ಬೆನ್ನುಡಿ ಓದುವಾಗ ವೈಶಾಲಿ ಎಂಬ ಹೆಸರು ನೋಡಿ ಬಹುಶಃ ಇದು ಬುಧ್ಧನಿಗೆ ಸಂಬಂಧಿಸಿದ್ದಿರಬಹುದು ಎಂದುಕೊಂಡದ್ದು ಪೂರ್ತಾ ತಪ್ಪಾಗಿತ್ತು. ಅರ್ಧದಾರಿ ವಿವೇಕಾನಂದರ ಸಮಕಾಲೀನರಾದ ಅಭೇದಾನಂದರ ಶಿಷ್ಯೆಯಾಗಿದ್ದ ವೈಶಾಲಿಯ ಬಗ್ಗೆ , ಆಕೆಯ ಕೆಲವೇ ಸ್ನೇಹಿತರಲ್ಲಿ ಒಬ್ಬರಾದ ಪ್ರಮೋದ್ ಸನ್ಯಾಲ್ ಅವರು ಸತ್ಯಕಾಮರಿಗೆ ಹೇಳಿದ ಕಥೆ ಎಂದು ಮುನ್ನುಡಿಯಲ್ಲಿ ಬರೆಯಲಾಗಿದೆ. ವೈಶಾಲಿಯ ಅರ್ಧ ಪಯಣ ಮಾತ್ರ ದಾಖಲಾಗಿರುವುದರಿಂದ ಸತ್ಯಕಾಮರು ಇದಕ್ಕೆ ಅರ್ಧದಾರಿ ಎಂಬ ಹೆಸರು ಕೊಟ್ಟಿರಬಹುದು. ಆದರೆ ಅವರೇ ಮುನ್ನುಡಿಯಲ್ಲಿ ಹೇಳಿದಂತೆ ಅರ್ಧದಾರಿಯಲ್ಲೂ ಪೂರ್ಣತೆ ಇದೆ , ಪೂರ್ಣಮದಃ......
‘ಉನ್ನತಿ’ಯೆಡಿಗಿನ ವೈಶಾಲಿಯ ಪಯಣವೇ ಅರ್ಧದಾರಿ. ಪಯಣದಲ್ಲಿ ಆಕೆ ಗಳಿಸಿಕೊಳ್ಳುವ ಸಿಧ್ಧಿಗಳು,
ಅವುಗಳನ್ನು ಆಕೆ ಅರ್ಥೈಸಿ ಕೊಳ್ಳುವ ಪರಿ, ಆಕೆಯ ತಂದೆಯ ಸಮಚಿತ್ತ , ತಾಯಿ ಜೀವದ ತೊಳಲಾಟ, ಸ್ನೇಹಿತೆಯ ಕುತೂಹಲ ಆಸಕ್ತಿ ಪ್ರೀತಿ
ಎಲ್ಲವನ್ನೂ ಸತ್ಯಕಾಮರು ತಮ್ಮದೇ ರೀತಿಯಲ್ಲಿ
ಹೇಳುತ್ತಾ ಹೋಗುತ್ತಾರೆ.
ಆಧ್ಯಾತ್ಮ ಪಥದ ಬಗ್ಗೆ ಚೂರು ಆಸಕ್ತಿ ಇದ್ದರೆ ಈ ತರಹದ ಕಥೆಗಳು ಹೆಚ್ಚು ದಕ್ಕುತ್ತವೆ
ಎಂಬುದು ನನ್ನ ಅನಿಸಿಕೆ.ಆಸಕ್ತಿಯ ಪರಿಮಾಣ ಬದಲಾದಂತೆ ಈ ಪುಸ್ತಕಗಳಿಂದ ನಮ್ಮ ನಿರೀಕ್ಷೆಗಳ
ಸ್ವರೂಪವೂ ಬದಲಾಗಬಹುದು. ಕೆಲ ವಿಷಯಗಳನ್ನ ಅಥವಾ
ಒಟ್ಟಾರೆಯಾಗಿ ಬದುಕನ್ನ ಆಸ್ವಾದಿಸಲು ಒಂದು ಹಂತದ ಪೂರ್ವ ತಯಾರಿ ಇದ್ದರೆ ಒಳಿತು . ಉಪನ್ಯಾಸವೊಂದರಲ್ಲಿ ಶತಾವಧಾನಿ ರಾ.ಗಣೇಶರು ತಮಾಷೆಯಾಗಿ ಹೇಳುತ್ತಾರೆ , ‘ಕರ್ನಾಟಕ ಸಂಗೀತದ ನೀರಿಕ್ಷೆಗಳೊಂದಿಗೆ ಹಿಂದೂಸ್ಥಾನಿ ಕಚೇರಿಗೆ ಹೋಗ ಬಾರದು. ಹಿಂದೂಸ್ಥಾನಿಯವರು ಚಲತ ರಾಜ ಕುಮಾರಿ ಅಂತ ಶುರುಮಾಡಿ ನೀವು ಕಾಫಿ ಕುಡಿದು ಬಂದರೂ ಇನ್ನೂ ರಾಜ ಕುಮಾರಿ ಚಲತಾನೆ ಇರ್ತಾಳೆ’.
ನನ್ನಿರಿವಿಗೆ
ಬಾರದ್ದು ತಪ್ಪು ಅಥವಾ ನನಗೆ ತಿಳಿದಿಲ್ಲ ಆದ್ದರಿಂದ ಅದು ತಪ್ಪು ಅನ್ನೋದು ಮನಸ್ಸನ್ನು ರಾಡಿಯಲ್ಲಿ
ಮುಳುಗಿಸುವ ಸುಲಭ ಸಾಧನ. ಇಂತಹ ಕೆಲವು
ಪೂರ್ವಾಗ್ರಹಗಳನ್ನು , ಕೆಲವು ಪ್ರಶ್ನೋತ್ತರಗಳನ್ನೂ ಬದಿಗೊತ್ತಿ ಅರ್ಧದಾರಿಯನ್ನು ಓದಿದರೆ ‘ವೈಶಾಲಿ’ ಹೆಚ್ಚು ಅರ್ಥವಾಗಬಹುದು. ಇಷ್ಟೆಲ್ಲಾ ಹೇಳಿದಾಗ್ಯೂ ಆಧ್ಯಾತ್ಮದ ಬಗ್ಗೆ ನನಗಾವುದೇ
ಅರಿವಿಲ್ಲ ,ಮೇಲಿನವುಗಳು ಓದುವಾಗ ಬಂದ ವಿಚಾರಗಳು
ಮಾತ್ರ.
ಬಂಗಾಳದ
ಶ್ರೀಮಂತ, ಇಂಗ್ಲೆಂಡಿನಲ್ಲಿ ಓದಿದ ಮುಕ್ತ ವಿಚಾರವಾದಿ ವಂದ್ಯೋಪಾದ್ಯಾರ ಮಗಳು ವೈಶಾಲಿ. ತಾಯಿ ತಂದೆ ಮತ್ತು
ಗೆಳತಿ ಚಾರು ವೈಶಾಲಿಯ ಲೌಕಿಕ ತ್ರಿಕೋನ. ಊರಿಗೆ
ಬಂದ ಯಾವ ಆಧ್ಯಾತ್ಮ ವಿಚಾರವಾದಿಯೂ ವಂದ್ಯೋಪಾದ್ಯಾರ
ಆತಿಥ್ಯ ಸ್ವೀಕರಿಸದೇ ಹೊರಡಲಾರ. ಹೀಗೆ
ಮನೆಗೆ ಬಂದ ಅಭೇದಾನಂದರನ್ನು ವೈಶಾಲಿ
ಗುರುವಾಗಿ ಸ್ವೀಕರಿಸಿ ಕಾಡು ಸೇರುತ್ತಾಳೆ. ಆದರೆ
ಆಕೆಯನ್ನು ಬಿಟ್ಟು ಹೊರಡುವ ಗುರು ಅಬೇಧಾನಂದರು ಅವಳ ಹಾದಿಯನ್ನು ಅವಳೇ ಹುಡುಕಿಕೊಳ್ಳುವಂತೆ ಮಾಡುತ್ತಾರೆ. ತನ್ನ ಹಾದಿಯನ್ನು
ನಿರ್ಮಿಸಿಕೊಂಡ ವೈಶಾಲಿಗೆ ಕೆಲ ಸಿದ್ಧಿಗಳು ಲಭಿಸುತ್ತವೆ. ಈ ಸಿಧ್ಧಿಗಳಿಂದಲೇ ವೈಶಾಲಿ ತನ್ನ ಗೆಳತಿ ಚಾರೂವಿನ ದುಃಖಕ್ಕೆ ಮರುಗಿ ಅವಳನ್ನು ಮಾಟಗಾತಿಯ ಬಲೆಯಿಂದ ಪಾರು ಮಾಡಿ, ಆ
ಮಾಟಗಾತಿಗೂ ತಾಯಿಯಾಗುತ್ತಾಳೆ ,ಅರಬಿಂದೋ ಆಶ್ರಮಕ್ಕೆ ಹೋಗಿ ಯಾರನ್ನೂ ಭೇಟಿ ಮಾಡದ ಅರಬಿಂದೋರನ್ನು
ಭೇಟಿ ಮಾಡಿ ಬರುತ್ತಾಳೆ. ಗಮನಿಸಬೇಕಾದ
ಅಂಶವೆಂದರೆ ಆಕೆ ದೈಹಿಕವಾಗಿ ಈ ಸ್ಥಳಗಳಿಗೆ
ಹೋಗುವುದಿಲ್ಲ.
ಇವೆಲ್ಲವೂ
ಸಾಧ್ಯವಾಗುವುದು ಅಷ್ಟ ಸಿಧ್ಧಿಗಳಿಂದ ಮತ್ತು ಸಂಕಲ್ಪ ಬಲದಿಂದ . ಅಣಿಮಾ , ಮಹಿಮಾ ಗರಿಮ, ಲಘಿಮಾ , ಪ್ರ್ರಾಪ್ತಿ, ಪ್ರಾಕಾಮ್ಯ,ಇಷಿತ್ವ, ವಷಿತ್ವ ಎಂಬುವು ಅಷ್ಟ ಸಿಧ್ಧಿಗಳು . ಕೃಷ್ಣನಿಗಿದ್ದ ಅಷ್ಟ ಮಹಿಷಿಯರು ಈ ಅಷ್ಟ ಸಿಧ್ಧಿಗಳ ದ್ಯೋತಕ ಎಂಬ ಅಧ್ಯಾತ್ಮಿಕ ಅರ್ಥವೂ
ಇದೆ.
ಅಷ್ಟ ಸಿಧ್ಧಿಗಳ
ಬಗ್ಗೆ ಕಿರಿಯ ಮಿತ್ರ ವಿಶ್ವಜಿತ್ ಒಂದು ಚಂದದ ಬರಹವನ್ನು ಫೇಸ್ಬುಕ್ಕಿನಲ್ಲಿ ಹಂಚಿ ಕೊಂಡಿದ್ದರು.
ಅವರ ಅನುಮತಿ ಪಡೆದು ಅದನ್ನು ಯಥಾವತ್ತು ಇಲ್ಲಿ ಹಾಕಿದ್ದೇನೆ.
“ಅಣಿಮಾ - ದೇಹವನ್ನು ಅಣುವಿನ ಗಾತ್ರಕ್ಕೆ ಕುಗ್ಗಿಸುವ
ಸಿದ್ಧಿ.(ಹನುಮಂತ ಲಂಕೆಗೆ ಹಾರುವಾಗ ಕೀಟವಾಗಿ ರಾಕ್ಷಸಿಯೊಳಗೆ ಲಗ್ಗೆಯಿಟ್ಟಿದ್ದು
ನೆನಪಿಸಿಕೊಳ್ಳಿ..)
ಮಹಿಮಾ - ದೇಹವನ್ನು ಊರಗಲ ಹಿಗ್ಗಿಸುವ ಸಿದ್ಧಿ.(ಅದೇ ಹನುಮಂತ ಭೀಮನನ್ನು ಭೇಟಿಯಾದಾಗ ಪರ್ವತದ ಗಾತ್ರಕ್ಕೆ ದೇಹವನ್ನು ಹಿಗ್ಗಿಸುತ್ತಾನಲ್ಲಾ.. ಅದೇ ಇದು.)
ಗರಿಮಾ - ದೇಹದ ಭಾರವನ್ನು ಟನ್ನುಗಳಷ್ಟು ಹೆವಿಯಾಗಿಸುವ ಸಿದ್ಧಿ.(ಹನುಮ-ಭೀಮ ಭೇಟಿಯಲ್ಲಿ ಹನುಮನ ಬಾಲವನ್ನು ಅಲ್ಲಾಡಿಸಲಾಗಲಿಲ್ವಲ್ಲ ಭೀಮನ ಹತ್ರ ಅದೇ.)
ಲಘಿಮಾ - ಗಾಳಿಯಲ್ಲಿ ತೇಲಿ ನಿಲ್ಲುವಿಕೆ.
ಪ್ರಾಪ್ತಿ - ಎಲ್ಲಾ ಸ್ಥಳಗಳಿಗೂ ಕ್ಷಣಮಾತ್ರದಲ್ಲಿ ಹೋಗಬಹುದಾದ ಸಿದ್ಧಿ.(ಸಾಗರದ ವರದಹಳ್ಳಿಯ ಶ್ರೀಧರರಿಗೆ ಹಾಗೂ ತೀರ್ಥಹಳ್ಳಿಯ ಕುಂದಾದ್ರಿಯ ಸ್ವಾಮಿಗಳಿಗೆ ಈ ಶಕ್ತಿ ಇತ್ತು ಅನ್ನೋ ನಂಬಿಕೆ ಆ ಭಾಗಗಳಲ್ಲಿದೆ.)
ಪ್ರಾಕಾಮ್ಯ - ತನ್ನ ಇಷ್ಟಗಳನ್ನೆಲ್ಲ ರಿಯಾಲಿಟಿಗೆ ತಂದುಕೊಳ್ಳುವ ಸಿದ್ಧಿ.
ಇಷ್ಟ್ವ - ದೇಹವನ್ನು ಸಂಪೂರ್ಣ ದೈವತ್ವಕ್ಕೇರಿಸುವ ಸಿದ್ಧಿ.
ವಷ್ಟ್ವ - ಸರ್ವವನ್ನೂ ಆವರಿಸಿಕೊಳ್ಳುವ/ಆಳಾಗಿಸಿಕೊಳ್ಳುವ ಸಿದ್ಧಿ.
ಇದಲ್ಲದೇ ಇನ್ನೂ ಹಲವು ಸಿದ್ಧಿಗಳ ಬಗ್ಗೆ ಭಗವದ್ಗೀತೆ ಮತ್ತು ಭಾಗವತ ಪುರಾಣದಲ್ಲಿದೆ..
ಅದ್ವಂದ್ವಂ - ಸಿಕ್ಕಾಪಟ್ಟೆ ಹೀಟು,ಕೋಲ್ಡುಗಳನ್ನು ತಡೆದುಕೊಳ್ಳುವ ಸಿದ್ಧಿ.
ಮಹಿಮಾ - ದೇಹವನ್ನು ಊರಗಲ ಹಿಗ್ಗಿಸುವ ಸಿದ್ಧಿ.(ಅದೇ ಹನುಮಂತ ಭೀಮನನ್ನು ಭೇಟಿಯಾದಾಗ ಪರ್ವತದ ಗಾತ್ರಕ್ಕೆ ದೇಹವನ್ನು ಹಿಗ್ಗಿಸುತ್ತಾನಲ್ಲಾ.. ಅದೇ ಇದು.)
ಗರಿಮಾ - ದೇಹದ ಭಾರವನ್ನು ಟನ್ನುಗಳಷ್ಟು ಹೆವಿಯಾಗಿಸುವ ಸಿದ್ಧಿ.(ಹನುಮ-ಭೀಮ ಭೇಟಿಯಲ್ಲಿ ಹನುಮನ ಬಾಲವನ್ನು ಅಲ್ಲಾಡಿಸಲಾಗಲಿಲ್ವಲ್ಲ ಭೀಮನ ಹತ್ರ ಅದೇ.)
ಲಘಿಮಾ - ಗಾಳಿಯಲ್ಲಿ ತೇಲಿ ನಿಲ್ಲುವಿಕೆ.
ಪ್ರಾಪ್ತಿ - ಎಲ್ಲಾ ಸ್ಥಳಗಳಿಗೂ ಕ್ಷಣಮಾತ್ರದಲ್ಲಿ ಹೋಗಬಹುದಾದ ಸಿದ್ಧಿ.(ಸಾಗರದ ವರದಹಳ್ಳಿಯ ಶ್ರೀಧರರಿಗೆ ಹಾಗೂ ತೀರ್ಥಹಳ್ಳಿಯ ಕುಂದಾದ್ರಿಯ ಸ್ವಾಮಿಗಳಿಗೆ ಈ ಶಕ್ತಿ ಇತ್ತು ಅನ್ನೋ ನಂಬಿಕೆ ಆ ಭಾಗಗಳಲ್ಲಿದೆ.)
ಪ್ರಾಕಾಮ್ಯ - ತನ್ನ ಇಷ್ಟಗಳನ್ನೆಲ್ಲ ರಿಯಾಲಿಟಿಗೆ ತಂದುಕೊಳ್ಳುವ ಸಿದ್ಧಿ.
ಇಷ್ಟ್ವ - ದೇಹವನ್ನು ಸಂಪೂರ್ಣ ದೈವತ್ವಕ್ಕೇರಿಸುವ ಸಿದ್ಧಿ.
ವಷ್ಟ್ವ - ಸರ್ವವನ್ನೂ ಆವರಿಸಿಕೊಳ್ಳುವ/ಆಳಾಗಿಸಿಕೊಳ್ಳುವ ಸಿದ್ಧಿ.
ಇದಲ್ಲದೇ ಇನ್ನೂ ಹಲವು ಸಿದ್ಧಿಗಳ ಬಗ್ಗೆ ಭಗವದ್ಗೀತೆ ಮತ್ತು ಭಾಗವತ ಪುರಾಣದಲ್ಲಿದೆ..
ಅದ್ವಂದ್ವಂ - ಸಿಕ್ಕಾಪಟ್ಟೆ ಹೀಟು,ಕೋಲ್ಡುಗಳನ್ನು ತಡೆದುಕೊಳ್ಳುವ ಸಿದ್ಧಿ.
ಪರ ಚಿತ್ತ ಆದಿ ಅಭಿಜ್ನಾತಾ - ಮೈಂಡ್ ರೀಡಿಂಗ್.
ದೂರಶ್ರವಣ - ದೂರಪ್ರದೇಶಗಳಲ್ಲಿದ್ದುಕೊಂಡೇ ಉಪಕರಣಗಳ ಸಹಾಯವಿಲ್ಲದೇ ಕೇಳಿಸಿಕೊಳ್ಳಬಲ್ಲ ಸಿದ್ಧಿ.
ಕಾಮ-ರೂಪಂ - ಯಾವ ರೂಪಕ್ಕೆ ಬೇಕಾದರೂ ದೇಹವನ್ನು ಬದಲಾಯಿಸಿಕೊಳ್ಳುವ ಸಿದ್ದಿ.(X-Men ಸಿನಿಮಾದಲ್ಲಿ ಆ ನೀಲಿ ಹುಡ್ಗಿ ಚೇಂಜ್ ಆಗ್ತಾಳಲ್ಲಾ.. ಅದು.)
ದೂರದರ್ಶನಂ - ಎಲ್ಲೋ ನಡೆಯುವ ಘಟನೆಗಳನ್ನು ಕುಳಿತಲ್ಲಿಂದಲೇ ವೀಕ್ಷಿಸುವ ಸಿದ್ಧಿ.
ಪರಕಾಯ ಪ್ರವೇಶ - ಬೇರೆ ದೇಹದೊಳಗೆ ಪ್ರವೇಶಿಸುವ ಸಿದ್ಧಿ.(ಶಂಕರಾಚಾರ್ಯರು ಮಾಡಿದ್ರಲ್ಲ.. ಹಾಗೆ.)
ಅನೂರ್ಮಿಮತ್ವಂ - ಬಾಯಾರಿಕೆ,ಹಸಿವುಗಳ ಮೀರುವ ಸಿದ್ಧಿ.
ಸ್ವಚ್ಛಂದ ಮೃತ್ಯು - ಬೇಕಾದಾಗ ಸಾವನ್ನಪ್ಪುವ ಸಿದ್ಧಿ. ಇಚ್ಛಾಮರಣ ಅಂತಲೂ ಅನ್ನಬಹುದು ಇದನ್ನ.“
ಎಲ್ಲಾ ಆಧ್ಯಾತ್ಮ
ಗುರುಗಳೂ ಈ ಸಿಧ್ಧಿಗಳನ್ನು ಹತೋಟಿಯಲ್ಲಿಟ್ಟುಕೊಂಡು
ತಮ್ಮ ಶಿಷ್ಯರಿಗೆ ಇವನ್ನು ಆದಷ್ಟು ಕಡಿಮೆ ಬಳಸಲು ಉಪದೇಶಿಸುತ್ತಾರೆ.
ಸಿಧ್ಧಿಗಳು ,ಸಾಧನಾ
ಪಥದ ಹೆಚ್ಚು ಅರಿವಿದ್ದಷ್ಟೂ ಅರ್ಧದಾರಿ ಹೆಚ್ಚು ದಕ್ಕುತ್ತಿದೆ ಎಂಬುದು ನನ್ನ ಭಾವನೆ . ಕೊನೆಯಲ್ಲಿ ವೈಶಾಲಿ
ಅಭೆದಾನಂದರನ್ನು ಕನ್ಯಾಕುಮಾರಿಯಲ್ಲಿ ಸಂಧಿಸುವುದರೊಂದಿಗೆ ಅರ್ಧದಾರಿ ಕೊನೆಯಾಗುತ್ತದೆ. ಪ್ರತೀ ಕಥೆಯೂ ,
ಪ್ರತೀ ಶಬ್ಧವೂ ನಮಗೆ ದಕ್ಕುವುದು ನಮ್ಮ ಅರಿವಿನ ಮಿತಿಯಲ್ಲಿ ಮತ್ತು ಇದು ನನ್ನ ಮಿತಿಯಾದ್ದರಿಂದ ಹೆಚ್ಚು ಬರೆಯಲಾರೆ.
ತಟ್ಟಿದ ಕೆಲವು
ಸಾಲುಗಳು :“ತೊಳೆದರೆ ಮೈ ಹಗುರಾಗುತ್ತದೆ , ನೀರಿಗೆ ಬಿದ್ದ ಕೋಣಕ್ಕೂ ಇದು ಗೊತ್ತು
“
“ಧೃಡ ಇಚ್ಛೆಯೇ
ಸಂಕಲ್ಪ ,ಯಾವ ಇಚ್ಛೆ ನಿಶ್ಚಿತ ಫಲವನ್ನು ಗರ್ಭದಲ್ಲಿ ಹೊತ್ತಿದೆಯೋ ಅದೇ ಸಂಕಲ್ಪ “
ಅರ್ಧದಾರಿ ಓದಿದ
ನಂತರ ಅನಿಸಿದ್ದು :
ಅನಾಮಿಕ ಸುಮಕ್ಕೆ
ಬೇಲಿ ದಾಟಿ ಬಯಲಾಗುವ ಆಸೆ
ಪಕಳೆ ಸತ್ಯವೋ ,
ಪರಿಮಳ ಸತ್ಯವೋ ಎಂಬ ಜಿಜ್ಞಾಸೆ
ದಾಟುವ
ಪ್ರಯತ್ನದಲ್ಲಿ ಪಕಳೆಗಳು ಹರಿದುದುರಬಹುದು
ಏನೊಂದೂ ದೊರಕದೆ ಸುಮ ಶೂನ್ಯವಾಗಿ ಮಣ್ಣಾಗಬಹುದು
ಒಂದೊಮ್ಮೆ
ಅರಿವಾಯಿತು ಸುಮಕ್ಕೆ
ದಾಟುವ ಶಕ್ತಿ
ಇರುವುದು ಪರಿಮಳಕ್ಕೆ
ಪಕಳೆಗೆ ಮಾತ್ರ ಇಲ್ಲ
ಸಲ್ಲದ ಬೇಲಿ
ಪರಿಮಳಕ್ಕಿಲ್ಲ
ಇದಾವುದರ ಖಯಾಲಿ
ಯಾರ ಹಂಗೂ ಬಯಲಾದ
ಪರಿಮಳಕ್ಕಿಲ್ಲ
ಬಯಲಾಗುವ ಭಾಗ್ಯ
ಪಕಳೆಗಿಲ್ಲ
ಆದರೂ ಪಕಳೆ ಇಲ್ಲದೇ
ಪರಿಮಳವಿಲ್ಲ
ಎರಡರ ಸಮನ್ವಯದಲಿ
ಬಾಳು ಸವಿ ಬೆಲ್ಲ
ಮುಂದುವರೆಯುವುದು
ಕುತೂಹಲ ಮತ್ತು ಜಿಜ್ಞಾಸೆ ಇವು ಸತ್ಯಕಾಮರ ರಚನೆಯಲ್ಲಿ ತೋರುವ ಲಕ್ಷಣಗಳು. ವೈಶಾಲಿಯ ಅರ್ಧ ದಾರಿಯನ್ನು ಚೆನ್ನಾಗಿ ವಿವರಿಸಿದ್ದೀರಿ. ಮುಂದಿನ ಭಾಗಕ್ಕಾಗಿ ಕಾಯುತ್ತಿರುವೆ.
ReplyDeleteಅಭೇದಾನಂದರ ಶಿಷ್ಯೆ ವೈಶಾಲಿಯ ಬಗ್ಗೆ ಹಿಂದೊಮ್ಮೆ ಪ್ರ.ವಾ - ಸಾ.ಪುದಲ್ಲಿ ಓದಿದ್ದೆ. ಅದೂ ಅರೆಬರೆ! ಸತ್ಯಕಾಮರು ಪರಿಪೂರ್ಣತೆ ಕೊಟ್ಟಿದ್ದಾರೆ ಅನಿಸುತ್ತದೆ.
ReplyDeleteಶತಾವಧಾನಿ ರಾ.ಗಣೇಶರ ಮಾತು ತುಂಬ ಮಾರ್ಮಿಕವಾಗಿದೆ, ಯಾವುದೋ ನಿರೀಕ್ಷೆಯಿಂದ ಮುಗಿಬಿದ್ದು ಹೋದ ಸಂಗತಿಗಳು ಬೇರೆ ಏನೋ ಅಗಿರುತ್ತವೆ, ಬದುಕಿನಲ್ಲಿ!
’ದೈಹಿಕವಾಗಿ ಈ ಸ್ಥಳಗಳಿಗೆ ಹೋಗುವುದಿಲ್ಲ’ ಎಂದು ಬರೆದಿದ್ದೀರಿ, interesting... ನಾನಂತೂ ಓದಲೇಬೇಕು.
ಅಷ್ಟ ಸಿಧ್ಧಿಗಳ ಪಟ್ಟಿಗೂ, ಈ ಬಗ್ಗೆ ಬರೆದ ವಿಶ್ವಜಿತ್ ಅವರಿಗೂ ಧನ್ಯವಾದಗಳು.
ಇನ್ನು ನಿಮ್ಮ ಕವನದ ಬಗ್ಗೆ:
ಸುಮವೂ ಪರಿಮಳವೂ ಒಟ್ಟೊಟ್ಟಿಗಿದ್ದರೂ, ಪರಿಮಳಕೆ ಅಂಕೆಗಳಿಲ್ಲ, ಪಕಳೆಗಳಿಗೆ ಸಮಯದ ಲಗಾಮು.
ತುಂಬ ದೊಡ್ಡ ವಿಚಾರವನ್ನು ಸುಲಭಾರ್ಥದಲ್ಲಿ ಕಟ್ಟಿಕೊಟ್ಟಿದ್ದೀರ.
dhanyavada medam :)...Nanu adhyatmakke sambhandisida yavude kathe odilla...nodtini sikre :)..Vandanegalu :)
ReplyDeletehan pakale-suma-parimalagala melarthadalli jasti enu vishesha kanslilla....olartha kadambarige sambhandhisiddeno...
ಕಾಕಾ , ಬದರಿ ಸರ್ ಮತ್ತು ಚಿನ್ಮಯ್ ಅವರಿಗೆ ಧನ್ಯವಾದಗಳು
ReplyDeleteನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ ಸ್ವರ್ಣ...ತುಂಬಾ ಕಲಿಯಬೇಕಾದದ್ದು ನಮಗಿದೆ. ಧನ್ಯವಾದಗಳು.
ReplyDelete