ಕಳೆದುಹೋದ ಅಸ್ತಿತ್ವವನ್ನು ನಾ ಹುಡುಕುತಿದ್ದೇನೆ ಜನ ಜಂಗುಳಿಯಲಿ,
ಸಿಗುತ್ತಿಲ್ಲವೆಂಬ ಸಿಟ್ಟಿಗೆ ಬಲಿಯಾಗುತ್ತಿವೆ ಎಲ್ಲ ಮನಸುಗಳು,
ಕಳೆದುಹೋದದ್ದು ಗೊತ್ತೇ ಆಗದ ಹಾಗೆ ನನ್ನ ಬಿಟ್ಟೋಡಿತ್ತು ನನ್ನೊಳಗಿನ 'ಸತ್ವ',
ಬರಿದಾಗಿ ಖಾಲಿ ಪಾತ್ರೆಯ ಸದ್ದೇ ಜಗಕ್ಕೆ ಕೇಳುವುದು,
ತುಂಬಿದ ಅದಾವ ಬಿಂದಿಗೆ ಅದೆಂದು ಸದ್ದು ಮಾಡೀತು?
ಮತ್ತದನು ಹುದುಕಬೇಕೇ? ತಿಳಿಯದು
ಹುಡುಕಿದರೆ ದೊರಕುವ ವಸ್ತುವೇ?
ಮತ್ತದನು ಸಂಪಾದಿಸಬೇಕೆ?
ದುಃಖ, ಚಿಂತನೆ, ವಿಚಾರಗಳು ಮಾರ ಅಕ್ಷರಗಳನ್ನ ಮೂಡಿಸುತ್ತವೆ
ಸಂತಸಕ್ಯಾಕೊ ಆ ಭಾಗ್ಯವಿಲ್ಲ....
ಬದುಕ ತೆರನ್ನೆಳೆವ ಭರದಲ್ಲಿ ನಾ ಮರೆತ್ತಿದ್ದ್ದೆ ಇವೆಲ್ಲವನ್ನ.
No comments:
Post a Comment