ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ, ಸ್ಕೂಲ್ ಬಿಟ್ಟಿತ್ತು
ಅವನ ಶಾಲೆಯೂ ಅಲ್ಲೇ ಹತ್ತಿರದಲ್ಲಿತ್ತು. ಹಾಗೆ ಮನೆಗೆ ನಡೆದು ಹೋಗುತ್ತಿದ್ದ.
ಜೊತೆಯಲ್ಲಿದ್ದ ಗೆಳತಿಗೆ ನಿಂತು ಮಾತಾಡುವಷ್ಟಲ್ಲದಿದ್ದರೂ ನೋಡಿದಾಗ ಮುಗುಳ್ನಗುವಷ್ಟು
ಅವನ ಪರಿಚಯವಿತ್ತು. ಅವನನ್ನ ನೋಡಿ ನಕ್ಕಳು, ಅವನೂ ನಕ್ಕ.
ನಗುವಿನ ವಿವರಗಳು ನೆನಪಿಲ್ಲವಾದರೂ, ಆ ನಗುವಿನ ನೆನಪು ಸುಂದರವಾಗಿದೆ.
ಶಾಲೆಯ ಯುನಿಫಾರ್ಮ್ ದಾಟಿ ಎಷ್ಟೋ ಕನಸುಗಳು ಹುಡುಗ ಹುಡುಗಿಯರಲ್ಲಿ ಹುಟ್ಟುತ್ತವೆ.
ಹಾಗೆ ಹುಟ್ಟಿದ್ದ ಅವ ನನ್ನಲ್ಲಿ. ಬಹುಶ ಹೆಣ್ಣು ಹಡೆವುದನ್ನ ಬಹಳ ಬೇಗ ಆರಂಭಿಸುತ್ತಾಳೆ.
ಆಮೇಲೆ ಅದೆಷ್ಟೋ ದಿನ ನಾನವನನ್ನ ನೋಡಲೇ ಇಲ್ಲ. ನಿಜ ಹೇಳಬೇಕೆಂದರೆ ನೋಡಲೇ ಬೇಕೆಂಬ
ಹಂಬಲವೂ ಇದ್ದಿಲ್ಲ.
ಅದೆಷ್ಟೋ ತಿಂಗಳ ನಂತರ ನಾನೊಬ್ಬಳೇ ಮನೆಗೆ ನಡೆದು ಹೋಗುತ್ತಿದ್ದೆ, ಆಗ ಅದೆಲ್ಲಿಂದಲೋ ಎದುರಿಗೆ ಬಂದ.
ಪರಿಚಯದ ಮುಗುಳ್ನಗೆ ನಕ್ಕ, ನಾನೂ ನಕ್ಕೆ. ಕೈಗೆ ಸಿಗದ ಚಂದ್ರನತ್ತ ಕೈ ಚಾಚಿದ್ದೆ.
"ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು "
ಮುಂದುವರಿಯುವುದು.........
ಯಾಕೋ ನನಗೆ ನನ್ನ ಹಳ್ಳಿಯ ಬಾಲ್ಯ ಗುರುತು ತಂದಿರಿ.
ReplyDeleteಅಲ್ಲಿ ಮೀನಾಕ್ಷಿ ಮತ್ತು ನನ್ನ ನನ್ನ ನಡುವಿನ ಅಗೋಚರ (!) ಗೆಳೆತನವೂ ಹೀಗೇ ಇತ್ತು!
ವಾರೆವಾ, ಈ ಆರಂಭ ಒಂದು ಅದ್ಭುತ ಕಥೆಯ ಮುನ್ನುಡಿಯಾಗಲಿ.
ನನ್ನ ಬ್ಲಾಗಿಗೂ ನಿಮಗೆ ಸ್ವಾಗತ, ಅಲ್ಲಿ ಒಂದು ಹೊಸ ನದಿಯ ಕವನವಿದೆ.
facebook profile : Badarinath Palavalli
ಯಾವ ಸ್ವಾರ್ಥವೂ ಇಲ್ಲದ, ಈ ಅನಿಮಿತ್ತ ಸ್ನೇಹದ ಸುಖವೇ ನಿಜವಾದ ಸುಖ. ಈ ಒಂದು ಭಾವವನ್ನು ಅಷ್ಟೆ ಹಗುರಾಗಿ, ಸಮುಚಿತವಾಗಿ ವರ್ಣಿಸಿದ್ದೀರಿ. ಓದುತ್ತಿದ್ದಂತೆ, ನಮಗೂ ಅದೇ ಅನುಭವವಾಗುತ್ತದೆ. ಇದೇ ಉತ್ತಮ ಲೇಖನದ ಪ್ರಮಾಣ.
ReplyDeleteಇಂಥಹ ಪುಟ್ಟ ಪ್ರಯತ್ನವ ಓದಿ ಮೆಚ್ಚಿದ ನಿಮಗಿಬ್ಬರಿಗೂ
ReplyDeleteವಂದನೆಗಳು ಸರ್.