Tuesday, September 21, 2010

ಸಾಲುಗಳು

ದೂರದೊಂದು ತೀರದಿಂದ ಬಂದ ಪಾರಿಜಾತದ ಗಂಧ,
ಅವನ ಜೊತೆ ನನ್ನ ನಗುವನ್ನೂ ಕೊಂಡೊಯ್ದಿತ್ತು

**************************************
ವೈಣಿಕನಿಲ್ಲದೆ  ಮಿಡಿವ ವೀಣೆಗೆ ಮನಸೆನ್ನುತ್ತಾರೆನೋ .....
ಗಾಯಕನಿಲ್ಲದೆ ಹಾಡುವ ಹಾಡಿಗೆ ನೋವೆನ್ನುತ್ತಾರೆನೋ

******************************************
ಕೃಷ್ಣ ಬರುತ್ತಾನೆಂದು ಬೆಣ್ಣೆ  ಕಡೆದಿದ್ದೆ ಬಂತು
ಬೆಣ್ಣೆ ಬಂದರೂ ಚೋರ ಬರಲಿಲ್ಲ
******************************************
ನಾ ಅದೆಷ್ಟು ಹಾಡಿದೆ,
ಅದೆಷ್ಟು ಕುಣಿದೆ,
ಆ ಮುರಲಿಲೋಲನ ನೋಡಬೇಕೆಂದು,
ಅವ ಬರಲೇ ಇಲ್ಲ...
ಕಾರಣ....ನಾ ನನ್ನ ಮರೆತಿರಲಿಲ್ಲ
*********************************************

No comments:

Post a Comment