![]() |
| ಚಿತ್ರಕೃಪೆ : ಅಂತರ್ಜಾಲ |
ಎಲ್ಲೆಲ್ಲಿ ನಿನ್ನ ಮಾಯೆ ತಾಯೆ
ನಿನ್ನ ಮಡಿಳೊಳೆಮ್ಮ ಪೊರೆಯೆ
ಉಂಬ ಅನ್ನವದು ಪರಬ್ರಹ್ಮ ಕೆಲವರಿಗೆ
ಡಂಭಾಚಾರದ ಆಡಂಬರ ಹಲವರಿಗೆ
ಕೊಂಬ ಎಲ್ಲ ಕಾಳಿನಲೂ ಬೆವರು ಜಿನುಗಿ
ಸತ್ಯ ಅರಿವಾಗುವ ತನಕ
ನಿನ್ನ ಮಡಿಳೊಳೆಮ್ಮ ಪೊರೆಯೆ
ಬೆಟ್ಟವದು ಏರುವ ಸಾಧನ ಕೆಲವರಿಗೆ
ಕುಟ್ಟಿ ಪುಡಿ ಮಾಡುವ ಆತುರ ಹಲವರಿಗೆ
ಬಿಟ್ಟಿಯಾಗಟ್ಟಿ ಉಂಡುದ ಕಕ್ಕಲೇ ಬೇಕೆಂಬ
ಸತ್ಯ ಅರಿವಾಗುವ ತನಕ
ನಿನ್ನ ಮಡಿಳೊಳೆಮ್ಮ ಪೊರೆಯೆ
ಹೆಣ್ಣವಳು ಪೂಜಿಪ ತಾಯಿ ಕೆಲವರಿಗೆ
ಬಣ್ಣ ಬಣ್ಣದ ಮೋಹದ ಬೊಂಬೆ ಹಲವರಿಗೆ
ಕಣ್ಣ ಒಳಗಣ ಕಸವ ಇಲ್ಲೇ ಬಿಸುಟ ಬೇಕೆಂಬ
ಸತ್ಯ ಅರಿವಾಗುವ ತನಕ
ನಿನ್ನ ಮಡಿಲೊಳೆಮ್ಮ ಪೊರೆಯೆ
ಎಲ್ಲ ವೇಷ ಕಳಚುವ ಆಸೆ ಕೆಲವರಿಗೆ
ಸಲ್ಲದ ವೇಷ ತೊಟ್ಟು ಕುಣಿವ ಆಸೆ ಹಲವರಿಗೆ
ಬಲ್ಲೆನೆಂಬ ಭಾವವ ಬಿಟ್ಟು ನಿನ್ನ ಸೇರುವ ತನಕ
ಬಾನುಳಿವ ತನಕ, ನಾನಳಿವ ತನಕ
ನಿನ್ನ ಮಡಿಳೊಳೆಮ್ಮ ಪೊರೆಯೆ

ಅನ್ನ ಬ್ರಹ್ಮನ ದೇಗುಲ ಎನ್ನುವಂತಹ ಮಾತನ್ನು ಸುಲಲಿತವಾಗಿ ಹೇಳಿದ್ದೀರ..ದೇವರು ಬೆಟ್ಟದ ಮೇಲೆ ಏಕೆ ಕುಳಿತ ಅನ್ನುವ ಅನುಮಾನ ಬಂದರೆ ದೇಹಕ್ಕೆ ವ್ಯಾಯಾಮ, ಅಹಂ ದೂರ ಮಾಡಿಕೊಳ್ಳುವ ಸಾಧನ, ಪ್ರಕೃತಿ ಮಾತೆಯನ್ನು ಉಳಿಸುವ ಸಾಹಸ ಎಲ್ಲವು ಕೂಡಿರುತ್ತದೆ, ಸ್ತ್ರೀಯನ್ನು ಬಗೆ ಬಗೆ ನೋಟದಲ್ಲಿ ನೋಡುವ ಜಗತ್ತನ್ನು ವರ್ಣಿಸುವ ನಿಮ್ಮ ಮಾತುಗಳು ಸುಂದರವಾಗಿವೆ...ಇರುವ ಭಾವವನ್ನು ಬಿಟ್ಟು...ನಿರ್ಭಾವದೆಡೆಗೆ ಸಾಗಬೇಕು ಜೀವನ ಎನ್ನುವಂತಹ ಮಾತುಗಳು ಸೋಗಸಾಗಿದೆ..ಸುಂದರ ಕವನ ಮೇಡಂ...
ReplyDeleteಓದಿದ ಪ್ರತಿ ಬರಹಕ್ಕೂ ಸಂದರ್ಭೊಚಿತ ಹಾಡಿನೊಡನೆ ಪ್ರತಿಕ್ರಿಯಿಸುವ ನಿಮ್ಮ ತಾಳ್ಮೆಗೆ ಮತ್ತು ಪ್ರೋತ್ಸಾಹಕ್ಕೆ ಸದಾ ಅಭಾರಿ.ಸೊಗಸಾದ ಪ್ರತಿಕ್ರಿಯೆಗೆ ಧನ್ಯವಾದಗಳು
Deleteಚನ್ನಾಗಿದೆ......
ReplyDeleteಧನ್ಯವಾದಗಳು
Deleteಮನ ಮುಟ್ಟುವ ಸಾಲುಗಳು....
Deleteಧನ್ಯವಾದಗಳು ಇಲ್ಲಿಗೆ ಸ್ವಾಗತ
Deleteಬೆಟ್ಟವದು ಏರುವ ಸಾಧನ ಕೆಲವರಿಗೆ
ReplyDeleteಕುಟ್ಟಿ ಪುಡಿ ಮಾಡುವ ಆತುರ ಹಲವರಿಗೆ
ಇಷ್ಟವಾದ ಸಾಲುಗಳು ಮೇಡಮ್..
ಚೆನಾಗಿದೆ...
ಹಲವಾರು ಮುಖಗಳ ದರ್ಶನವಾಯ್ತು...
ಬರೆಯುತ್ತಿರಿ :)
ಧನ್ಯವಾದಗಳು ಚಿನ್ಮಯ್
Deleteಸ್ವರ್ಣಾ,
ReplyDeleteಅಂತರಾರ್ಥದಲ್ಲಿ ಹಾಗು ಛಂದಸ್ಸಿನಲ್ಲಿ ವಿಭಿನ್ನವಾದಂತಹ ಬೇರೆಯ ರೀತಿಯ ಕವನವನ್ನು ಬರೆದಿದ್ದೀರಿ. ಪುನರಾವರ್ತಿಸುವ ಕೊನೆಯ ಸಾಲು, ತೆಳುವಾದ ವ್ಯಂಗ್ಯವನ್ನು ಬಾಯಿ ತೆರೆಯದೆಯೇ ಹೇಳುತ್ತದೆ. ಅಭಿನಂದನೆಗಳು.
ಹೊಸತನ್ನು ಮೆಚ್ಚಿದ ಹಿರಿಯರಿಗೆ ವಂದನೆಗಳು
Deleteಬದುಕಿನಲ್ಲಿ ಸದಾ ಜಿಗಿಯುವ ಮನುಜನಿಗೆ ತಂಗುದಾಣ 'ಅಮ್ಮನ ಮಡಿಲು'.
ReplyDeleteಐ ಕವನದಲ್ಲಿ ನಾನು ಅರ್ಥೈಸಿಕೊಂಡ ಹಲವು ಭಾವಗಳಲ್ಲಿ ನನ್ನ ಅಹಂ ಕರಗಿಸುವ ತಂತ್ರ
"ಬಿಟ್ಟಿಯಾಗಟ್ಟಿ ಉಂಡುದ ಕಕ್ಕಲೇ ಬೇಕೆಂಬ
ಸತ್ಯ ಅರಿವಾಗುವ ತನಕ"
ತುಂಬಾ ಖುಷಿಯಾಯ್ತು.
ನಿಮಗೆ ಖುಷಿಯಾದದ್ದು ತಿಳಿದು ನನಗೂ ಖುಷಿಯಾಯ್ತು, ವಂದನೆಗಳು
Deleteಒಂದೇ ವಿಷಯವನ್ನು ಬೇರೆ ಬೇರೆ ರೀತಿ ಹೇಗೆ ನೋಡುತ್ತಾರೆ ಎಂದು ಸೊಗಸಾಗಿ ಬರೆದಿದ್ದೀರಿ
ReplyDeleteಧನ್ಯವಾದಗಳು ದೀಪಸ್ಮಿತಾ,ಇಲ್ಲಿಗೆ ಸ್ವಾಗತ
Delete