Wednesday, January 15, 2014

ಪಾರಿಜಾತದ 'ಕೈಫಿ'ಯತ್ತು


ಉತ್ತರಾಯಣಕಾಲ ಎಲ್ಲರಿಗೂ ಶುಭ ತರಲಿ

ಕೈಫಿ ಆಜ್ಮಿ ಯವರ  ಈ ಸಾಲುಗಳು ಬಹಳ ಇಷ್ಟವಾಯ್ತು :
बस इक झिझक है यही हाल-ए-दिल सुनाने में कि तेरा ज़िक्र भी आयेगा इस फ़साने में
बरस पड़ी थी जो रुख़ से नक़ाब उठाने में वो चाँदनी है अभी तक मेरे ग़रीब-ख़ाने में
इसी में इश्क़ की क़िस्मत बदल भी सकती थी जो वक़्त बीत गया मुझ को आज़माने में
ये कह के टूट पड़ा शाख़-ए-गुल से आख़िरी फूल अब और देर है कितनी बहार आने में

ಕೆಳಗಿನ ಸಾಲುಗಳು  ಮೇಲಿನ ಸಾಲುಗಳಿಂದ  ಹುಟ್ಟಿದ್ದು :


ನಮ್ಮೊಲವಿನ ಕಥೆ ಹೇಳುವಾಗಲೆಲ್ಲಾ
ಅದೇನೋ ಬಿಕ್ಕು
ಕಥೆ(?)ಯಲ್ಲಿ ನಿನ್ನ ಹೆಸರು ಬಂದಾಕ್ಷಣ
ಕಳೆದು ಹೋಗುವುದು ಎಲ್ಲ ವಾಕ್ಕು
ಮಾತಿಗೆ ಮೀರಿದ ಕಥೆಯೋ
ನಿನ್ನಪರಾಧಿ ಮಾಡುವ ಭಯವೋ
ಕಥೆಗೆ ಗಂಟಲಲ್ಲೇ ಗೋರಿ ಕಟ್ಟಿದೆ
ಕಂಬನಿಗೆ ಹೇಗೂ ಎರಡು ಕಣ್ಣಿದೆ

ಬಂಧವನ್ನು ಪುಟಕ್ಕಿಡುವುದರಲ್ಲಿ
ಕಳೆದ ಕ್ಷಣಗಳಲಿ
ಒಂದು ಪ್ರೇಮ, ಕಾವ್ಯವಾಗಬಹುದಿತ್ತು
ಒಲವು ಚಿನ್ನವಾಗಿ , ಗಟ್ಟಿಯಾಗಿ
ಒಡಲ  ಆಭರಣವಾಗಬಹುದಿತ್ತು

ನನ್ನ ಜ್ಹೊಪಡಿಯ
ಹೊಸ್ತಿಲ ಮೇಲೆ
ದಿನವೂ ದೀಪಾವಳಿ
ನಿನ್ನ ಕಂಗಳ ಹೊಳಪಿನ
ಝಗಮಗಿಸುವ ಪ್ರಭಾವಳಿ

ಇಷ್ಟು ಹೇಳಿ
ಧರೆಗುರುಳಿತ್ತು ಕಟ್ಟ ಕಡೆಯ  ಪಾರಿಜಾತ
ಸುಮವರಳಲು ಇನ್ನೆಷ್ಟು ಕಾಲ ಬೇಕೋ
ಎಂದು ಕೇಳುವುದೋ ಸಖೀ ಗೀತ

3 comments:

  1. ತಮ್ಮ ಕವನಕ್ಕೆ ಬರುವ ಮುಂಚೆ ಕೈಫಿ ಅಜ್ಮಿಯವರ ಬಗ್ಗೆ ನೆನೆಸಿಕೊಳ್ಳುವುದಾದರೆ, ಅವರೊಬ್ಬ ಅತ್ಯುತ್ತಮ ಸಾಹಿತಿ. ಅವರ ಚಿತ್ರ ಗೀತೆಗಳೂ ಅತ್ಯಮೋಘ. ಹಿಂದಿ ಚಿತ್ರರಂಗದ ಅಪ್ರತಿಮ ಚಲುವೆ ಶಬಾನಾ ಅಜ್ಮಿ ಅವರ ಮಗಳು. ಮೇರು ಚಲನಚಿತ್ರ ಛಾಯಾಗ್ರಾಹಕ ಬಾಬಾ ಅಜ್ಮಿ ಅವರ ಮಗ.

    ಮೂಲ ಸಾಹಿತ್ಯವು ಅಪರಂಜಿಯಾದರೆ. ತಮ್ಮ ಾವಾನುವಾದವು ಆಭರಣ ಮಾಡುವ ಚಿನಿವಾರನ ನೈಪುಣ್ಯತೆ ಕಾಣುತ್ತದೆ.

    शाख़-ए-गुल ಪಾರಿಜಾತವಾಗುತ್ತದೆ ಎಂದರೆ ಅದು ಮೂಲ ಕವಿಯ ಅಕ್ಷರವನ್ನು ಓದುಗರಿಗೆ ಆಪ್ತವಾಗಿಸುವ ಆಶಯಕ್ಕೆ ಸಿಕ್ಕ ಪುರಸ್ಕಾರ.

    'ಬಂಧವನ್ನು ಪುಟಕ್ಕಿಡುವುದರಲ್ಲಿ
    ಕಳೆದ ಕ್ಷಣಗಳಲಿ
    ಒಂದು ಪ್ರೇಮ, ಕಾವ್ಯವಾಗಬಹುದಿತ್ತು
    ಒಲವು ಚಿನ್ನವಾಗಿ , ಗಟ್ಟಿಯಾಗಿ
    ಒಡಲ ಆಭರಣವಾಗಬಹುದಿತ್ತು'

    ಈ ಚರಣವು ಕೈಫಿಯವರ ಸಾಹಿತ್ಯಕ್ಕೆ ಸ್ವರ್ಣಾಜೀಯವರು ಕೊಟ್ಟ ಕನ್ನಡ ಪಾರಿತೋಷಕದಂತಿದೆ.

    ತುಂಬ ಮೆಚ್ಚುಗೆಯಾಯಿತು.

    ReplyDelete
  2. ಮೂಲದ ಭಾವವನ್ನು ಹಾಗು ಮೂಲದ ಸೊಬಗನ್ನು ಮೀರಿದ ಅನುವಾದವಿದು. ನಿಜ ಹೇಳಬೇಕೆಂದರೆ, ಇದು ಅನುವಾದ ಎನ್ನಿಸುವುದೇ ಇಲ್ಲ. ಸಂಕ್ರಾಂತಿಯಂದು ಸೊಗಸಾದ ಕವನವನ್ನು ಕೊಟ್ಟಿದ್ದೀರಿ.
    ಸಂಕ್ರಾಂತಿಯ ಶುಭಾಶಯಗಳು.

    ReplyDelete
  3. ಕಾಕಾ ಮತ್ತು ಬದರಿ ಸರ್, ನಿಮ್ಮ ಪ್ರೋತ್ಸಾಹಕ್ಕೆ ಆಭಾರಿ

    ReplyDelete