4 comments:

  1. ಚೆಲ್ಲಾಪಿಲ್ಲಿಯಾಗಿ ಬಿದ್ದ ಈ ಕವನ-ಮುತ್ತುಗಳ ಚೆಲುವಿಗೆ ಖುಶಿ ಪಡುವ ರಸಿಕರಿದ್ದಾರೆ! ಸುಭಾನ ಅಲ್ಲಾಹ್!!

    ReplyDelete
  2. ಪಬ್ಲಿಶ್ ಮಾಡಿದ ಮೇಲೆ ಮಾದಬರದಿತ್ತೇನೋ ಅನಿಸಿತ್ತು ಸರ್ ..
    ಧನ್ಯವಾದಗಳು

    ReplyDelete
  3. ಸಾಯಲಿ, ಮುತ್ತುಗಳಿಗೇಕೆ ದಾರದ ಬಂಧನ !

    ಹೌದದು....

    ಚಂದ !! ಚಂದ ನೋಡಿ...... ಚಂದವಾದದ್ದೆಲ್ಲಾ ನಮ್ ಸೆರೆಯಲ್ಲಿರಬೇಕು ಅನ್ನೋದು ಮನುಷ್ಯನ ಪಾಲಸಿ....

    ಗಿಳಿ ಪಂಜರದಿಂದ ಹಾರಿ ಹೋದ್ರೆ ಹಾರಿ ಹೋಯ್ತಲ್ಲಾ ಅಂತ ಬೇಜಾರ್ ಮಾಡ್ಕೋತೆವೆ.....

    ಅಬ್ಬಾ ಸ್ವತಂತ್ರವಾಯ್ತಲ್ಲಾ ಅಂತ ಯಾರನ್ತಾರೆ ಹೇಳಿ.....

    ಚನ್ನಾಗಿದೆ.

    ReplyDelete
  4. ನಿಮ್ಮ ಬಳಕೆಯ ಹೆಸರು ಚೆನ್ನಾಗಿದೆ.
    ಧನ್ಯವಾದಗಳು

    ReplyDelete