Wednesday, September 29, 2010

ಮತ್ತೆ ಮತ್ತೆ ಓದಬೇಕಿನಿಸುವ ಸಾಲುಗಳು

ರಾಧೆಯ ಸುಳಿವು ಗೋಪಿಕೆಯರಿಗೆ ಸಿಕ್ಕಿತೆಂದರೆ ಕೃಷ್ಣನೇ ಸಿಕ್ಕಿದಂತೆ. ಕೃಷ್ಣ ಮರಳಿ ಕಾಣಸಿಕ್ಕಿದಾಗ ಗೋಪಿಕೆಯರಿಗೆ ರಾಧೆಯ ನೆನಪಾಗಲಿಲ್ಲ! ಕೃಷ್ಣನ ಪಾದಗಳನ್ನು ತಮ್ಮೆದೆಯ ಮೇಲಿಟ್ಟುಕೊಂಡರು. ಪಾದ, ನೋಯುತ್ತಿದೆಯೇನು ಎಂದು ಕೇಳಿದರು. ನಿಮ್ಮ ಎದೆ ನೊಂದಿರುವುದು ನನ್ನ ಅಂಗಾಲಿಗೂ ತಿಳಿಯುತ್ತೆ ಎಂದ ಕೃಷ್ಣ. 
ಮತ್ತೇಕೆ ಮರೆಯಾದೆ ಕೃಷ್ಣ? ನಮ್ಮ ಉಸಿರೇ ನಿಂತಂತಾಗಿತ್ತು.
ನನಗೆ ನಿಮ್ಮನ್ನು ನೆನೆಯಬೇಕಿತ್ತು. ನಿಮ್ಮನ್ನು ಧ್ಯಾನಿಸಬೇಕಿತ್ತು. ಅದಕ್ಕೆ ಮರೆಯಾದೆನಷ್ಟೆ! (ಮಯಾ ಪರೋಕ್ಷಂ ಭಜತಾ ತಿರೋಹಿತಂ)
ಇದೇನು ಕೃಷ್ಣ ನೀನು ಹೇಳುತ್ತಿರೋದು? ನಾವು ಕಣ್ಣೆದುರೇ ಇದ್ದೆವಲ್ಲ!
ಇದ್ದೀರಿ ಹೌದು. ನನಗೆ ಕಣ್ಣು ಮಂಜಾಯಿತೇನೋ. ರಾಸನೃತ್ಯದ ಧೂಳು ಕಣ್ಣಿಗೆ ಕವಿದಿರಬೇಕು!  

(ಲಕ್ಷ್ಮೀಶ ತೋಳ್ಪಾಡಿ  ಯವರ  ಭಾಗವತ ಸರಣಿ ಇಂದ )

No comments:

Post a Comment