Thursday, March 06, 2014

ಎಲ್ಲೆ ಮೀರುವ ಹೊತ್ತು

ಚಿತ್ರಕೃಪೆ : ಅಂತರ್ಜಾಲ
 ನೆನ್ನೆ ರಾತ್ರಿ ನಾನೊಂದು ಕನಸು ಕಂಡೆ
ಅದು ಕನಸಾ ಅಥವಾ ಅದರಲ್ಲಿದ್ದ ನಾನೇ  ಕನಸಾ ?
ಗೊತ್ತಿಲ್ಲ
ಈ ಗೊತ್ತಿಲ್ಲ ಅನ್ನೋ ಪದ ಕೆಲವು ಬಾರಿ ಎಷ್ಟು ಉಪಯೋಗಕಾರಿ,  ಅಲ್ವಾ ?
ಉತ್ತರ ಏನೂ ತೋಚದಾಗ ಗೊತ್ತಿಲ್ಲ ಅನ್ನೋದು ನೆನಪಾದ್ರೆ ಸಲೀಸು
ನಿನ್ನ ಬದುಕಿನಲ್ಲಿ ನನ್ನ ಪಾತ್ರ ಏನು ?
ಗೊತ್ತಿಲ್ಲ
ನಾನಿರದೆ ನೀನು ಬದುಕ ಬಲ್ಲೆಯಾ ?
ಗೊತ್ತಿಲ್ಲ
ಹೀಗೆ ಗೊತ್ತಿಲ್ಲ ,ಗೊತ್ತಿಲ್ಲಗಳ ನಡುವೆ ನಾವೊಂದು ಕಾಡು ತಲುಪಿದೆವು
ಕಾಡು ಎಂದರೆ  ಹರಿದ್ವರ್ಣದ ಕಾಡಲ್ಲ
ಅರಣ್ಯ ಇಲಾಖೆಯವರು ಬೆಳೆಸಿದ
ನೆಲದ ನೀರನೆಲ್ಲ ಹೀರಿ  ತಾನೇ ತಾನಾಗಿ ಬೆಳೆವ ನೀಲಗಿರಿ ತೋಪು 
ಎಲ್ಲಿ ನೋಡಿದರೂ ಹೆಜ್ಜೆ ಇಡಲಾಗದಷ್ಟು
ಒಣ ಎಳೆಗಳ ರಾಶಿ
ಮುಂದೆ ಹೋಗುತ್ತಿದ್ದ ಜೀವವನ್ನು ಕೇಳಿದೆ
ಹೆಜ್ಜೆ  ಇಡೋಕಾಗ್ತಿಲ್ಲ , ಸ್ವಲ್ಪ ಕೈ ಹಿಡಿತಿಯಾ ?
ಸಿಕ್ಕ ಕೈ ಹಿಡಿದು ಒಂದು ಹೆಜ್ಜೆ ಮುನ್ನಡೆದೆ
ಮತ್ತದೇ ಗೋಳು
ಒಣ ಎಲೆಗಳ  ನಡುವೆ ಸಿಕ್ಕಿಕೊಂಡ ಹೆಜ್ಜೆ
ಮತ್ತೆ ಮತ್ತೆ ಕೈ ನೀಡೆಂದು ಕೇಳುವುದೆಂತು ?
ನಾನೇ ಸರಿಸಬೇಕೆಂಬ ನಿಶ್ಚಯ ಬಲವಾಯಿತು
ಎಲೆಗಳ ಮುಟ್ಟಲು ಭಯ
ಕೆಳಗೆ ಹಾವಿದ್ದರೆ , ಚೇಳಿದ್ದರೆ ?
ಅಲ್ಲೇ ಬಿದ್ದಿದ್ದ ಒಣ ಕಡ್ಡಿಯೊಂದನಾಯುಧ ಮಾಡಿಕೊಂಡೆ
ಎಲೆ ಸರಿಸಿದರೆ ಕಂಡದ್ದು
ಹಾವೂ ಅಲ್ಲ ಚೇಳೂ ಅಲ್ಲ
ಒಂದಷ್ಟು ಕೊಳೆತ ಎಲೆ
ಆ ನಾತದಿಂದ ತಪ್ಪಿಸಿಕೊಳ್ಳಲಾದರೂ
ಮುಂದೆ ಸಾಗಬೇಕು
ಕೊಳೆತದ್ದು ಗೊಬ್ಬರವಾಗಬೇಕು
ಎಷ್ಟು ಹೆಜ್ಜೆ ಹಾಗೆ ನಡೆದೆನೋ ?
ಮತ್ತೆ ಕೋಲಲ್ಲಿ ಎಲೆ ಸರಿಸಿದರೆ ಕಂಡದ್ದು
ಪುಟ್ಟದೊಂದು ಮೊಳಕೆ
ಯಾರೋ ತಿಂದು ಬಿಸುಟ ಹಲಸಿನ ಬೀಜ
ತನ್ನ ಸಂತತಿಯನ್ನು ಬೆಳೆಸಿತ್ತು
ಅದು, ನಕ್ಕು ಹೇಳುತಿತ್ತು
ನಾತದಲ್ಲೂ ಬದುಕು ಅರಳಬಹುದು !
ಮತ್ತೊಂದಿಷ್ಟು ದೂರ ಸಾಗಿದಾಗ ಕಂಡದ್ದು
ಕೆಂಜಿರುವೆಯೊಂದು ತನ್ನ ಸಂಸಾರಕ್ಕಾಗಿ ಕಟ್ಟಿಕೊಂಡ
ಅಂದದ ಅರಮನೆ , ಅದೆಷ್ಟೊಂದು ದೊಡ್ಡ ಸಂಸಾರ !
ಧೃಡವಾಗಿ ಹೇಳಿತ್ತು , ಬದುಕುವ ಛಲವೊಂದಿದ್ದರೆ
ನೀಲಗಿರಿ ಕಾಡೇನು ? ಹರಿದ್ವರ್ಣವೇನು ?
ಹೀಗೆ ಮೊಳಕೆ, ಜೀವಗಳ  ಆಸರೆಯಲ್ಲಿ  ನೀಲಗೀರಿ ತೋಪಿನ
ಅಂಚು ತಲುಪಿದ್ದೆ
ಹೊಂಗೆ ತೋಪಿನ ಪ್ರಾರಂಭದಲ್ಲಿದ್ದೆ
ಗೊತ್ತಿಲ್ಲಗಳ ಮೀರಿ ಸಾಗಿದ್ದೆ

7 comments:

  1. ಇದು ಬದುಕುವ ಛಲ!

    ReplyDelete
  2. ಹಲವು ಗೊತ್ತಿಲ್ಲಗಳ ಸಮಗ್ರವೇ ಅಸಲು ಬದುಕಲ್ಲವೇ? ಎಷ್ಟೋ ಸಂಗತಿಗಳು ಅರಿವಿಗೆ ನಿಲುಕದಿದ್ದರೇನೇ ಭೇಷೇನೋ, ವಿಚಾರಗಳ ಹಿಂದೆ ಅಡಗಿರುವ ವಿಚಾರಗಳು ತಾಕದಿದ್ದಾವು ನಮ್ಮನ್ನು!

    ಛಲಗಾರರಿಗೆ ಶೂನ್ಯದಲ್ಲೂ ಸ್ವರ್ಗವನ್ನು ಸೃಷ್ಟಿಸಿಕೊಳ್ಳುವ ಧೀಶಕ್ತಿ ಇರುತ್ತದೆ ಏನೋ!

    ತಾಕುವ ಬರಹ.

    ReplyDelete
  3. very nice.. ishta aytu... inspirational

    ReplyDelete
  4. ಬಿಸಿಲು, ಮಳೆ, ಚಳಿಗೆ ಮೈಯೊಡ್ಡಿ ಛಲದಿಂದ ನಿಲ್ಲುವ ಗಿಡಮರಗಳು ಮನುಷ್ಯನಿಗೆ ಪಾಠ

    ReplyDelete
  5. ಚೆನಾಗಿದೆ :).ನೀಲಗಿರಿ ಮಲೆರಿಯಾ ಮುಂತಾದ ರೋಗವನ್ನೆಷ್ಟೇ ಅಲ್ಲ,ಮನಸಿನ ಗೊತ್ತಿಲ್ಲಗಳನ್ನೂ ಹೊಡೆದೋಡಿಸುತ್ತದೆ ಅಲ್ವಾ?? ಹೊಂಗೆ,ಜೈವಿಕ ಇಂಧನವಂತೆ,ಬದುಕಿಗೂ ಚೈತನ್ಯ ಕೊಟ್ಟೀತೆ ???
    ಇಷ್ಟವಾಯಿತು :) :)...
    ಬರೆಯುತ್ತಿರಿ :)

    ReplyDelete
  6. chennagide. jivana kade varegu ondu hudukata

    ReplyDelete
  7. idu kanasa? adaroLagina neenu kanasa? tiLIlla. I don't expect the answer.. yakandre answer already blog post alle ide. Nice :-)

    ReplyDelete