ಹೊಸ್ತಿಲು ದಾಟುವಾಗ
ಕಾಲು ಹಿಡಿದು ಎತ್ತಿಕೋ
ಎನ್ನುವ ಮಗು
ನನ್ನಲ್ಲಿ ಹುಟ್ಟಿದ ಸಾಲು
ಮಗುವನೆತ್ತಿ ಮುದ್ದು
ಮಾಡಿ, ನೆತ್ತಿ ಮೂಸಿ
ಮುತ್ತು ಕೊಟ್ಟು ,
ಅಪ್ಪಿ ಮುದ್ದಾಡಿದ್ದಿದ್ದರೆ
ಅದರ ಬೆವರ
ಮಂಗಳ ಸ್ನಾನ
ನನ್ನಲ್ಲೊಂದು ಹೊಸ ಕವಿತೆ
ಕಾಯುತ್ತಿರುವ ಗುರಿ
ದುಗುಡ ತುಂಬಿದ
ಚಿತ್ತ ಹುತ್ತ
ಕಂದನತ್ತ ಮುಗುಳುನಗೆಯೊಂದ
ನೆಸೆದು ಹೋರಾಟಕ್ಕೆ
ಹೊರಟ ನಾನು
ಬೇರೆತ್ತಲೋ ಮಗುವ ಪಯಣ
ವೇಳೆ ಸಿಕ್ಕಿತು ಇನ್ನೀಗ
ಬಾ ಮಗು ಎಂದು ತೋಳು ಚಾಚಿದರೆ
ಪುಟ್ಟ ರೆಪ್ಪೆಗಾಗಲೇ ಕನಸ ಬಣ್ಣ
ಖಾಲಿ ತೋಳು
ಸತ್ತ ಸಾಲು !
ಕಾಲು ಹಿಡಿದು ಎತ್ತಿಕೋ
ಎನ್ನುವ ಮಗು
ನನ್ನಲ್ಲಿ ಹುಟ್ಟಿದ ಸಾಲು
ಮಗುವನೆತ್ತಿ ಮುದ್ದು
ಮಾಡಿ, ನೆತ್ತಿ ಮೂಸಿ
ಮುತ್ತು ಕೊಟ್ಟು ,
ಅಪ್ಪಿ ಮುದ್ದಾಡಿದ್ದಿದ್ದರೆ
ಅದರ ಬೆವರ
ಮಂಗಳ ಸ್ನಾನ
ನನ್ನಲ್ಲೊಂದು ಹೊಸ ಕವಿತೆ
ಕಾಯುತ್ತಿರುವ ಗುರಿ
ದುಗುಡ ತುಂಬಿದ
ಚಿತ್ತ ಹುತ್ತ
ಕಂದನತ್ತ ಮುಗುಳುನಗೆಯೊಂದ
ನೆಸೆದು ಹೋರಾಟಕ್ಕೆ
ಹೊರಟ ನಾನು
ಬೇರೆತ್ತಲೋ ಮಗುವ ಪಯಣ
ವೇಳೆ ಸಿಕ್ಕಿತು ಇನ್ನೀಗ
ಬಾ ಮಗು ಎಂದು ತೋಳು ಚಾಚಿದರೆ
ಪುಟ್ಟ ರೆಪ್ಪೆಗಾಗಲೇ ಕನಸ ಬಣ್ಣ
ಖಾಲಿ ತೋಳು
ಸತ್ತ ಸಾಲು !
ಇದು ಕವನದ ಕತೆ!
ReplyDeleteಬದುಕಿನ ಓಘದ ಮುಂದೆ ಪ್ರೀತಿ ವಿಶ್ವಾಸ ಅಭಿಮಾನಗಳಿಗೂ ಸಮಯಾಭಾವವಾಗಿ, ಒಬ್ಬರನ್ನೊಬ್ಬರು ಮನೆಯೊಳಗೇ ಸಂಧಿಸುವ ವೇಳಾಪಟ್ಟಿಯೂ ತ್ರಾಸದಾಯಕವೇ ಇದೀಗ!
ReplyDeleteಕವಿತೆಯ ಉಪಸಂಹಾರ ಕವಿಯತ್ರಿಯೂ ಸೇರಿ ಹಲವರಲ್ಲಿ ಉಂಟುಮಾಡುವ ಮನೋ ವೇದನೆ ವರ್ಣಿಸಲದಸದಳ.