Thursday, August 17, 2017

ಅಲೆಗಳು

ಪರ್ಷಿಯನ್ ಕವಿ ಸಿಯಾವಶ್ ಕಸ್ರಾಯಿ ಯವರ ಭಂವರ್  ನ  ಇಂಗ್ಲಿಷ್ ಭಾಷಾಂತರದ   ಭಾವಾನುವಾದ .
ಗೆಳತಿಯೋಬ್ಬರು ಈ ಕವಿತೆಯನ್ನು ಹಂಚಿಕೊಂಡಿದ್ದರು . ಆಗ ಹೊರ ಬಂದ ಸಾಲುಗಳು .

ಅವ್ಯಕ್ತ, ಅಮೂರ್ತ ತೀರ(?)ದೆಡೆಗೆ ಹರಿಯುತ್ತಿದ್ದೆವು
'ನಾ',' ನೀ' ನೆಂಬ ಎರಡು ಅಲೆಗಳು
ಸಂಗಮದ ಪಯಣ ಹಿತವಾಗಿತ್ತು
ನಮ್ಮ ಆಸೆ, ಕನಸು
ನೋವು, ನಲಿವು
ಗುರಿ,ಗಮ್ಯದೆಡೆಗೆ
ಏರಿದ್ದು,ಮತ್ತಿಳಿದಿದ್ದು
ಎಲ್ಲವೂ ಸಾಂಗತ್ಯಗಾನವಾಗಿತ್ತು
ಸಂತಸದ ಹಾಡಾದೆವು
ಸ್ವಚ್ಛವಾಗಿ ಹರಿದೆವು
ದೂರತೀರದ ನೋಟ ಕಂಡು ಪುಳಕಗೊಂಡೆವು
ಆದರೆ...
ಆದರೆ, ಅದೊಂದು ರಾತ್ರಿ ಗಾಳಿ ಸುಳಿಯಾಯ್ತು
'ನಾ' ನೆಂಬ ಅಲೆ ಒಂಟಿಯಾಯ್ತು
ಬಂಧದ ಮುತ್ತುಗಳು ಚೂರಾದವು
ಕಡಲಾಳದಲ್ಲೆಲ್ಲೊ ಕಳೆದುಹೋದವು
ಆ ಕ್ಷಣದಿಂದ ನಾನೊಂಟಿ!
ಕಳೆದ ಬಲದ ಅನ್ವೇಷಣೆ ಸಾಗಿದೆ
ಸರಿಯುತ್ತಿರುವ ಕ್ಷಣಗಳ ಲೆಕ್ಖ ತಪ್ಪಿದೆ
ಓಡುತ್ತಲೇ ಇರುವೆ ಕರೆಯುತ್ತಲವನ
ಒಂಟಿಯಾಗಿ...

4 comments:

  1. ಸಾರ್ಥಕವಾದ ಅನುವಾದ, ಸ್ವರ್ಣಾ! ಅದರಲ್ಲೂ, ಸಾಂಗತ್ಯಗಾನ ಎನ್ನುವ ಪದವು ನನಗೆ ತುಂಬ ಹಿಡಿಸಿತು. ಇನ್ನು, Crying her name ಎಂದು ಇದ್ದದ್ದನ್ನು, ನೀವು ‘ಕರೆಯುತ್ತಲವನ’ ಎಂದು ಅನುವಾದಿಸಿದ್ದೀರಿ. ಇದನ್ನು ಅನುವಾದಕರ ಸ್ವಾತಂತ್ರ್ಯ ಎಂದು ಗ್ರಹಿಸಲೆ?
    ತುಂಬ ದಿನಗಳ ನಂತರ ನಿಮ್ಮ ಪೋಸ್ಟ್ ಓದುತ್ತಿರುವೆ. ಈ ದೀರ್ಘ ವಿಲಂಬವೇಕೆ?

    ReplyDelete
    Replies
    1. ಧನ್ಯವಾದಗಳು ಕಾಕಾ. ಹಾಗೆ ಸ್ವಾತಂತ್ರ್ಯ ತೆಗೆದುಕೊಳ್ಳಬಹುದೇ ಗೊತ್ತಿಲ್ಲ . ಇದನ್ನು ಅನುವಾದ ಎನ್ನಬಹುದೋ ಅದೂ ಅನುಮಾನವೇ! ನಿಮ್ಮ ಪ್ರೀತಿಗೆ ಋಣಿ

      Delete
  2. ಚೆನ್ನಾಗಿದೆ. ತುಂಬಾ ದಿನಗಳ ನಂತರ ನಿಮ್ಮ ಕವನ ಓದಲು ಸಂತೋಷವಾಗುತ್ತದೆ.

    ReplyDelete
  3. ಅನುವಾದಿತ ಲೇಖನ, ಕವನ ನನಗೆ ಓದಲು ಇಷ್ಟ. ಈ ಕವನ ತುಂಬಾ ಚೆನ್ನಾಗಿದೆ. ಇಷ್ಟವಾಯ್ತು...

    ReplyDelete