Monday, January 23, 2012

ನಿರ್ಧಾರ

ಅಂತರ್ಜಾಲದಲ್ಲಿ ತುಂಬಾ ಒಳ್ಳೆ ಲೇಖಕರಿದ್ದಾರೆ ಎಂಬುದು
ಬ್ಲಾಗ್ ಓದುಗರೆಲ್ಲರಿಗೂ ತಿಳಿದ ವಿಚಾರ. ಇತ್ತೀಚಿಗೆ ಕೆಲಸದ ಒತ್ತಡ
ಕಡಿಮೆ ಇರುವುದರಿಂದ ಎಷ್ಟೋ ಬ್ಲಾಗುಗಳನ್ನ ನಾನು ಮೊದಲ ಬಾರಿ ಓದಿದ್ದೇನೆ.
ಸುಂದರವಾದ ಪದ್ಯಗಳು, ಅದ್ಭುತ ವಿಚಾರಗಳು , ಯಾವಾಗಲೋ ಸ್ಕೂಲಿನಲ್ಲಿ  ಕಲಿತ
ಕನ್ನಡ ಸಾಹಿತ್ಯ, ಹಾಗೆ ಓದಿಸಿಕೊಂಡು ಹೋಗುವ ಲೇಖನಗಳು , ನಗಿಸುವ, ಅಳಿಸುವ ಕಥೆಗಳು ,
ಬಾಯಲ್ಲಿ ನೀರೂರಿಸುವ ಅಡಿಗೆಗಳು...ಪಟ್ಟಿ ಮಾಡುತ್ತಲೇ ಇರಬಹುದೇನೋ ?

ಹೀಗೆ ಬರೆದವುಗಳನೆಲ್ಲ ಓದಿ  ಮತ್ತೆ ಈ ಬ್ಲಾಗ್ ಮೇಲೆ ಕಣ್ಣಾಡಿಸಿದಾಗ ಅನಿಸಿದ್ದು :

ಗಟ್ಟಿ ಕಾಳುಗಳ
ನಡುವೆ, ಎಷ್ಟೊಂದು ಜೊಳ್ಳು
ಎಲ್ಲ ಅಳಿಸಲೇ?

ಅಳಿಸಲು ಧೈರ್ಯ
ವಿದೆಯೇ? ವರ್ಷಗಳ ಹೆಜ್ಜೆ
ಮೂಡಿದ ಹಾದಿಗಳ

ಯಾರಿಗೆ ಬೇಕು
ಮಣ್ಣಲ್ಲಿ ಹೂತು, ಮರೆ
ಯಾಗ್ವ  ಗುರುತು?

ಧೂಳಾದರೇನು,
ಮಣ್ಣ ಕಣವಾದರೇನು,
ಅಸ್ತಿತ್ವವಿಲ್ಲವೇ?

ಅನಂತ  ಸೃಷ್ಟಿ
ಯಲ್ಲಿ, ಕಣಕ್ಕೂ ಪಾಲೇ?
ಯಾಕಾಗಬಾರದು?

ಕಣವೊಂದು ಮರೆ
ಯಾಗೆ, ಯಾರಿಗೆ ನಷ್ಟ?
ಯಾರಿಗೂ ಇಲ್ಲ.













No comments:

Post a Comment