Thursday, September 06, 2012

ಪ್ರೀತಿಯ ಮನಃಶಾಸ್ತ್ರ

ಹರೆಯಕ್ಕೆ ಕನಸೂ ಹೆಚ್ಚು  ಕಂಡ ಕನಸ  ಮರೆವ ಶಕ್ತಿಯೂ. ಹಾಗೆ ನಾನವನ್ನ  ಒಂದು ರೀತಿಯಲ್ಲಿ ಮರೆತೆ.
ಹಾಗೆಂದು ಅವ ನಂಗೆ ಹುಳಿದ್ರಾಕ್ಷಿ ಯಾಗಲಿಲ್ಲ.

ಸಾಮಾನ್ಯರ ದೃಷ್ಟಿಯಲ್ಲಿ  ಕಾಮರ್ಸ್ ಅಥವಾ ಕಲಾ ಪದವಿ ಓದುತ್ತಿರುವವರು  ಎಂಜನಿಯರಿಂಗ್ ಅಥವಾ ಮೆಡಿಕಲ್ ಓದುತ್ತಿದ್ದವರ ಮುಂದೆ ಲೆಕ್ಕಕ್ಕೇ ಇರಲ್ಲ.  ಎಷ್ಟೋ ಗೆಳತಿಯರು ಮೆಡಿಕಲ್ ಓದುತ್ತಿದ್ದರು. ಆಗೀಗ ಅಲ್ಲಿನ ಸುಧ್ಧಿಗಳು ನಮಗೆ ತಿಳಿಯುತ್ತಿದ್ದವು. ಅಲ್ಲಿ ಒಂದು ದೊಡ್ಡ ಗುಂಪಿದೆಯಂತೆ, ಭಾರೀ ಎಂಜಾಯ್ ಮಾಡ್ತಾರಂತೆ ಹುಡುಗ ಹುಡುಗಿಯರು ಸೇರಿ,
ಎಲ್ಲರೂ ಶ್ರೀಮಂತರಾದ್ದರಿಂದ ಕಾರುಗಳಲ್ಲಿ ಪ್ರವಾಸ ಹೋಗೋದು , ದೊಡ್ಡ ದೊಡ್ಡ ಹೋಟೆಲ್ಲಿಗೆ ಹೋಗೋದು
ಮಾಮೂಲಂತೆ. ಅಂತೆ ಕಂತೆಗಳ ದೊಡ್ಡ ಸಂತೆ. ಒಮ್ಮೆ  ಈ ಸಂತೆಯಲ್ಲಿ  ಅವನ ಹೆಸರು ಬಂತು. ಮೈಯಲ್ಲಾ
ಕಿವಿಯಾಗುವುದು ಅಂದರೆ ಏನು ಅಂಥ ಆವತ್ತು ನನಗೆ ಅರ್ಥವಾಗಿತ್ತು.

ಅದಾವುದೋ ಊರಿನ ಹುಡುಗಿಯೊಬ್ಬಳು ಅವನಿಗೆ ತುಂಬಾ ಹತ್ತಿರವಂತೆ, ಇಬ್ಬರದೂ ಒಳ್ಳೆ ಜೋಡಿ ಅಂತ
ಕಾಲೇಜಿನಲ್ಲಿ ಮಾತಾಡ್ತಾರಂತೆ. ಆದ್ರೆ ಅವನಾಗಲಿ ಅವಳಾಗಲಿ ಒಬ್ಬರನ್ನ್ನೊಬ್ಬರು ಪ್ರೋಪೋಸೆನೂ ಮಾಡಿಲ್ವಂತೆ.
ಆಮೇಲಿನ ಮಾತುಗಳು ನನ್ನ ಕಿವಿಯಲಿಳಿಯಲಿಲ್ಲ. ಮನಸೇಕೋ ಪ್ರೊಪೋಸ್ ಮಾಡಿಲ್ಲ ಅನ್ನೋದನ್ನೇ ಹಿಡಿದು ಕೂತು ಬಿಟ್ಟಿತ್ತು.

ಮತ್ತೆ ಅವನಿಗೆ ಫೋನ್ ಮಾಡುವ ಯೋಚನೆ ಬಲವಾಯಿತು. ಈ ಹುಡುಗಿಯ ಬಗ್ಗೆ ಕೇಳಲೇ? ನಿನಗ್ಯಾಕೆ ಅಂದರೆ?
ಹೌದು, ಅವಳು ನನ್ನ ಗರ್ಲ್ ಫ್ರೆಂಡ್ ಅಂದರೆ? ' ರೆ ' ಗಳ ಸರಮಾಲೆ ದೊಡ್ಡದಾಗಿ , ನಾ ಓದುತ್ತಿದ್ದ ಕಲಾ ಪದವಿಯೂ  ಅಡ್ಡ ಬಂದು  ನಾ ಅವನಿಗೆ ಫೋನ್ ಮಾಡಲಿಲ್ಲ.

"ಒಮ್ಮೆ ನಿನ್ನನ್ನು ಕಣ್ ತುಂಬಾ ಕಾಣುವಾಸೆ"

ಓದುತ್ತಿದ್ದ ಮನಃಶಾಸ್ತ್ರ ಅವನ ಮನವನರಿಯಲು ಸಹಾಯ ಮಾಡಲಿಲ್ಲ. ಬದಲಾಗಿ ಮತ್ತೊಂದಿಷ್ಟು ಪ್ರಶ್ನೆಗಳ ತಂದೊಡ್ಡಿತು. ಅವನೂ ನನ್ನಂತೆ ಒಂದು ಪದವಿ ಓದಿ, ಮಧ್ಯಮ ವರ್ಗದ ಹುಡುಗನಾಗಿದ್ದರೆ ಇಷ್ಟು ಕಾಡುತ್ತಿದ್ದನೆ ?  ಅವ ಮೆಡಿಕಲ್ ಓದುತ್ತಿದ್ದಾನೆ , ಕೊಂಚ ಹೆಚ್ಚೆನಿಸುವಷ್ಟು ದುಡ್ಡು ಕಂಡವನು ಎನ್ನುವುದು ನನ್ನ ಕನಸಿಗೆ ಕಾರಣವೇ?  ಮನಃಶಾಸ್ತ್ರಕ್ಕೇ ಸವಾಲೊಡ್ಡುವ ಸಹಾಸಕ್ಕೆ ನಾ ಕೈ ಹಾಕಿದೆ , ಹೌದು ಎಲ್ಲರೂ ಪ್ರೀತಿಸುವುದು ಒಟ್ಟು ವ್ಯಕ್ತಿತ್ವವನ್ನಲ್ಲವೇ ? ಕೃಷ್ಣ  'ಕೃಷ್ಣ' ನಾಗಿರದಿದ್ದರೆ  ಗೋಪಿಕೆಯರು ಅವನನ್ನ ಪ್ರೀತಿಸುತ್ತಿದ್ದರೆ ? ಹೆಣ್ಣನ್ನ ಸೆರಇಂದ ಬಿಡಿಸುವ ವೀರನಾಗಿರದಿದ್ದರೆ ರುಕ್ಮಿಣಿ ಅವನ ಹಿಂದೆ ಹೋಗುತ್ತಿದ್ದಳೆ ? ತಾತ್ಕಾಲಿಕ ಗೆಲುವು ನನ್ನದಾಗಿತ್ತು.

ತಾತ್ಕಾಲಿಕವಾದದ್ದು ಯಾವುದು ಉಳಿಯಲಾರದಲ್ಲವೇ? ಮತ್ತೆ ಪ್ರಶ್ನೆಗಳು ಶುರುವಾದವು.  ಆದರೂ ನಾ ಅವನೆಲ್ಲ ಕಡೆಗಣಿಸಿ
ಅಪರೂಪಕ್ಕೆ ಓದಿನ ಕಡೆ ಗಮನ ಕೊಟ್ಟೆ.

" तुम्हे याद करते करते जायेगी रैन सारी
तुम ले गए हो अपने संग नींद भी हमारी "

9 comments:

  1. ಎಳೆತಾರುಣ್ಯದ ಹುಡುಗಿಯ ಮನಸ್ಸನ್ನು ಪದರುಪದರಾಗಿ ಬಿಚ್ಚುತ್ತಿದ್ದೀರಿ,ಸ್ವರ್ಣಾ! ತುಂಬ interesting reading. ಓದುತ್ತಿದ್ದಂತೆ, ಕಿಶೋರಿಯರ ಹರಿದಾಡುತ್ತಿರುವ ಮನದ fantasy landಅನ್ನು ಅನ್ವೇಷಿಸುತ್ತಿರುವ ಅನುಭವ ಆಗುತ್ತದೆ.

    ReplyDelete
  2. chennaagi barediddiri.......

    nice one... nimma manasina duguDa namma mana muTTuttade.....

    ReplyDelete
  3. ಕಾಕಾ ಮತ್ತು ದಿನಕರರಿಗೆ ಧನ್ಯವಾದಗಳು.

    ReplyDelete
  4. "ಓದುತ್ತಿದ್ದ ಮನಃಶಾಸ್ತ್ರ ಅವನ ಮನವರಿಯಲು ಸಹಾಯ ಮಾಡಲಿಲ್ಲ."

    ಎನ್ನುವ ಸಾಲುಗಳೇ ಓದಿಗೂ ಮತ್ತು ಬದುಕಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ತೋರುತ್ತದೆ. ಓದಿನ ಶಕ್ತಿಯು ಅಪಾರವಿದ್ದರೂ, ಅದರ ದೌರ್ಭಲ್ಯಗಳೂ ಬಹಳಷ್ಟಿವೆ.

    ಮತ್ತೊಂದು ಮನಸ್ಸನ್ನು ತಟ್ಟಿದ ಬರಹ.

    ReplyDelete
    Replies
    1. ಧನ್ಯವಾದಗಳು ಬದರಿ ಸರ್.

      Delete
  5. without any doubt (in my opinion), this piece of writing happens to be your real strength -- neither translation/tranliteration or the critique stuff. this looks so original. "ಹರೆಯಕ್ಕೆ ಕನಸೂ ಹೆಚ್ಚು ಕಂಡ ಕನಸ ಮರೆವ ಶಕ್ತಿಯೂ.", "ಮೈಯಲ್ಲಾ ಕಿವಿಯಾಗುವುದು ಅಂದರೆ ಏನು ಅಂಥ ಆವತ್ತು ನನಗೆ ಅರ್ಥವಾಗಿತ್ತು.", "ಮನಃಶಾಸ್ತ್ರ ಅವನ ಮನವನರಿಯಲು ಸಹಾಯ ಮಾಡಲಿಲ್ಲ." ...very nice!

    guess you were either 'deeply involved', or have a terrific power of imagination to get the reader deeply involved here. the wonderful thing about this sequel is that it really is captivating and at the same time- doesn't carry a whif of sex; it appears funny and juvenile and yet one can feel the embedded deep melancholy; flows like a very casual write up but comes with titbits of philosophy here and there. good and great show!

    regs.
    -R

    again, "ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ" ...love it!

    ReplyDelete
    Replies
    1. Thank you for the first part of the comment :).
      Glad that people enjoy the write ups here.
      Swarna

      Delete
  6. ಅಪರೂಪ ಕ್ಕಾದ್ರು ಓದಿನ ಕಡೆ ಗಮನ ಕೊಟ್ರಲ್ಲ.....ಸಂತೋಷ .....ಹದಿ ಹರೆಯದ ಮನಸ್ಸಿನ ಭಾವನೆಗಳನ್ನು ಸುಂದರವಾಗಿ ಚಿತ್ರಿಸಿದ್ದೀರಿ.....ನಿರೂಪಣೆ ಇಷ್ಟ ಆಯಿತು...

    ReplyDelete
  7. ಧನ್ಯವಾದಗಳು ಸರ್.

    ReplyDelete