ಈ ಸ್ಥಳದಲ್ಲಿ ಇನ್ನು ಬರೆಯಲೆಬಾರದೆಂದು ನಿರ್ಧರಿಸಲು ಕಾರಣಗಳು ಹಲವು.
ಹಿಂದೆ ಹೇಳಿದಂತೆ ಸುಂದರವಾದ ಹೂದೋಟದಲ್ಲಿ ಕಳೆ ಕಡಿಮೆಯಾದಷ್ಟು ಒಳ್ಳೆಯದು.
ಒಮ್ಮೊಮ್ಮೆ ಧಿಡೀರನೆ ಕಾಡುವ ಕ್ಷಣಿಕ ವೈರಾಗ್ಯ :)
ಇಷ್ಟೆಲ್ಲಾ ಇದ್ಯಾಗ್ಯು ಮತ್ತೆ ಬರೆಯಬೇಕೆಂಬ ತುಡಿತ ಸದಾಕಾಲ.
ಆದ್ದರಿಂದ ಇದು ಸೂತಕದ ನಂತರದ ಮಂಗಳ ಸ್ನಾನ.
ಮತ್ತೆ ಇಲ್ಲಿ ಅಕ್ಷರಗಳ ಪೋಣಿಸುವಂತೆ ಪ್ರೋತ್ಸಾಹಿಸಿದ ಸುನಾಥ್ ಸರ್, ಬದರಿ ಸರ್,
ಅಜಾದ್ ಸರ್, ಕೀರ್ತಿ ಮತ್ತು ಡಾಕ್ಟರರಿಗೆ ವಂದನೆಗಳು. ಯಾಕೋ ಯಾವ ಕಾಮೆಂಟನ್ನು
ಇಲ್ಲಿ ಪಬ್ಲಿಶ್ ಮಾಡುವ ಮನಸಾಗಲಿಲ್ಲ ಕ್ಷಮಿಸಿ.
ಕಥೆಯಾದ ಪ್ರೀತಿಯ ಮುಂದಿನ ಭಾಗ ಕೆಳಗಿದೆ :
----------------------------------------------------------------------------------------------------------------
ಒಂಬತ್ತನೇ ತರಗತಿ ಒಂಥರಾ ಮಜವಾಗಿರತ್ತೆ. ಈ ಕಡೆ ಸಣ್ಣವರಲ್ಲ , ಆ ಕಡೆ ದೊಡ್ಡವರಲ್ಲ. ಹೈ ಸ್ಕೂಲಿನ ಮಧ್ಯದ ಕೊಂಡಿ.
ತ್ರಿಶಂಕು ಸ್ವರ್ಗವೂ ಶಾಲೆಯ ಪರಿಮಿತಿಯಲ್ಲಿ ಹಿತ .
ಹದಿನಾಲ್ಕರ ವಯಸು, ಒಂಥರಾ ವಿಚಿತ್ರ. ಬಾಲ್ಯ ಮರೆಯಾಗಿರುತ್ತೆ,ಹರೆಯ ಇನ್ನೂ ಪೂರ್ತಿ ಬಂದಿಲ್ಲ, ಹೆಣ್ಣಾದರೆ ಹೆಣ್ಣೆಂಬ ಸತ್ಯದ ಅರಿವಾಗಿರುತ್ತೆ,ಗಂಡಾದರೆ ಮೀಸೆ ಚಿಗುರುವ ಹೊತ್ತಾಗಿರುತ್ತೆ.
ಹರೆಯ ಕಾಲಿಟ್ಟ ಮಕ್ಕಳನ್ನ (ಹಾಗಂತ ನಾ ಮುದುಕಿಯಲ್ಲ) ನೋಡುವುದೇ ಮಜಾ.
ಹೆಣ್ಣಾದರೆ ಕನ್ನಡಿ ಮುಂದೆ ತುಸು ಹೆಚ್ಚು ನಿಲ್ಲುತ್ತಾಳೆ, ಅದಾವುದೋ ಕಾಣದ ಅಥವಾ ಕಾಣುವ
ಕಣ್ಣಿನ ಹೊಗಳಿಕೆಗಾಗಿ ಚಡಪಡಿಸುತ್ತಾಳೆ, ಮತ್ತೊಬ್ಬ ಹುಡುಗಿ ಸಿಕ್ಕರೆ ಕೈ ಕೈ ಹಿಡಿದು ಗಂಟೆ ಗಟ್ಟಲೆ
ಕೂರುತ್ತಾಳೆ ಅಥವಾ ಜೊತೆಯಾಗಿ ನಡೆಯುತ್ತಾಳೆ, ಒಟ್ಟಿನಲ್ಲಿ ಸ್ಪರ್ಶ ಬೇಕು, ಅಮ್ಮನೊಂದಿಗೆ ಮದುವೆ ಮನೆ, ಗುಡಿ ಗುಂಡಾರಗಳಿಗೆ ಹೋಗುವುದು ಬೋರೋ ಬೋರು, ಅವನ ಕಣ್ಣಲ್ಲಿ ತನ್ನ ಚಂದದ ಬಗ್ಗೆ ಪ್ರಶಂಸೆ ಕಂಡರೆ ಧನ್ಯವಾಯಿತು ದಿನ,
ಇನ್ನು ಆ ದಿನವೆಲ್ಲ ನಗುವೇ.
ಗಂಡಾದರೆ ಸದಾ ಮೂಡದ ಮೀಸೆಯ ಮೇಲೊಂದು ಕಣ್ಣು, ಅಪ್ಪನ ಥರ ನಾನೂ ಅಕ್ಕ ತಂಗಿಯರ ರಕ್ಷಿಸಬಲ್ಲೆ
ಎಂಬ ವಿಶ್ವಾಸ ಅವರ ಮೇಲೆ ಜಬರ್ದಸ್ತಿ ಮಾಡುವ ಅಧಿಕಾರ ಕೊಡುತ್ತೆ, ಯಥಾ ಶಕ್ತಿ ಸೈಕಲ್ಲೋ ,ಸ್ಕೂಟರ್ರೋ
ಅವಳ ಮುಂದೆ ಬೆಳಕಿಗಿಂತಲೂ ವೇಗವಾಗಿ ಚಲಾಯಿಸಿ ಅವಳನೊಮ್ಮೆ ತಿರುಗಿ ನೋಡುವಂತೆ ಮಾಡ ಬೇಕೆಂಬ ತುಡಿತ ಸದಾ ಕಾಲ, ಬೇರೆ ಬೇರೆ ಚಟಗಳು ಪ್ರಾರಂಭವಾಗಲು ಪ್ರಶಸ್ತ ಕಾಲ. ಹುಡುಗ ಹುಡುಗಿಯರ ಈ ವಿವರಣೆ ಹಾಗೆ ಸುಮ್ಮನೆ.
ನಾನು ಮತ್ತು ಆ ಗೆಳತಿ ಒಂದೇ ತರಗತಿಯಾದರೂ ಬೇರೆ ಬೇರೆ ವಿಭಾಗ.ಶಾಲೆ ಪ್ರಾರಂಭವಾಗಿ ಕೆಲ ದಿನಗಳ ನಂತರ ಅವಳ ಭೇಟಿಯಾಯ್ತು.ಯಾಕೋ ಅವ ಸಿಕ್ಕಿದ್ದು, ಮಾತಾಡಿದ್ದು ನಾ ಹೇಳಲೇ ಇಲ್ಲ.
ಕಿಚ್ಚು ಹೊತ್ತಿಸ ಬೇಕೆಂಬ ಕಿಚ್ಚೇ ಉರಿದುಹೊಗಿತ್ತೆ ಅವನ ಭಾವದಲ್ಲಿ ?

ಹದಿಹರೆಯದ ಹುಡುಗ, ಹುಡುಗಿಯರ ಅಂತರಂಗವನ್ನು ಸ್ವಾರಸ್ಯಪೂರ್ಣವಾಗಿ ಬಿಚ್ಚಿಟ್ಟಿದ್ದೀರಿ. ನನಗೂ ಹಳೆಯ ದಿನಗಳು ನೆನಪಾದವು! ಮುಂದಿನ ಭಾಗಕ್ಕಾಗಿ ಕಾಯುತ್ತಿರುತ್ತೇನೆ.
ReplyDeleteಕಚಗುಳಿ ಇಡೋ ಬರಹ..
ReplyDeleteಮತ್ತೆ ಹಳೆಯ ದಿನಗಳನ್ನ ನೆನಪಿಸುತ್ತೆ..
Gud one
ನಿಮ್ಮ ಬರಹಗಳ ವೈಶಿಷ್ಟ್ಯವೆಂದರೆ ಅವು ಮೂರ್ತರೂಪದ ಅಮೂರ್ತ ಕಲ್ಪನೆಗಳು.
ReplyDeleteನೀವು ಬರೆಯ ಬೇಕು, ಬ್ರೆದಷ್ಟು ನಮ್ಮ ಓದಿಗಿ ಸಿಗುತ್ತೀರಿ. ಇಂಥಹ ಸ್ವಾರ್ಥಗಳೇ ನಮ್ಮ ಆಂತರ್ಯದ ವೈರಾಗ್ಯದ ನಾಶಕಗಳು.
ಬರಹ ಸೂಪರ್, ತಾರುಣ್ಯದ ಚಿತ್ರನ ಸಖತ್ತಾಗಿ ಕಟ್ಟಿಕೊಟ್ಟಿದ್ದೀರಿ.
ಗೆಳತಿಯನ್ನು ಉರಿಸುವ ಉಮೇದಿ ಇರಬೇಕಿತ್ತು ಮೇಡಂ!
facebook probile
Badarinath Palavalli
ಓದಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು
ReplyDeleteಎಲ್ಲವೂ ಕ್ಷಣಿಕ...ಹಾಗೆ ಬ್ಲಾಗ್ ನಲ್ಲಿ ಬರೆಯಬಾರದೆಂದು ಬಯಸಿದ ನಿಮ್ಮ ನಿರ್ಧಾರವೂ ಕ್ಷಣಿಕ ವಾಗಿರಲಿ ...ನೀವು ಬರೀತಾ ಇರಿ......
ReplyDeleteಚೆನ್ನಾಗಿದೆ ನಿಮ್ಮ ಕಥೆ........ಮುಂದಿನ ಭಾಗಕ್ಕಾಗಿ ಕಾಯುತಿದ್ದೇನೆ....
http://ashokkodlady.blogspot.com/
ಧನ್ಯವಾದಗಳು
ReplyDelete