Wednesday, November 10, 2010

ನನ್ನ ಹಾಡು ನನ್ನದು

ವ್ಯಕ್ತಿಯನ್ನು ಜನ ಗುರುತಿಸುವುದು ಅವನ ಸೋಲು ಗೆಳುವುಗಳಿಂದ ಮಾತ್ರ ಎಂಬುದಕ್ಕೆ ನೆನ್ನೆ
ಒಂದು ಸ್ಪಷ್ಟ ಉದಾಹರಣೆ ಸಿಕ್ಕಿತು.

ಕೌನ್ ಬನೇಗ ಕರೋಡ್ ಪತಿ ಯ ಒಬ್ಬ ಸ್ಪರ್ದಿ, ಕೋಟಿ ರುಪಾಯಿ ಗೆದ್ದ!
ಆಗ  ಎಲ್ಲರು ಹೇಳಿದ್ದು , ಎಷ್ಟು ಆತ್ಮ  ವಿಶ್ವಾಸ, ಎಷ್ಟು  ಕೂಲ್ ಆಗಿ ಆಡ್ತಿದಾನೆ.....ಇಂದ್ರ ಚಂದ್ರ :-)

ಗೆದ್ದ ಮೇಲೆ ಐದು ಕೋಟಿ ಪ್ರಶ್ನೆಗೆ ಆತ ತಪ್ಪು ಉತ್ತರ ಹೇಳಿದ .
ಗೆದ್ದ ಕೋಟಿಯಲ್ಲಿ ತೊಂಬತ್ತೇಳು ಲಕ್ಷ ಕಳೆದು ಅವನಿಗೆ ಉಳಿದದ್ದು ಬರಿ ಮೂರು ಲಕ್ಷ ಚಿಲ್ಲರೆ ಮಾತ್ರ !
ಆಗ  ಬಂದ ಒಕ್ಕೊರಲಿನ ದನಿ ಅವನು ಓವರ್ ಕಾನ್ಫಿಡೆಂಟ್, ಬುದ್ದಿ ಇಲ್ಲದವ, ಗೆದ್ದೇ ಗೆಲ್ಲುತ್ತೇನೆಂಬ ಸೊಕ್ಕು
ಜಾಸ್ತಿ ಆಯಿತು :-)
ನಾ ಯೋಚಿಸುತ್ತಿದ್ದೆ ಅದೇ ಆತ ಐದು ಕೋಟಿ ಗೆದ್ದಿದ್ದರೆ, ನಾವೇ ಹೇಳುತಿದ್ದೆವು, ಎಷ್ಟು calculated  ರಿಸ್ಕ್ ತೊಗೊಂಡ,
ಎಂಥಾ ವಿಶ್ವಾಸ !
ಗೆಲುವು ಮತ್ತು ಸೋಲಿನ ನಡುವಿನ ಅಂತರ  ಬಹಳ ಜಾಸ್ತಿಯಾಯ್ತೆನೋ?

ಅದಕ್ಕೆ ಹೇಳ್ತಾರೇನೋ ನಿನ್  ಮನ್ಸಿಗ್  ಬಂದ್ ರೀತಿಲ್ ಬದ್ಕು, ಲೋಕದ್ ಮನೆ ಹಾಳಾಗ್ಲಿ ಅಂತ :-)

No comments:

Post a Comment