Friday, September 17, 2010

Baduku

ಯಾವ ಹಾಡ ಹಾಡಲಿ
ಇಲ್ಲದೇನ ಬರೆಯಲಿ?
ಬರೆಯಲೇ  ಬೇಕೆಂಬ ಹಟಕ್ಕೆ ಬಿದ್ದವಳಂತೆ ನಾ ಬರೆದರೂ,
ಅದರಿಂದೇನು ಲಾಭ?
ಬದುಕು ಲಾಭ ನಷ್ಟದ ಲೆಕ್ಕಾಚಾರವೇ?

ಯಾವ ಬಣ್ಣ ಹಚ್ಚಲಿ
ಇಲ್ಲದಾವ ವೇಷ ಹಾಕಲಿ?
ನಟಿಸಲೇ ಬೇಕೆಂಬ ಹಟಕ್ಕೆ ಬಿದ್ದು ನಾ ನಟಿಸಿದರೂ ,
ಅದರಿಂದೇನು ಉಪಯೋಗ?
ಜೀವನದ ಎಲ್ಲ ಗಳಿಗೆಗಳು ಉಪಯೋಗವಾಗಲೆಬೇಕೆಂಬ ನಿಯಮವೇ?

"ಬಕುಕೆಂದರೆನು? ಎಲ್ಲಿಂದಲೋ ತೇಲಿ ಬಂದ ಸ್ವರದ ಪ್ರಶ್ನೆ
ಉತ್ತರ ಸಿಗುವ ಮುಂಚೆಯೇ, ಸ್ವರವೆನ್ತು,
ಮೊದಲೇ ಬರೆದಿಟ್ಟ ನಾಟಕ  (?).....
ಅಷ್ಟರಲ್ಲಿ ಇನ್ನೊಂದೆನ್ತು,
ಈಪ್ರಶ್ನೋತ್ತರಗಳು  ಅದರಲ್ಲಿವೆ !
ಹಿಂದಿನಿಂದ ಯಾರೋ ನಕ್ಕಂತಾಯ್ತು"

ಅದೇನೋ ಸಾದಿಸ ಹೊರತು
ಕಡೆಗೆ ಪ್ರಶ್ನೋತ್ತರಗಳಲ್ಲೇ ಮುಗಿವುದೂ ಒಂದು ಬದುಕೇ?

No comments:

Post a Comment