Friday, September 03, 2010

ಕೃಷ್ಣ

ಕೃಷ್ಣ  ಅದೆಷ್ಟು ಸುಂದರ, ಗಂಭೀರ, ಗಹನವಾದ ವ್ಯಕ್ತಿತ್ವ!
ಹೆಣ್ಣಿನ ಕಣ್ಣಿರು ಒರೆಸಲು ಭುವಿಗೆ ಬಂದನಂತೆ , ಅದೆಷ್ಟು ದಯಾಳು, ಕೋಮಲ ಹೃದಯದವ

ಪಾಂಡವರು ನಮಗೆ ಯುಧ್ಧ ಬೇಡ, ದುರ್ಯೋಧನನ ಆಳಾಗಿ ಬದುಕುತ್ತೇವೆ
ಎಂದಾಗ, ಕೃಷ್ಣ ಹೇಳಿದ ದ್ರೌಪದಿ  "ನೀನು ಹೇಳು, ನಿನಗೇನು ಬೇಕು?"

ಅದೆಷ್ಟು ಸೂಚ್ಯವಾಗಿ ಹೇಳಿದ, ದುರ್ಯೋಧನನಿಂದ ಅತೀ ಹೆಚ್ಚು ನೋವನು ಉಣ್ದವಳು,
ಅತೀ ಹೆಚ್ಚು ನೊಂದವಳು, ನೀನು ಹೇಳು ನಿನಗೇನು ಬೇಕು?

ಹೆಣ್ಣಿನ ಮೇಲಿನ ದೌರ್ಜನ್ಯವನ್ನು, ಅವಳ ನೋವನ್ನು, ಅವಳ ತುಮುಲವನ್ನು,
ಅದೆಷ್ಟು ನಿಖರವಾಗಿ ಅರ್ಥ ಮಾಡಿಕೊಂಡ.

ಕೃಷ್ಣೆ ಗೂ  ಗೊತ್ತಿತ್ತು ತನ್ನ ನೋವ ಅರ್ಥಿಸಿ ಕೊಳ್ಳ ಬಲ್ಲವನು
ತನ್ನ ಅಣ್ಣ, ಕೃಷ್ಣ ನೊಬ್ಬನೇ ಎಂದು !

ಇಷ್ಟು ಸಣ್ಣ ಘಟನೆಯಲ್ಲಿ ಅದೆಷ್ಟು ವಿಷಯಗಳು
ವ್ಯಾಸರು ಒಂದು ವೇಳೆ ಇದನ್ನು ಕಲ್ಪಿಸಿಯೇ ಬರೆದಿದ್ದರೆ ಅವರ ಕಲ್ಪನೆಗೊಂದು ಸಲಾಂ ಇರಲಿ,
ನಡಿದದನ್ನೇ ಬರೆದಿದ್ದಾರೆ ಅವರ ಶೈಲಿಗೊಂದು ನಮಸ್ಕಾರ.
ಇದನ್ನು ಹೇಳಿದ ಬನ್ನಂಜೆ ಗೋವಿಂದಾಚಾರ್ಯರಿಗೂ.

No comments:

Post a Comment