Monday, March 23, 2009

ಕಳೆದು ಹೋಗಿದೆ ಕವಿತೆ

"ಕಳೆದು ಹೋಗಿದೆ ಕವಿತೆ
ಹುಡುಕುತ್ತೇನೆ ನಾನದನು ಇಟ್ಟಿಗೆಯ ಸಂದಿಗಳಲಿ
ಬಾಗಿಲ ಹಿಂದಿನ ಮೂಲೆಗಳಲಿ,
ಕೊಗೋಣ ವೆಂದರೆ ಏನೆಂದು ಕರೆಯುವುದು?
ಹೆಸರಾದರು ಇಟ್ಟಿದ್ದರೆ....."

"ಪುಟ್ಟದೊಂದು ಗುಬ್ಬಿ ಮರಿ ಬಿದ್ದಿದೆ ಗೂಡಿನ್ದಾಚೆ
ಹುಡುಕಿದರೆ ಸಿಗಲೊಲ್ಲದು ಗೂಡು,
ಅಲ್ಲಿದ್ದ ಮನೆ, ಗೂಡು ಎಲ್ಲವ ಎತ್ತೊಯ್ದಿದೆ ಅದಾವೊದೋ ಬಲ್ದೊಜ್ಯರ್,
ಈಗ ಗುಬ್ಬಿ ಮರಿ ಪ್ರಾಣಿ ದಯಾ ಸಂಗದ ಕೈಲಿ,
ಆದರೆ ಅದಕೆಕೋ ಈ ಗೂಡು ಗೂಡು ಎನಿಸುತ್ತಲೇ ಇಲ್ಲ !"

"ದೊಡ್ಡದೊಂದು ಹೂವಿನ ಮರ ಬಿದ್ದು ಹೋಯ್ತು,
ಆಲಯ ಕತ್ತಲಿಕ್ಕಾಗಿ,
ಅದೆಷ್ಟು ಮೈನಾಗಳು ಗೂಡ ಕಳೆದುಕೊಂದವೋ,
ಲೆಕ್ಕ ಇಡುವವರ್ಯಾರು? ಈ ನಿರಾಶ್ರಿತರಿಗಾಗಿ ಹೋರಾಡುವವರ್ಯಾರು?"


ಇತ್ತೀಚಿಗೆ ಪತ್ರಿಯಲ್ಲೊಂದು ಸುದ್ದಿ ಬಂದಿತ್ತು, ೨೫ ಸಾವಿರ ಖರ್ಚು ಮಾಡಿ ಒಂದು ಮುದುಕಿ ಮರವೊಂದನು
ಉಳಿಸಿಕೊಂಡಿತ್ತು. ಬಹುಶ ಈ ಮೈನಾಗಳಿಗಾಗಿ ಅಂಥವರು ಹೋರಾಡಬಹುದೇನೋ?

No comments:

Post a Comment