೧. ಒಂದು ಕಾಡು. ಅಲ್ಲಿ ಮೂರು ಕೋತಿಗಳ ಗುಂಪಿನ ಹಾವಳಿ.
ಕೆಂಪು ಕೋತಿ ಪರವಾಗಿಲ್ಲ. ಕಪ್ಪು ಮತ್ತು ಬೂದು ಕೋತಿಗಳಿಗೆ ಸದಾ ಗುದ್ದಾಟ.
ಯಾರು ಮೇಲೆಂಬ ಪ್ರಶ್ನೆಗೆ ಉತ್ತರದ ಹುಡುಕಾಟ. ಕಪ್ಪು ಕೋತಿಗೆ ಕಪ್ಪು ಶ್ರೇಷ್ಠ , ಬೂದು ಕೋತಿಗದು ಕನಿಷ್ಠ.
ಕಪ್ಪು , ಕೆಂಪು, ಬೂದು ಎಲ್ಲ ಸೇರಿದರೆನೇ ಕಾಡಲ್ಲಿ ಬಣ್ಣ ಎಂದು ಅವಕ್ಕೆ ತಿಳಿಹೇಳುವವರಾರು?
೨. ಅವಳಿಗೆ ಒಂದೊಮ್ಮೆ ವಾಚಾಳಿ, ಬಾಯ್ಬಡುಕಿ ಎಂಬ ಉಪನಾಮಗಳು ಇದ್ದವು. ಎಲ್ಲ ವಿಷಯಗಳ ಬಗ್ಗೆ ಅವಳಿಗೊಂದು
ಒಪಿನಿಯನ್ ಇರುತಿತ್ತು. ಅವಳ ಚೀಲದಲ್ಲಿ ಎಲ್ಲ ಸಮಸ್ಯಗಳಿಗೂ ಒಂದು ಪುಕ್ಕಟೆ ಸಲಹೆ ಕಾದಿರುತಿತ್ತು. ಜನ ಅವಳ ಒಂದು ಮಾತಿಗೆ ನೂರು ಅರ್ಥ ಕಲ್ಪಿಸುತ್ತಿದ್ದರು. ಒಂದು ದಿನ ಮಾತೇ ಬೇಡವಾಗಿ ಅವಳು ಮೌನವಾದಳು. ಜನ ಅವಳ ಮೌನಕ್ಕೆ ಸಾವಿರ ಅರ್ಥ ಹುಡುಕಿದ್ದಾರೆ.
೩. ತಕ್ಕ ಮಟ್ಟಿಗೆ ಸುಂದರವಾಗಿದ್ದ ಒಂದು ನಾಯಿ ಮರಿ. ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಬಿದ್ದ ತಂಗಳು ತಿಂದು, ಮುರುಕಲು ಮನೆಯಲ್ಲಿ ಮಲಗಿ ಕಾಲ ಕಳೆಯುತ್ತಿತ್ತು. ಅದೆಲ್ಲಿಂದಲೋ ದಯಾಮಯಿ ಹೆಂಗಸೊಬ್ಬಳು ಆ ರಸ್ತೆಗೆ ಬಂದಳು. ನಾಯಿ ಮರಿಯ ಕಂಡು ಪ್ರೀತಿ ಉಕ್ಕಿತು. ಅದನ್ನ ಬಿಗಿದಪ್ಪಿ ಮುದ್ದು ಮಾಡಿದ್ದೆ ಮಾಡಿದ್ದು. ನಾಯಿ ಮರಿಗೆ ಕಸಿವಿಸಿ, ಈ ಅಪ್ಪುಗೆ ಬೆಸುಗೆಗಳೆಲ್ಲ ತಲೆಬಿಸಿ. ದಿನ ಕಳೆದಂತೆ ನಾಯಿ ಮರಿ ಪ್ರೀತಿಗೆ ಬಾಗಿತು. ಎಲ್ಲ ಚೆನ್ನಿರುವಾಗ ಆ ಹೆಂಗಸಿಗೆ ಇನ್ನೆಲ್ಲೋ ಇದ್ದ
ಬೆಕ್ಕೊಂದು ಸಿಕ್ಕಿತು. ಸರಿ ಬೆಕ್ಕಿಗೂ ಅದೇ ಪ್ರೀತಿ. ಹೊಸ ಅತಿಥಿಯ ಭರಾಟೆಯಲ್ಲಿ ಹೆಂಗಸು ನಾಯಿ ಮರಿಯ ಮರೆತಳು. ನಾಯಿ ಮತ್ತೆ ರಸ್ತೆಗೆ , ನಿರ್ಧರಿಸಿದೆ ಅದು ತಗ್ಗ ಬಾರದು ಅಕ್ಕರಾಸ್ಥೆಗೆ.
೪. ಒಂದು ಸಮುದ್ರ ಅಥವಾ ನದಿಯೂ ಇದ್ದಿರಬಹುದು.
ಒಂದು ಮೃದ್ವಂಗಿ ಸುಮ್ಮನೆ ಕುಳಿತಿತ್ತು. ಬಾವಿಗಿಂತ ದೊಡ್ದದಾದ
ಸಮುದ್ರವಿದೆ ಅಂತ ತಿಳಿದು ನೀರಿಗೆ ಬಂದ, ಕೂಪ ಮಂಡೂಕ ಮೃದ್ವಂಗಿಯನ್ನ
ಮಾತಾಡಿಸಿತು.
"ಸಾಗರ ಎಷ್ಟು ದೊಡ್ಡದು ಗೊತ್ತ ನಿಂಗೆ?" ಸಮುದ್ರಕ್ಕೂ ದೊಡ್ಡದು ಸಾಗರ ಅಂತ ತಿಳಿದ ಕಪ್ಪೆಯ ಪ್ರಶ್ನೆ.
"ಅರಿವಿಗೆ ಬಂದಷ್ಟು" ರಂಗು ರಂಗಿನ ಮೃದ್ವಂಗಿಯ ಉತ್ತರ.
ಕಪ್ಪೆಯ ಮಾತು ಮಾರೆಯಾದದ್ದು ಕಂಡು, ಮೃದ್ವಂಗಿ ಮುಂದುವರೆಸಿತು
"ನೋಡು ನನ್ನ ಚಿಪ್ಪಷ್ಟೇ ಜಗತ್ತಲ್ಲ ಅನ್ನೋದು ನಂಗೆ ಗೊತ್ತು.
ಸಾಗರ ಎಷ್ಟು ವಿಶಾಲವಾಗಿದೆ ಅನ್ನೋದನ್ನ ಅರಿಯೋಕೆ ನಮ್ಮರಿವು ಮೊದಲು ವಿಸ್ತಾರವಾಗಬೇಕಲ್ಲವೇ? "
ಕಪ್ಪೆಗೆ ಉತ್ತರ ದೊರಕಿತ್ತು.

ಪ್ರೀತಿಯ ಸ್ವರ್ಣ ಅವರೇ,
ReplyDelete೧. ಈ ವರ್ಣ ಸೌಹಾರ್ದತೆ ಮನುಜನಲ್ಲೂ ಬರಲಿ.
೨. ಮಾತಾಡಿದರೂ ತಪ್ಪು, ಮೌನವಾದರೂ ತಪ್ಪು ಯಾರಿಗೆ ಹೇಳುತ್ತೀರಿ. ಈ ಜಗದ ನಿಯಮ ಅವರಿಗೆ ಅವರಿಗೇ ಬದ್ಧತೆ!
೩.ಇದು ನಮ್ಮ ತಾಯಿಯ ಬಗ್ಗೆಯ ಕಥನ.
೪. ಕಪ್ಪೆಗೆ ಉತ್ತರ ದೊರಕಿದರೂ ಸಹ ಅದು ಯೋಚನೆ ಮಾಡುತ್ತೆ ಬಾವಿಯಲ್ಲಿರುವ ಸುಖ ಸಮುದ್ರದಲ್ಲಿ ಬಹುಶಃ ಇಲ್ಲ ಅಂತ.
ನನಗೊಂದು ಅಚ್ಚರಿ, ಅದೆಲ್ಲಿಂದ ಇಂತಹ ನೀತಿಯುಕ್ತ ಕಥನಗಳನ್ನು ನಮಗಾಗಿ ನೀವು ತರುತ್ತೀರಿ ಅಂತ?
ನಿಜವಾಗಲೂ ನೀವು ನನಗೆ ಒಳ್ಳೆಯ ಬ್ಲಾಗ್-ಮೇಟ್
ಬಿಂದುವಿನಲ್ಲಿ ಸಿಂಧು ಅಂತ ಹೇಳ್ತಾರಲ್ಲ, ಹಾಗೆ ಇವೆ ಈ ಹನಿಗತೆಗಳು!
ReplyDeleteಧನ್ಯವಾದಗಳು ಕಾಕ ಮತ್ತು ಬದರಿ ಸರ್ ರವರಿಗೆ.
ReplyDelete