ಆಸೆ ಇಂದಲೋ , ಪ್ರೀತಿಇಂದಲೋ,
ಇನ್ಯಾವುದೋ ಭಾವದಿಂದಲೋ
ಹಾಕಿದೊಂದು ಬೀಜದಿಂದ ಬಳ್ಳಿಯೊಂದು ಹಬ್ಬಿತ್ತು.
ಸೃಷ್ಟಿ ನಿಯಮಕೆ ಸಾಕ್ಷಿಯಾಗಿತ್ತು
ಮಾಲಿಗದ ಕಂಡರೆ ಮುದ್ದು
ಎಲ್ಲ ನಿರ್ಭಂದಗಳೂ ಅದಕೆ ರದ್ದು
ಎಲ್ಲಿಂದರಲ್ಲಿ ಕಾಲಿಗೆ ತೊಡರುವ ಬಳ್ಳಿ
ಅಚ್ಚ ಮಲ್ಲಿಗೆ ಬಿಡುವ ಬಿಚ್ಚು ಬಳ್ಳಿ
ಹಬ್ಬುತ್ತಲೇ ಹೋಯ್ತು ಬಳ್ಳಿ ಸ್ವಚ್ಚಂದದಿಂದ
ಮಾಲಿ ನೋಡುತ್ತಿದ್ದ ಪ್ರೀತಿ, ಗರ್ವದಿಂದ
ಹೂ ಬಿಟ್ಟ ಬಳ್ಳಿ ಆಹಾ ಎನಾನಂದ
ಇದೇ ಪೂ ನಾಕ ಕಾಣಿರೆಂದ
ಒಂದು ದಿನ ಮಾಲಿಗದೆನ್ನೆನಿಸಿತೋ ಬಳ್ಳಿಯ ಕಡಿದ
ಚೂರು ಬೇರ, ತೆಗೆಯ ಲಾರದೆ, ತೆಗೆದ
ಇನ್ನೊಂದು ತೋಟದಲಿ ನೆಟ್ಟ
ಅದೆರೆಲ್ಲ ಹೊಣೆಯ ಇನ್ನೊಬ್ಬ ಮಾಲಿಗೆ ಬಿಟ್ಟ
ಹೊಸ ತೋಟ ಹೊಸ ಮಣ್ಣು
ನೋಡುತ್ತಿದ್ದಾವೆ ಅದೆಷ್ಟೊಂದು ಕಣ್ಣು
ಬಳ್ಳಿಗೆ ಎಲ್ಲವೂ ಹೊಸದು
ಮಾಡಲೇನೂ ತೋಚದು
ಹೊಸ ತೋಟದಲ್ಲಿ ಹೊಸ ಚಪ್ಪರ
ಹೊಸ ನೀರು ಹೊಸ ಗೊಬ್ಬರ
ಬಳ್ಳಿಯ ಧರ್ಮ ಹಬ್ಬುವುದು
ಹಬ್ಬುತ್ತ ಹಬ್ಬುತ್ತ ಹೂ ಬಿಡುವುದು
ಧರ್ಮ ಪಾಲನೆಯಾಯಿತು
ಬಳ್ಳಿ ಅಷ್ಟಿಷ್ಟು ಬೆಳೆಯಿತು
ಆಮೇಲೆ ನಡೆದದ್ದು ಸಂಸಾರ ಸಮರ
ಅದು ಬಿಟ್ಟಿಲ್ಲ ಯಾವ ಪಾಮರರ
ಹೊಸ ತೋಟದ ಹಕ್ಕಿಗಾಗಿ ಗುದ್ದಾಟ
ಇಲ್ಲದ ಇದ್ದ ಎಲ್ಲದಕ್ಕಾಗಿ ಕಾದಾಟ
ಒಬ್ಬನಿಗೆ ಬಳ್ಳಿಯ ಹೂ ಬೇಕು
ಅದ್ಯಾವನೋ ದೇವರಿಗೆ ಎಲೆಯೂ ಬೇಕು !
ಈ ತೋಟದಲ್ಲೆಲ್ಲ ಇದೆ ಸವಿ ಮಣ್ಣು, ಸಾರ ಗೊಬ್ಬರ
ಹಬ್ಬಲು ಕಾದಿದೆ ವಿಶಾಲ ಚಪ್ಪರ
ಎಲ್ಲ ಕೊಟ್ಟ ಮಾಲಿ ಕಿತ್ತುಕೊಂಡ ಒಂದು ವಸ್ತುವ
ಹಬ್ಬುವ ಸ್ವತಂತ್ರವ!
ಇನ್ಯಾವುದೋ ಭಾವದಿಂದಲೋ
ಹಾಕಿದೊಂದು ಬೀಜದಿಂದ ಬಳ್ಳಿಯೊಂದು ಹಬ್ಬಿತ್ತು.
ಸೃಷ್ಟಿ ನಿಯಮಕೆ ಸಾಕ್ಷಿಯಾಗಿತ್ತು
ಮಾಲಿಗದ ಕಂಡರೆ ಮುದ್ದು
ಎಲ್ಲ ನಿರ್ಭಂದಗಳೂ ಅದಕೆ ರದ್ದು
ಎಲ್ಲಿಂದರಲ್ಲಿ ಕಾಲಿಗೆ ತೊಡರುವ ಬಳ್ಳಿ
ಅಚ್ಚ ಮಲ್ಲಿಗೆ ಬಿಡುವ ಬಿಚ್ಚು ಬಳ್ಳಿ
ಹಬ್ಬುತ್ತಲೇ ಹೋಯ್ತು ಬಳ್ಳಿ ಸ್ವಚ್ಚಂದದಿಂದ
ಮಾಲಿ ನೋಡುತ್ತಿದ್ದ ಪ್ರೀತಿ, ಗರ್ವದಿಂದ
ಹೂ ಬಿಟ್ಟ ಬಳ್ಳಿ ಆಹಾ ಎನಾನಂದ
ಇದೇ ಪೂ ನಾಕ ಕಾಣಿರೆಂದ
ಒಂದು ದಿನ ಮಾಲಿಗದೆನ್ನೆನಿಸಿತೋ ಬಳ್ಳಿಯ ಕಡಿದ
ಚೂರು ಬೇರ, ತೆಗೆಯ ಲಾರದೆ, ತೆಗೆದ
ಇನ್ನೊಂದು ತೋಟದಲಿ ನೆಟ್ಟ
ಅದೆರೆಲ್ಲ ಹೊಣೆಯ ಇನ್ನೊಬ್ಬ ಮಾಲಿಗೆ ಬಿಟ್ಟ
ಹೊಸ ತೋಟ ಹೊಸ ಮಣ್ಣು
ನೋಡುತ್ತಿದ್ದಾವೆ ಅದೆಷ್ಟೊಂದು ಕಣ್ಣು
ಬಳ್ಳಿಗೆ ಎಲ್ಲವೂ ಹೊಸದು
ಮಾಡಲೇನೂ ತೋಚದು
ಹೊಸ ತೋಟದಲ್ಲಿ ಹೊಸ ಚಪ್ಪರ
ಹೊಸ ನೀರು ಹೊಸ ಗೊಬ್ಬರ
ಬಳ್ಳಿಯ ಧರ್ಮ ಹಬ್ಬುವುದು
ಹಬ್ಬುತ್ತ ಹಬ್ಬುತ್ತ ಹೂ ಬಿಡುವುದು
ಧರ್ಮ ಪಾಲನೆಯಾಯಿತು
ಬಳ್ಳಿ ಅಷ್ಟಿಷ್ಟು ಬೆಳೆಯಿತು
ಆಮೇಲೆ ನಡೆದದ್ದು ಸಂಸಾರ ಸಮರ
ಅದು ಬಿಟ್ಟಿಲ್ಲ ಯಾವ ಪಾಮರರ
ಹೊಸ ತೋಟದ ಹಕ್ಕಿಗಾಗಿ ಗುದ್ದಾಟ
ಇಲ್ಲದ ಇದ್ದ ಎಲ್ಲದಕ್ಕಾಗಿ ಕಾದಾಟ
ಒಬ್ಬನಿಗೆ ಬಳ್ಳಿಯ ಹೂ ಬೇಕು
ಅದ್ಯಾವನೋ ದೇವರಿಗೆ ಎಲೆಯೂ ಬೇಕು !
ಈ ತೋಟದಲ್ಲೆಲ್ಲ ಇದೆ ಸವಿ ಮಣ್ಣು, ಸಾರ ಗೊಬ್ಬರ
ಹಬ್ಬಲು ಕಾದಿದೆ ವಿಶಾಲ ಚಪ್ಪರ
ಎಲ್ಲ ಕೊಟ್ಟ ಮಾಲಿ ಕಿತ್ತುಕೊಂಡ ಒಂದು ವಸ್ತುವ
ಹಬ್ಬುವ ಸ್ವತಂತ್ರವ!
ತೋಟಾಂತರ ಮಾಡುವ ಕಲ್ಪನೆ ಹಾಗು ರೂಪಕ ತುಂಬ ಚೆನ್ನಾಗಿವೆ. ಈ ಸಲ ಹೊಸ ಶೈಲಿಯಲ್ಲಿ ಕವನ ರಚಿಸಿದ್ದೀರಿ. ಶುಭಾಶಯಗಳು.
ReplyDeleteಸ್ಥಳಾಂತರ ಆದ ಬಳ್ಳಿಯ ಮತ್ತೆ ಬೆಳೆಯಗೊಟ್ಟು ಹಬ್ಬಗೊಟ್ಟು ಫಲಗೊಳಿಸಿದ್ದು ಒಂದೆಡೆಯಾದರೆ ಆ ಬಳ್ಳಿಯ ತೊಳಲಾಟ ಇನ್ನೊಂದೆಡೆಯ ಭಾವವ್ಯಕ್ತ ಗೊಳಿಸುಸಿರುವ ಪರಿ ಇಷ್ಟ ಆಯ್ತು...
ReplyDeleteಉತ್ತಮವಾದ ಪ್ರಯತ್ನ, ಹಾರ್ದಿಕ ಶುಭಾಶಯಗಳು.
ReplyDeleteಪ್ರತಿಕ್ರಿಯೆಗಾಗಿ ಭಟ್ ಸರ್ ಮತ್ತು ಅಜಾದ್ ಸರ್ ರವರಿಗೆ
ReplyDeleteಧನ್ಯವಾದಗಳು