![]() |
| ಚಿತ್ರ ಕೃಪೆ : ಅಂತರ್ಜಾಲ |
ತಿದ್ದುವ
ಪ್ರಯತ್ನ ಜಾರಿಯಲ್ಲಿದೆ ....
ಹೊತ್ತು,
ಹೆತ್ತು, ಪೊರೆದೆ
ಸುಖಿಸಲಿಲ್ಲವೇ
? ಎನ್ನುವುದೊಂದು ವಯಸು
ತಟ್ಟೆಯಲ್ಲಿನ
ಊಟ ರುಚಿಸದಾದಾಗ
‘ಅಮ್ಮ ನೀನಿದ್ದರೆ ಚೆನ್ನಿತ್ತೆ’ ಎನ್ನುವುದು
ಮತ್ತೊಂದು
ಸಂತತಿ
ಮುಂದುವರೆದಾಗ ನನ್ನ ಪೋರೆದಂತೆ
ಇದನ್ನೂ
ಪೊರೆಯೆ ಎನ್ನುವುದು ಸ್ವಾರ್ಥವಲ್ಲ,
ಅಮ್ಮ,
ಮೊಮ್ಮಕ್ಕಳ ಸುಖ ಕಾಣಲೆಂಬ ಹಂಬಲ !
ಅದೋ ಅಲ್ಲಿದೆ
ನಿನಗೇಂತ ಒಂದು ರೂಮು
ಈ
ಮಹಾನಗರದಲ್ಲಿ ಒಬ್ಬಳಿಗೆ ೧೦*೧೦ !
ಇನ್ನು
ಎಲ್ಲರನ್ನೂ ಹೊತ್ತ ಅವಳಿದ್ದಾಳಲ್ಲ
ಅವಳ ಕಂಬನಿಗೆ
ಕಣ್ಣಿಲ್ಲ
ಹೆತ್ತ
ಮಕ್ಕಳೆಲ್ಲ ಕಿವುಡರು !
ಹೆಣ್ಣು
ಕಾಯುತ್ತಿದ್ದಳು
ಮುರಿದ
ಗೂಡಿಗೊಂದು
ಹರಿದ ಚಿಂದಿ
ಹೊತ್ತು
ಗಂಡು
ಬರುವನೆಂದು
ಗಂಡುಬರುವ
ಹೊತ್ತಿಗೆ
ಗುಲ್ಮೊಹರ್
ಧರೆಗುರುಳಿದೆ
ತನ್ನವಳೊಂದಿಗೆ,
ಇನ್ನೂ ಹೊರಬರದ
ತನ್ನ ಸಂತತಿಯೂ
ಕಳೆದಿದೆ ಎಂದು
ಅವನಾರಲ್ಲಿ
ಮೊರೆಇಡಬೇಕು ?
ಅರೆ,
ಗುಲ್ಮೊಹರ್ ಉರುಳಿದರೆನಾಯಿತು
ಅಲ್ಲಿ
ಕಟ್ಟಿದ ಅಪಾರ್ಟ್ಮೆಂಟಿನ ಬಾಲ್ಕನಿಯಲ್ಲೊಂದು
ಹಳೇ ರಟ್ಟಿನ ಪೆಟ್ಟಿಗೆ ಇಟ್ಟು , ಚಿಂದಿ ಬಟ್ಟೆ ಇಟ್ಟು ,
ಚಂದದ
ಗೂಡನ್ನು ಕಟ್ಟಿ ಕೊಡಲಿಲ್ಲವೇ ?
ಅಜ್ಜ ಕಟ್ಟಿದ
ಹಂಚಿನ ಮನೆ ಅವನಿಗೆ ಮನೆಎನಿಸಲಿಲ್ಲ
ಕಾಗಕ್ಕ ,
ಗುಬ್ಬಮ್ಮ , ಮೈನಾ ರಾಣಿ, ಹದ್ದು
ಮುದ್ದು ಗಿಳಿ
ರಾಮ ಯಾರೂ
ಡಬ್ಬವನ್ನು ಗೂಡೆಂದು ಬಗೆಯಲೇ ಇಲ್ಲ !
ಅಜ್ಜನ
ಮನೆಯನ್ನು ಮೊಮ್ಮಗ
ಮರೆತನೆಂಬುದು
ತಪ್ಪು ಎಣಿಕೆ
ಹಸಿರಿಗಾಗಿ ,
ಕೈತುತ್ತಿನ ನೆನಪಿಗಾಗಿ
ವಾರಾಂತ್ಯದ
ಆನಂದಕ್ಕಾಗಿ
ತನ್ನ
'ಮನೆ'ಗಾಗಿ ಮೊಮ್ಮಗ ಅಜ್ಜನ ಮನೆ ಉಳಿಸಿದ
ಮಹಾನಗರಿಯಲ್ಲೊಂದು
, ಹಳ್ಳಿ ಯಲೊಂದು
ಹೋದಲೆಲ್ಲಾ
ಒಂದೊಂದು ಮನೆ
ಬೇರುಬಿಡಲಾಗದ
ಗಿಡಕ್ಕೆ
ನೂರು ಸೂರು !
ಗೌರಿಗೊಂದು
ಇಂಜೆಕ್ಷನ್
ಕೊಡಿಸಬೇಕು ಈ
ವಾರದಲ್ಲಿ
ಅಜ್ಜಿ ಹೇಳಿದರೆ , ಮೊಮ್ಮಗಳು ಕಣ್ಣರಳಿಸಿ
ಕೇಳುತ್ತಾಳೆ “ಯಾಕಜ್ಜಿ ಗೌರಿಗೆ ಹುಶಾರಿಲ್ಲವೇ?”
“ಇಲ್ಲ ಕಣೆ , ಅವಳಿಗೊಂದು ಕರುಹುಟ್ಟಬೇಕು “
ಹಸಿವು ,
ನಿದ್ರೆ, ಭಯ , ಲೈಂಗಿಕತೆ ...ಎಲ್ಲ ಜೀವಿಗೂ ಸಮಾನ
ಸಚ್ಚರಿತ್ರೆಯ
ಸಾಲಿನಲ್ಲಿ ಗೌರಿ ಕೆನ್ನೆಗೆ ಹೊಡೆದಂತಾಗುತ್ತದೆ
ಅಳಲಾಗದೆ
ಗೌರಿಯ ಮುಂದೆ ನಿಲ್ಲುತ್ತೇನೆ , ತಿವಿದು ಕೊಂದುಬಿಡೆ
ಎಂದು
ಬೇಡುತ್ತೇನೆ , ಕೆಚ್ಚಲಿಗೆ ಹಚ್ಚುವ ಯಂತ್ರದತ್ತ
ನೋಡುತ್ತಿದ್ದ
ಗೌರಿ , ನನ್ನನ್ನೇ ಕೊಂದು ಮಾರಿಬಿಡೆ ಎಂದಂತಾಗುತ್ತದೆ
ಹತ್ತರ ಮಗಳು
ಮನೆ ಬಿಟ್ಟು ಹೊರಟರೆ
ಅವಳು
ಬರುವವರೆಗೂ ಕಣ್ಣು ಹೊಸ್ತಿಲಕಡೆ
ಗೌರಿಯ
ಶಾಪವಿರಬಹುದೇ ಇದು ?
“ಅಮ್ಮಾ, ಇದೇ ಏನೇ ಲಯನ್ ದ ಕಿಂಗ್ “
ಮೃಗಾಲಯದ ಪಕ್ಕದ ರೋಡಿನ
ಟ್ರಾಫಿಕ್ಕಿನ
ಸದ್ದಿನಲ್ಲಿ ಘರ್ಜಿಸುವುದನ್ನೂ
ಮರೆತು
ಹೋಗಿರುವ ರಾಜನನ್ನು
“ಕಿಂಗ್” ಎಂದು ಹೇಗೆ ಪರಿಚಯಿಸಲಿ ?
ಬೇಡಲು ಸೆರಗೂ
ಇಲ್ಲದಂತೆ
ನಾವು ಕೊಂದ
ತಾಯಂದಿರ ಲೆಖ್ಖ ಇಟ್ಟವರಾರು ?
ಒಬ್ಬಳನ್ನೇ
ಸಾಕಲಾರದವರಿಗೆ
ಒಂಭತ್ತು
ತಾಯಂದಿರ ಪೂಜೆ
ಕಾಳಿ ಅವತರಿಸುವ ದಿನವೆಂದು ?
ನಮ್ಮೀ ಸ್ವಾರ್ಥಕ್ಕೆ ಕೊನೆಯೆಂದು ?
ಕಾಳ ರಾತ್ರಿ ಕಳೆದು ಕಾಳಿ ಬೇಗ ಅವತರಿಸಲಿ.
ಶುಭಾಶಯಗಳು

ಹಲವು ಹಂತಗಳ ಮೂಲಕ ಬದುಕಿನ ವೈರಿಧ್ಯಗಳನ್ನು ಮತ್ತು ವಿಪರೀತಗಳನ್ನು ತೆರೆದಿಡುತ್ತ ಸಾಗುವ ಸುಧೀರ್ಘ ಕವನ.
ReplyDeleteನವ ಮಾತೃಕೆಯರ ನೆಪದಲ್ಲಿ ತಾವು ಅಸಲೀ ಅಮ್ಮಂದಿರ ಶಕ್ತಿ ಮತ್ತು ಬವಣೆಯನ್ನು ಏಕ ಕಾಲಕ್ಕೆ ಚಿತ್ರಿಸಿಕೊಟ್ಟಿದ್ದೀರ.
ಮೊದಲಿಗೆ ನಾನು ಬೆಂಗಳೂರಿಗೆ ಕಾಲಿಟ್ಟಾಗ ಉಳಿದುಕೊಂಡಿದ್ದ ೧೦*೯ ಅಳತೆಯ ಗುಬ್ಬಚ್ಚಿ ಗೂಡು ನೆನಪಾಯಿತು. ಪ್ರತಿಕ್ಷಣ ಆಗಲೂ ಈಗಲೂ ಇರಿಯುತ್ತಿರುವುದು ನನ್ನ ಹಳ್ಳಿಯ ವಿಶಾಲ ಮನೆ!
ನಗರ ನರಕದಲ್ಲಿ ಕಳೆದೆ ಹೋಗಿರುವ ನಮ್ಮ ತನ, ಕಾಂಕ್ರಿಟ್ ಜಂಗಲಿನಲ್ಲಿ ಹಾರಲು ಎಡತಾಕುವ ಪಕ್ಷಿ ಸಂಕುಲ, ಪಶು ಹಿಂಸೆಯ ಕ್ರೌರ್ಯ ಹೀಗೆ ತಾವು ತಾಕದ ತಾಕಲಾಟದ ಸಂಗತಿಗಳೇ ಇಲ್ಲಿ ಇಲ್ಲ.
A classic example of LIVE poetry.
Badarinath has said everything. Congratulations for such poetry.
ReplyDeleteಅಹ್ ಕಾವ್ಯಭಾವದ ಪೂರ್ಣಗ್ರಹಿಕೆ ನನಗಿನ್ನೂ ಅನುಭವದ ಜೊತೆಗೇ ಸೇರಿಕೊಳ್ಳಬೇಕೇನೋ...
ReplyDeleteಕವನ,ಅದರನ್ನು ಹೇಳುವ ರೀತಿ ಎಲ್ಲವೂ ಇಷ್ಟವಾಯಿತು ಮೇಡಮ್..
ಧನ್ಯವಾದಗಳು :)...
ನಿಮಗೆಲ್ಲರಿಗೂ ಧನ್ಯವಾದಗಳು. ಈ ಸಾಲುಗಳು ಇನ್ನೂ ಪೂರ್ಣ ಎಂದು ನನಗನ್ನಿಸಿಲ್ಲಾ..ಽಅದರೂ ಪೋಸ್ಟ್ ಮಾಡಿದ್ದನ್ನ ಮೆಚ್ಚಿದ ನಿಮಗೆ ವಂದನೆಗಳು ಕಾಕಾ, ಬದರಿ ಸರ್ ಮತ್ತು ಚಿನ್ಮಯ್
ReplyDeleteಕುರುಡು, ಕಿವುಡು, ಮೂಕ ಮದವೇರಿದ ಬದುಕಿನ ಹುಚ್ಚು ಹೆಜ್ಜೆಗಳು.. ಉತ್ತಮ ಕವನ.
ReplyDeletePrayatna bhavapurnavaagide... paripurnavagali...
ReplyDelete