ಸಾಕಾಗಿದೆ ಪರದೆಯ ಒಳಗಿನ ಬದುಕು
ಪ್ರೀತಿ, ದ್ವೇಷ , ಅಳು, ನಗು ಎಲ್ಲವನ್ನೂ ಅಳೆ ಅಳೆದಳಿದು ಕೈ ಸೋಲುತ್ತಿದೆ .
ಸರಿಸಬೇಕಿದೆ ನಾನೀ ಪರದೆಯನ್ನ ,
ಹೇಳಬೇಕಿದೆ ಲೋಕಕ್ಕೆ ,
ನನ್ನದೇ ಹಕ್ಕುಗಳಿಗಾಗಿ ಬಡಿದಾಡುವಂತೆ ಮಾಡಿದ್ದು ನೀವು,
ನನ್ನಲ್ಲಿದ್ದ ರಾಕ್ಷಸಿಯನ್ನ ಬಡಿದೆಬ್ಬಿಸಿದ್ದು ನೀವು ,
ಪರದೆಯೊಳಗೆ ನನ್ನ ದೂಡಿದ್ದು ನೀವು.
ಪರದೆಯೇನೋ ತೆರೆದೆ,
ಆದರೆ ತಪ್ಪಿದೆ ಮುಕ್ತ ಗಾಳಿಯ ಅಭ್ಯಾಸ,
ಆಡುತ್ತಲೇ ಇಲ್ಲ ನನ್ನ ಶ್ವಾಸ,
ಇಲ್ಲಿ ಎಲ್ಲೆಲ್ಲೂ ಬರಿ ಧೂಳು ಕಸ.
ಲೋಕವೂ ಬಾಯ್ಬಿಟ್ಟಿತು,
ಹುಟ್ಟಿದ ಎಲ್ಲ ಜೀವಿಗಳೂ ಹಕ್ಕಿಗಾಗಿ ಬಡಿದಾಡಬೇಕು,
ತುತ್ತಿನ ಚೀಲ ತುಂಬಲು ರಾಕ್ಷಸ ಏಳಲೇ ಬೇಕು ,
ಪರದೆ ಇಲ್ಲದೇ ಬದುಕಲು ಸ್ವಲ್ಪ ಧೈರ್ಯ ಬೇಕು.
ಇಷ್ಟು ಕೇಳಿ, ನಾ ಮೌನದ ಮೊರೆ ಹೊಕ್ಕೆ
ಧೈರ್ಯ ಕೊಡುವ ಶಕ್ತಿ ಇದೆಯಂತೆ ಅದಕೆ ಅದಕ್ಕೆ.
ಈ ಸಾಲುಗಳನ್ನ ಬರೆದದ್ದು ಜೋಗಿಯವರ "ಸಂತಾಪ" ಕಥೆ ಓದಿದ ಮೇಲೆ.
"ಬೇಕಾದ ಹಾಗೆ ಬದುಕುವ ಸ್ವತಂತ್ರ ಒಂದು ದೀರ್ಘಹೋರಾಟದ ಫಲ" -ತೇಜಸ್ವಿ

ಮುಖವಾಡವಿಲ್ಲದೆ ಬದುಕುವದು ಕಷ್ಟವೇ. ಅನೇಕರು ಕನಸುಗಳಲ್ಲಿಯೂ ಮುಖವಾಡವನ್ನು ಹಾಕಿಕೊಂದಿರುತ್ತಾರೆ!
ReplyDeleteಜೋಗಿಯವರ ಕತೆಯ ಲಿಂಕ್ ಕೊಡುತ್ತೀರಾ,ಪ್ಲೀಜ್?
This comment has been removed by the author.
ReplyDelete:).
ReplyDeleteಕಥೆ ಅವಧಿಯಲ್ಲಿ ಬಹಳ ದಿನಗಳ ಹಿಂದೆ ಬಂದಿತ್ತು ಸರ್.
ಈಗ ಮತ್ತೆ ಅದನ್ನ, "ಫೆಸ್ ಬುಕ್ ಡಾಟ್ ಕಾಂ / ಮಾನಸ ಜೋಷಿ" ಪುಸ್ತಕದಲ್ಲಿ
ಸೇರಿಸಿದ್ದಾರೆ
Link : http://avadhimag.com/?p=39346
Swarna