೧. ಹೀರುವ ದುಂಬಿಯದು
ಸದಾ ಗುಂಯ್ ಗುಂಯ್ ಗಾನ
ನೀಡುವ ಹೂವಿಗೇಕೊ ಎಂದೂ ಕರಗದ ಮೌನ
೨. ಪರಿಮಳವೆಲ್ಲಾ ಅಗ್ಗದ ಅತ್ತರಾಗಿ
ಪಕಳೆಗಳೆಲ್ಲಾ ರಸ್ತೆಯ ಕಸವಾಗಿ
ಬದುಕು ಮುರಿದರೂ
ಮತ್ತೆ ಅರಳುವುದು ಸುಮದ
ಹಣೆಬರಹವೋ ಆಶಾಭಾವವೋ ?
೩. ಅದೆಷ್ಟೋ
ರಾತ್ರಿಗಳ ಹಗಲಾಗಿಸಿ
ನಿನಗಾಗಿ ನಾಲ್ಕು ಸಾಲು
ತಂದರೆ
ನಿನ್ನ ಮೊಗದ ನಗೆಯ ಕಂಡಾಕ್ಷಣ
ಅವೆಲ್ಲವೂ ಅರ್ಥ ಹೀನ
ಅನಿಸಿ ಬಿಟ್ಟವು !
೪. ಹಲ ಜೀವಿಗಳು
ಮಕರಂದವನ್ನು ಹೀರಿದರೂ
ಸವಿಯ ಜೇನುಣಿಸಲು
ಶಕ್ತವಲ್ಲ !
೫. ಬಾನಿಂದ ಜಾರಿದ ಹನಿಗಳೆಲ್ಲವೂ
ಕರಗುವ ಮುನ್ನ ವರ್ತುಲಗಳಲ್ಲಿ
ತಿರುಗಿಯೇ ತೀರಬೇಕು
೬.ನಿನ್ನೆಡೆಗೆ ಬರುವ
ದಾರಿಯನ್ನ ಅಲಂಕರಿಸಿದ
ಕನಸುಗಳೆಂಬ ಪಾರಿಜಾತದ
ಮೇಲೆ ಹೆಜ್ಜೆ ಇಡಲಾಗದೆ
ನಾನಿಲ್ಲೇ ನಿಂತು ಬಿಟ್ಟೆ
!
೭. ನೀನ್ಯಾಕೋ ನಿನ್ನ
ಹಂಗ್ಯಾಕೋ
ಎಂದಾಗ ಒಲಿದ ನೀನು
ನೀನೆ ಅನಾಥ ಬಂಧು ಎಂದಾಗ
ಒಲಿದಿದ್ದರೆ
ಈ ಸಾಲುಗಳು ಮೂಡುತ್ತಲೇ ಇರಲಿಲ್ಲ
೮. ಎಷ್ಟು ಕ್ರೌಂಚಗಳು
ಸತ್ತಿರಬಹುದು
ತ್ರೇತೆಯ ನಂತರ ?
ಒಂದೂ ರಾಮಾಯಣ ಹುಟ್ಟಲಿಲ್ಲ
ತಂದೆಯೊಂದು ಮಾತಿಗಾಗಿ ರಾಜ್ಯವನ್ನೇ
ಬಿಟ್ಟೇನೆಂಬ ಮಗ ಹುಟ್ಟಲಿಲ್ಲ !
೯.
ಅವ ಬರುವನೆಂಬ ಕನಸ ಬಿಡಲಾರೆ ನಾನು
ಎಲೆಗಳಲಿ ಮಲಗಿದ ಬೆಳದಿಂಗಳು ಇನ್ನೂ ಎಚ್ಚರಗೊಂಡಿಲ್ಲ !
೧೦. ಭಾರವಾದ ಮಾತುಗಳನು
ಕರಗಿಸಲು
ಕಂಬನಿಯ ಮೊರೆ ಹೊಕ್ಕೆ ನಾನು.
೧೧. मेरे आशियाने
का
पता
मत
पूछना
क्योंकि
मैं
अभी
तिनके
की
तलाश
में
हूँ
|
ಎಲ್ಲ ಹನಿಗಳೂ ತುಂಬ ಚೆನ್ನಾಗಿವೆ. ಮಕರಂದದ ಹನಿಯು ultimate.
ReplyDeleteThanks sir
Deleteऎक आशियाना के लिये कितने तिनखॆ चाहिये?
ReplyDeleteबस,
ऎक तिनखा
ऎक हरा भरा
जॊ आपकॆ पास है ही।
:) Thank you kaakaa.
ReplyDelete