ಪತ್ರಕರ್ತೆ ಗೆಳತಿಯೊಬ್ಬಳು ಬರೆದ ಸುಂದರ ಹನಿ
The art of rain
Falling Down, pooling up,
Out of the sky, into my cup.
What is this wet that comes from above,
That some call disaster, and others find love.
The rain has an art that I may not get,
So I stand still here and get soaking wet
ಮತ್ತೆ ಮತ್ತೆ ಓದಿದಾಗ ಕನ್ನಡದಲ್ಲಿ ಅನಿಸಿದ್ದು
ಪ್ರೇಮವೆಂಬ ಹನಿ
ಭುವಿಗೆ ಹನಿದು, ಮತ್ತೆ ಹಾರಿ
ಬಾನಿಂದ ಸೀದಾ ನನ್ನೊಡಲಿಗೆ ಜಾರಿ
ಮೇಲಿಂದ ಸುರಿವುದದಾವ ಭಾವ
ಕೊಡುವುದು ಕೆಲವರಿಗೆ ನಗು, ಹಲವರಿಗೆ ನೋವ
ಅರ್ಥವಾಗದ ಕಲೆಗೆ ಮನಸೋತೆ ನಾ
ಬಯಲಲಿ ನಿಂತು ಮನದಣಿಯೆ ತಣಿಯುತ್ತೇನೆ ನಾ
" ज़िन्दगी यूं हुयी बसर तनहा .. "
ಗುಲ್ಜಾರರ ಮರಾಸಿಂ ಅನ್ನೋ ಆಲ್ಬಮ್ನಲ್ಲಿದೆ. (मरासिम -ಸಂಬಂಧ), ಹಾಡುಗಳನ್ನ ಇಲ್ಲಿ ಕೇಳಬಹುದು.
" ज़िन्दगी यूं हुयी बसर तनहा .. " ಕನ್ನಡೀಕರಿಸುವ ಒಂದು ಪ್ರಯತ್ನ ಕೆಳಗಿದೆ
ಹೆಜ್ಜೆ
ನಡೆದಿದ್ದೇನೆ ನಾ ಒಂಟಿಯಾಗಿ
ನೂರು ಧನಿಯೊಟ್ಟಿಗಿದ್ದು , ಒಂಟಿ ಹೆಜ್ಜೆಯಾಗಿ !
ನೆರಳ ಕಂಡು ಬೆಚ್ಚುತ್ತೇನೆ ನಾ,
ಅದಿನ್ನೆಷ್ಟು ಒಂಟಿ ನಾ ?
ಇಡೀ ರಾತ್ರಿ ಕರೆವುದೊಂದು ನಿಶ್ಯಬ್ಧ
ಯಾರ ರಾತ್ರಿಗಳಾಗಿದ್ದವು ಇಷ್ಟೊಂದು ಸ್ತಬ್ಧ ?
ಜನರ ನಡುವೆ ಸರಿಯಲೊಲ್ಲದು ಹಗಲು
ರಾತ್ರಿ ಕಳೆವುದು ಬದಲಿಸಿ ಮಗ್ಗಲು
ಬಾಗಿಲವರೆಗೂ ಬಂದವ ಅದೇಕೋ ಒಳ ಬರಲಿಲ್ಲ
ಹೆಜ್ಜೆ ಜಂಟಿಯಾಗಲಿಲ್ಲ.
The art of rain
Falling Down, pooling up,
Out of the sky, into my cup.
What is this wet that comes from above,
That some call disaster, and others find love.
The rain has an art that I may not get,
So I stand still here and get soaking wet
ಮತ್ತೆ ಮತ್ತೆ ಓದಿದಾಗ ಕನ್ನಡದಲ್ಲಿ ಅನಿಸಿದ್ದು
ಪ್ರೇಮವೆಂಬ ಹನಿ
ಭುವಿಗೆ ಹನಿದು, ಮತ್ತೆ ಹಾರಿ
ಬಾನಿಂದ ಸೀದಾ ನನ್ನೊಡಲಿಗೆ ಜಾರಿ
ಮೇಲಿಂದ ಸುರಿವುದದಾವ ಭಾವ
ಕೊಡುವುದು ಕೆಲವರಿಗೆ ನಗು, ಹಲವರಿಗೆ ನೋವ
ಅರ್ಥವಾಗದ ಕಲೆಗೆ ಮನಸೋತೆ ನಾ
ಬಯಲಲಿ ನಿಂತು ಮನದಣಿಯೆ ತಣಿಯುತ್ತೇನೆ ನಾ
" ज़िन्दगी यूं हुयी बसर तनहा .. "
ಗುಲ್ಜಾರರ ಮರಾಸಿಂ ಅನ್ನೋ ಆಲ್ಬಮ್ನಲ್ಲಿದೆ. (मरासिम -ಸಂಬಂಧ), ಹಾಡುಗಳನ್ನ ಇಲ್ಲಿ ಕೇಳಬಹುದು.
" ज़िन्दगी यूं हुयी बसर तनहा .. " ಕನ್ನಡೀಕರಿಸುವ ಒಂದು ಪ್ರಯತ್ನ ಕೆಳಗಿದೆ
ಹೆಜ್ಜೆ
ನಡೆದಿದ್ದೇನೆ ನಾ ಒಂಟಿಯಾಗಿ
ನೂರು ಧನಿಯೊಟ್ಟಿಗಿದ್ದು , ಒಂಟಿ ಹೆಜ್ಜೆಯಾಗಿ !
ನೆರಳ ಕಂಡು ಬೆಚ್ಚುತ್ತೇನೆ ನಾ,
ಅದಿನ್ನೆಷ್ಟು ಒಂಟಿ ನಾ ?
ಇಡೀ ರಾತ್ರಿ ಕರೆವುದೊಂದು ನಿಶ್ಯಬ್ಧ
ಯಾರ ರಾತ್ರಿಗಳಾಗಿದ್ದವು ಇಷ್ಟೊಂದು ಸ್ತಬ್ಧ ?
ಜನರ ನಡುವೆ ಸರಿಯಲೊಲ್ಲದು ಹಗಲು
ರಾತ್ರಿ ಕಳೆವುದು ಬದಲಿಸಿ ಮಗ್ಗಲು
ಬಾಗಿಲವರೆಗೂ ಬಂದವ ಅದೇಕೋ ಒಳ ಬರಲಿಲ್ಲ
ಹೆಜ್ಜೆ ಜಂಟಿಯಾಗಲಿಲ್ಲ.
ಸ್ವರ್ಣಾ,
ReplyDeleteಮೂಲಕವನಗಳು ತುಂಬ ಚೆನ್ನಾಗಿವೆ. ನಿಮ್ಮ ಅನುವಾದವೂ ಅಷ್ಟೇ ಚೆನ್ನಾಗಿವೆ. ಕವನಗಳ ಭಾವಗಳು ಮನಸ್ಸನ್ನು ತಟ್ಟುತ್ತವೆ.
ಕವನದ ಅಮೂರ್ತತೆಯು ಕವಿಯತ್ರಿಯ ಶಕ್ತಿಯನ್ನು ತೋರುತ್ತದೆ. ಮೂಲ ಮತ್ತು ಅನುವಾದ ಎರಡೂ ಸೊಗಸಾಗಿವೆ.
ReplyDeleteಮತ್ತೆ ಗುಲ್ಜಾರರ ಆಗಮನ ಶೋಭೆ ತಂದಿದೆ.
ಈ ಗೀತೆ ಬಾಹ್ಯ ಜಗತ್ತಿಗೆ ಎಷ್ಟು ಅನ್ವಯವಾಗುವುದೋ ಮನೆಯ ಅಂತರಂಗಕ್ಕೂ ಕೆಲವೊಮ್ಮೆ ಕನ್ನಡಿ. ಒಳ್ಳೆಯ ಅನುವಾದ.
ಕಾಕಾ ಮತ್ತು ಬದರಿ ಸರ್ ರವರಿಗೆ ಧನ್ಯವಾದಗಳು
ReplyDeletefriday night club dj mix version...
ReplyDeleteಮುಗಿಲು ಕರಗಿ, ಕಡಲ ಸೇರಿ
ಇಳಿದು ಬಂತು ಹನಿಯು ಜಾರಿ
ನಗುವು ಸರಿಯೆ ಉಬ್ಬುಗೊರಳು
ಭುವಿಗೆ ತಂಪೇ ಬಾನ ಅಳಲು?
ಎನಿತು ಲಾಸ್ಯ, ಇನಿತು ತಿಳಿಯದಾ ಕಲೆ
ಅರಿವು ಶೂನ್ಯ, ಅದಕೆ ನೆನೆದೆ ನಾ ನಿಂತಲೆ... ;-)
regs,
-R
ನಿಮ್ಮ ಸುಂದರ ಸಾಲಿಗಾಗಿ ಧನ್ಯವಾದಗಳು.
ReplyDeleteಸ್ವರ್ಣಾ
ನಿಮ್ಮ ಸುಂದರ ಸಾಲುಗಳಿಗೆ ಧನ್ಯವಾದಗಳು
ReplyDeleteಸ್ವರ್ಣಾ
was expecting the reply - "ನಿಂತಲೆ" (as in, 'ನಿನ್ನ+ತಲೆ'). but thx for the surprise ;-)
ReplyDeletekeep up the good work!
regs,
-R
The art of rain ತುಂಬಾ ಇಷ್ಟ ಆಯಿತು.. ನಿಮ್ಮ ಭಾವಾನುವಾದವೂ ಸೇರಿದಂತೆ :-)
ReplyDeleteThank you.
DeletePoem haage nimma Bhavanuvaada eradoo ishta aitu...Nice...
ReplyDelete