![]() |
| ಚಿತ್ರಕೃಪೆ : ಅಂತರ್ಜಾಲ |
ಬದುಕನ್ನ ನಾವು ನೋಡುವ ರೀತಿ ಬದಲಾಗಬೇಕು , ಕನ್ನಡಕ ಕಳಚಿ ಪೊರೆಯನ್ನು ಹರಿದು ನೋಡಿದರೆ ಎಲ್ಲವೂ ಸುಂದರ , ಎಲ್ಲವೂ ಸಹ್ಯ. ಈ ಮಾತನ್ನ ವೇದಾಂತ ಬಲ್ಲವರಿಂದ ಹಿಡಿದು ಇಂದಿನ ವ್ಯಕ್ತಿತ್ವ ವಿಕಸನ ಗುರುಗಳವರೆಗೆ ಎಲ್ಲರೂ ಹೇಳುತ್ತಾರೆ, ಆದರೆ ಕೆಲವು ಮಾತುಗಳು ಕೇಳಿದಾಗ ತಲೆಯನ್ನು ತಲುಪಲಾರವು, ಅನುಭವಕ್ಕೆ ಬಂದು ಮೆದುಳಿನಲ್ಲಿ ಸ್ಥಾನ ಪಡೆದು ನಮ್ಮ ಭಾಗವಾಗುತ್ತವೆ.
ದಿನವೂ ಆಫೀಸಿನೆಡೆಗಿನ ಪಯಣದಲ್ಲಿ ಒಂದು ದೊಡ್ಡ ಸಿಗ್ನಲ್ ಸಿಗುತ್ತದೆ. ಅಲ್ಲೀಗ ಕಾಮಗಾರಿಗಳದ್ದೇ ಭರಾಟೆ. ಒಂದು ಸಿಗ್ನಲ್ ನಲ್ಲಿ ಕನಿಷ್ಠ 6 ಜನ ಟ್ರಾಫಿಕ್ ಪೊಲೀಸ್ ಇರುತ್ತಾರೇಂದರೆ ಅಲ್ಲಿನ ದಟ್ಟಣೆಯನ್ನು ಊಹಿಸಿಕೊಳ್ಳಿ. ಇಂದು ಸಿಗ್ನಲ್ ಬಳಿಯಲ್ಲಿ
ಇಂಪಾಗಿ ಯಾರೋ ಕೊಳಲು ನುಡಿಸಿದಂತಾಯಿತು. ಕೊಳಲು ಮಾರುವವರು ಸಾಮಾನ್ಯವಾಗಿ ಸುಪ್ರಸಿಧ್ಧ ಸಿನೆಮಾ ಹಾಡುಗಳನ್ನ ನುಡಿಸುವುದು ಮಾಮೂಲಿ, ಅವನನ್ನೊಮ್ಮೆ ನೋಡೋಣವೆಂದು ತಿರುಗಿದರೆ ನುಡಿಸಿದ್ದು ಕೊಳಲು ಮಾರುವವನಲ್ಲ , ಪೊಲೀಸಪ್ಪ ! ನುಡಿಸಿದ್ದು ತನ್ನ ಆಯುಧವಾದ ಸೀಟಿಯನ್ನ!
ತಿಂದು ಕೊಬ್ಬಿ ಗೂಡುಕಟ್ಟುವ
ರೇಷ್ಮೆಹುಳುವಿಗೇನು ಗೊತ್ತು
ಅದೇ ಗೂಡು ತನ್ನ
ಗೋರಿಯಾಗಲಿದೆ ಎಂದು
ಅದು ನೇಯುತ್ತಲೇ ಇರುತ್ತದೆ
ಅದು ಎಂಜಲು ಇದು ಮುಸುರೆ
ಎನ್ನುವ ಮಡಿ ಅಜ್ಜಿಗೆ ಗೊತ್ತಿಲ್ಲವೇ
ತಾನುಟ್ಟ ರೇಶಿಮೆ ಸೀರೆ
ಹುಳವೊಂದರ ಎಂಜಲು,
ಹೆಣವೊಂದನ್ನು ಹೊತ್ತು
ತಾನು ಮಡಿ ಮಡಿ ಎನ್ನುತ್ತಿದ್ದೇನೆಂದು ?
ಸೊಂಪಾಗಿ ಕಂಪು ಸೂಸುತ್ತಾ
ಬೆಳೆವ ಗಂಧಕ್ಕೇನು ಗೊತ್ತು
ಅದೇ ಕಂಪು ತನ್ನನ್ನು
ದೈವದ ಬಳಿಗೆ ತುಂಡುತುಂಡಾಗಿ ಕರೆದೊಯ್ಯುವುದೆಂದು
ತೇಯ್ದು ತೇಯ್ದು ತನ್ನ ಅಸ್ತಿತ್ವವೇ ಇಲ್ಲವಾಗುವುದೆಂದು
ಪಾಣಿ ಪಂಚೆಯನುಟ್ಟು ಗಂಧವ
ವಿಗ್ರಹಕ್ಕೆ ಪೂಸುವ ಆಚಾರ್ಯರಿಗೇನು
ಗೊತ್ತು ಸಾಣೆಕಲ್ಲ ಮೇಲಿನ ಪ್ರತೀ
ಸುತ್ತಿನಲ್ಲೂ ಒಂದು ಕಂಬನಿಯ ಹಾಡಿದೆ ಎಂದು ?
ಬಣ್ಣ ಬಣ್ಣವಾಗಿ ಅರಳಿ
ನಿಂತ ಮಂದಾರಕ್ಕೇನು ಗೊತ್ತು
ಅದೇ ಚೆಲುವು ತನ್ನನ್ನು
ಹುಟ್ಟಿದ ಗಿಡದಿಂದ ಬೇರೆಯಾಗಿಸಿ
ಅದಾರದೋ ಪ್ರಾರ್ಥನೆಯ ಹೊತ್ತು
ದೈವದ ಮುಡಿಗೆರೆಸುವುದೆಂದು ?
ಬೆಳ್ಳಿಯ ಹೂವಿನ ಬುಟ್ಟಿಯಲ್ಲಿ
ಮಂದಾರವನ್ನು ತುಂಬಿ ತಂದ
ಅಮ್ಮನಿಗೆಲ್ಲಿ ಕೇಳೀತು
ಮಂದಾರದ ಕೂಗು ?
ನೋವಿದೆ ಎಂದರೆ ಇದೆ
ಇಲ್ಲವೆಂದರೆ ಇಲ್ಲ
ವಿಧಿ ನಿಯಮವೆಂದರೆ ಅದೇ
ಅಸ್ಥಿತ್ವದ ಕಾರಣವೆಂದರೆ ಅದೇ
ಜೀವನ ಸಾಫಲ್ಯವಿರುವುದು ದೃಷ್ಟಿ ಯಲ್ಲಿ ಅಲ್ಲವೇ ?

ತುಂಬಾ ಇಷ್ಟ ಆಯ್ತು ಸ್ವರ್ಣಾ... :-)
ReplyDeleteಧನ್ಯವಾದಗಳು :-)
Deleteishta aaytu :)
ReplyDeletereshme, hoovu mattu gandhada holikegalu aaptaa enisidavu :)
tumba sundaravada salugalu medam...
ReplyDeleteMandara mattu shreegandhavannu balasid reeti bahala ista aytu...
vandanegalu sundara pratimegalannu kottiddakke....
namaste..
ಧನ್ಯವಾದಗಳು ಚಿನ್ಮಯ್
Deleteಮೇಡಮ್ ಅನ್ನೋದನ್ನ ತೆಗೆದರೆ ಒಳ್ಳೇದು :)
ಮೊದಲು ತಡವಾಗಿ ಪ್ರತಿಕ್ರಿಯೆ ಬರೆಯುತ್ತಿರುವುದಕ್ಕಾಗು ಕ್ಷಮೆ ಇರಲಿ. ಇಲ್ಲಿ ತುಂಬಾ net ಸಮಸ್ಯೆ ಇತ್ತು.
ReplyDeleteಬದುಕಿನ ಸಾರಾ ಸಂಗ್ರಹ ಇಲ್ಲಿದೆ. ನನಗೆ ತುಂಬಾ ಕಾಡಿದ್ದು ' ತೇಯ್ದು ತೇಯ್ದು ತನ್ನ ಅಸ್ತಿತ್ವವೇ ಇಲ್ಲವಾಗುವುದೆಂದು'. ಇದನ್ನು ನನ್ನ ನೌಕರಿಗಳಿಗೂ ಅನ್ವಯಿಸಿಕೊಂಡು ನೋಡಿದೆ. ಯಾಕೋ ತೀವ್ರ ವ್ಯಥೆಯಾಯಿತು.
ಈ ನಡುವೆ ನಿಮ್ಮ ಬ್ಲಾಗ್ ಬರಹಗಳು ಕಡಿಮೆಯಾಗುತ್ತಿವೆ. ಕೆಲಸ ಬಾಹುಳ್ಯ ಇದ್ದಿರಬಹುದು. ಆದರೂ ಒಮ್ಮೊಮ್ಮೆ ತುಸು ಬಿಡುವು ಮಾಡಿಕೊಂಡು ಬ್ಲಾಗ್ ಬರೆಯಿರಿ. ಇಲ್ಲದಿದ್ದರೆ ಅಭಿಮಾನಿಗಳು ನೊಂದುಕೊಳ್ಳುತ್ತೇವೆ.
ಪ್ರತಿಕ್ರಿಯಿಸುತ್ತಿರಿ ಅನ್ನುವುದೇ ಖುಷಿ ಸರ್
Deleteಆದ್ರಲ್ಲಿ ಕ್ಷಮೆಯ ಮಾತೆ ಇಲ್ಲ
ಮೆಚ್ಚಿದ್ದಕ್ಕಾಗಿ ಧನ್ಯವಾದಗಳು
Swarna,
ReplyDeleteComputer problem. Visiting the blog sites just now from elsewhere. Cannot write in Kannada! The poem is beautiful and significant. Congratulations.
kavana artha tumbaa ghaaDavaagide.... tumbaa ishTa aaytu....
ReplyDeleteಧನ್ಯವಾದಗಳು ಸರ್
Deleteಜೀವನದ ಸಾಪಲ್ಯತೆಗೆ ಓಟದ ಅಗತ್ಯ ಎಷ್ಟು ಅತ್ಯಗತ್ಯ.. ತಮ್ಮ ಸುತ್ತಲು ಹಾಕಿಕೊಂಡ ಪರದೆ ತಮಗೆ ಮುಳುವಾದರೆ ಕೆಲವರಿಗೆ ಹೊರಜಗತ್ತಿಗೆ ಧುಮುಕಿದಾಗ ಸಾಪಲ್ಯತೆ. ಪ್ರತಿ ಕವನಗಳ ಸಾಲುಗಳು ದೃಷ್ಟಾಂತ ಕಥೆಗಳ ಸಾರ.. ಸೂಪರ್ ಸ್ವರ್ಣ
ReplyDelete'ಜೀವನ ಸಾಫಲ್ಯ' ಕವಿತೆ ಚೆನ್ನಾಗಿದೆ.... ಅಭಿನಂದನೆ ಮತ್ತು ಧನ್ಯವಾದ...
ReplyDeleteತುಂಬಾ ಚೆನ್ನಾಗಿದೆ
ReplyDeleteNice poem swarna.. liked it! :)
ReplyDelete