Wednesday, December 28, 2011

ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

 ಏನೋ ಲೇಖಕರ ಸಂತೆ ಸೇರಿತ್ತು ಅಲ್ಲಿ
ಘಟಾನುಘಟಿಗಳೆಲ್ಲ ಅಲ್ಲಿದ್ದರು

ಒಂದೊಮ್ಮೆ, ನನಗೂ ಕನಸಿತ್ತು
ಬರೆಯಬೇಕು
ಅದ ಯಾರೋ ಓದಬೇಕು
ಮೆಚ್ಚಬೇಕು
ಅದರೊಟ್ಟಿಗೆ ಮರುಗಬೇಕು, ಕೊರಗಬೇಕು
ಕುಣಿಯಬೇಕು

ಈಗ್ಯಾಕೋ, ಆ ಕನಸು ಮಾಯವಾಗಿದೆ
ಬಹುಶ ನನ್ನ ಸಾಮರ್ಥ್ಯ ನನಗೆ ಕಂಡಿದೆ :)

ಬರೆದಿದ್ದನ್ನೆಲ್ಲ ಯಾಕೆ ಯಾರಾರ
ಓದಬೇಕು?
ಹಾಗೆ ಹೀಗೆ ಗೀಚಿದ ಸಾಲುಗಳ ಯಾಕೆ
ಮೆಚ್ಚಬೇಕು?
ರಾಗ ತಾಳಗಳಿಲ್ಲದ ಪದಕ್ಕೆ  ಯಾಕೆ
ಕುಣಿಯಬೇಕು?

ಅದ್ಹೇಗೋ, ಸತ್ಯ ಅರ್ಥವಾಗಿದೆ
ಬಹುಶ ನನಗೂ ಸ್ವಲ್ಪ ಬೆಳಕು ಕಂಡಿದೆ :)

ಯಾರೋ ನೋಡದ ಕಾಡಲ್ಲೂ  ಮಲ್ಲಿಗೆಯೊಂದು
ಅರಳುತ್ತೆ
ಯಾರೂ ಕೇಳದ ಹಾಡನ್ನೂ  ಕೋಗಿಲೆಯೊಂದು ತನ್ಮಯಳಾಗೆ
ಹಾಡತ್ತೆ
ಯಾರೂ ನೋಡದ ಚಿತ್ರವನ್ನೂ ಸಂಜೆ ಕೆಂಪು ಚೆಂದದಿಂದಲೇ
ಮಾಡತ್ತೆ

ಇನ್ನೂ, ಮಾನಸ ಗಂಗೆಯಲ್ಲಿ ಬಹಳಷ್ಟು ಕೊಳೆ ಇದೆ
ತೊಳೆಯಲಿನ್ನೂ ಸಾಕಷ್ಟು ರಾಡಿ ಇದೆ

1 comment: