ನೆರಳ ಕಾಣದೆ ಎಷ್ಟು ದಿನವಾಗಿತ್ತು ?
ಓಟವೇ ಓಟ , ತೀರದ ಹುಡುಕಾಟ
ಅವರಿವರ ನೆರಳಲ್ಲಿ ತನ್ನ ಕಾಣುವ ತವಕ
ಅದು ತಾನೇ ಎಂಬ ಭ್ರಮೆಯ ಪುಳಕ
ಮುಚ್ಚಿದ ಬಾಗಿಲುಗಳ ಹಿಂದವಿತ ಆಕೃತಿಗಳು
ಹೊರಗೆ ಕಂಡದ್ದು ಅವುಗಳ ಪ್ರತಿಕೃತಿಗಳು
ಪ್ರತಿಕೃತಿಗಳಿಗೆ ಜೀವವಿಲ್ಲ, ಮರೆತ ಸತ್ಯ
ಸ್ವಯಂ ಮಂಡಯೂರಿ ಒಪ್ಪಿಕೊಂಡ ದಾಸ್ಯ
ದಾಸ್ಯವೆಂದೂ ಸಖ್ಯವಾಗದು .......
ದಾಸ್ಯವೋ ಸಖ್ಯವೋ ಒಂಭತ್ತು ಹೆಸರಿನ ಭಕ್ತಿ
ಒಲವಲ್ಲಿ ಮಂಡಿಯೂರಿದಾಗಲೇ ಮುಕ್ತಿ
ಹಲವು ಬಾರಿ ನಮ್ಮದೇ ನೆರಳು ನಮಗೆ ಭಯಕಾರಕ ಮತ್ತು ಸಂಪೂರ್ಣ ಅಪರಿಚಿತ.
ReplyDeleteಕೃತಿಗಳು ಉಂಟುಮಾಡಿದ ಕಲ್ಪನೆಗಳು ಮತ್ತು ಪ್ರತಿಕೃತಿಗಳು ಸೃಷ್ಟಿಸುವ ಅಲೋಚನೆಗಳು ಗಳಿಗೆಗೆ ಒಂದರ್ಥ ಮೂಡಿಸಬಲ್ಲವು.
ಧನ್ಯವಾದಗಳು ಬದರಿ ಸರ್
Delete`ಒಲವಲ್ಲಿ ಮಂಡಿಯೂರಿದಾಗಲೇ ಮುಕ್ತಿ'..... ಪರಮ ಸತ್ಯ!
ReplyDelete(ಇದು ಸತ್ಯಕಾಮರ ಜೊತೆಗೆ ನಡೆಸುತ್ತಿರುವ ಸಂವಾದವೆ?)
ಸತ್ಯಕಾಮರೊಂದಿಗೆ ಸಂಭಾಷಣೆ ನಡೆಸುವಷ್ಟು ತಿಳಿದಿಲ್ಲ ಕಾಕಾ :)
Deleteಧನ್ಯವಾದಗಳು
ಉಹು :(
ReplyDeletetumbaa chennagi moodi bandide :) munduvaresi
ReplyDelete