Wednesday, September 29, 2010

Some thing I wrote couple of months back

ಬದುಕು ಸಾಗಿದೆ
ದೇಹ ಮಾಗಿದೆ ,
ಮಾಗಲೋಲ್ಲದು ಮನಸು!

ದುಡ್ಡಿನಾಸೆ
ದುಗ್ಗಾಣಿಯಾಸೆ,
ಮನೆಯಾಸೆ, ಮಂಚದಾಸೆ,
ಮಕ್ಕಳಾಸೆ,
ಎಲ್ಲ ಮುಗಿದರೆ ಮತ್ತೊಂದಾಸೆ!

ಅಳಿಯನಾಸೆ, ಸೋಸೆಯಾಸೆ
ಮೊಮ್ಮಕ್ಕಳಆಸೆ,
ಯಾತ್ರಯಾಸೆ, ಪುಣ್ಯದಾಸೆ
ಎಲ್ಲ ಮುಗಿದರೆ ಸ್ವರ್ಗದಾಸೆ!

ಮನಸೇ ನೀ ಆಸೆಗಳ ಬಿಡುವುದೆಂದು?
ನೀ ಮಾಗುವುದೆಂದು?

ಮತಾಂತರ ಬಗ್ಗೆ ದಿನಪತ್ರಿಕೆ ಯಲ್ಲಿ ದಿನವೂ ಲೇಖನಗಳು ಬರುತಿವೆ. ಎಲ್ಲರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಲೇಬೇಕೆಂದು ಪಣ ತೊಟ್ಟವರಂತೆ ಬರೆಯುತ್ತಲೇ ಇದ್ದಾರೆ. ರಾಮ ,ಕೃಷ್ಣ, ಬುದ್ದ, ಯೇಸು, ಅಲ್ಲಾಹು ಎಲ್ಲರ ಪೋಸ್ಟ್ ಮಾರ್ಟಂ ನಡೆಯುತ್ತಿದೆ.
ಒಬ್ಬರಿಗೆ ಕೃಷ್ಣ ಹೇಳಿದ್ದೆ ಪರಮ ಸತ್ಯ ಮತ್ತೊಬ್ಬರಿಗೆ ಕೃಷ್ಣ ಒಬ್ಬ ಸಾಮನ್ಯ ಗೊಲ್ಲ . ಕಾಳಿ ಕೆಲವರಿಗೆ ದೇವರಾದರೆ ಮತ್ತೆ ಕೆಲವರಿಗೆ ಭಯಂಕರ ರೂಪಿಣಿ. ಒಟ್ಟಿನಲ್ಲಿ ಜನರ ನಂಬಿಕೆಗಲೆನ್ನೇ ಅಳುಗಿಸುವಂತ ಮಾತುಗಳು ಎಲ್ಲೆಡೆ ಇಂದಲೂ ಕೇಳಿ ಬರುತ್ತಿವೆ.

ಅಲ್ಲಾಹು ಏಸು ಕೃಷ್ಣ ರಾಮ ಇವರೆಲ್ಲ ಒಂದೇ , ಯಾರಿಗೆ ಯಾವ ಧರ್ಮ ಬೇಕೋ ಅವರದನ್ನೇ ಅನುಸರಿಸಲಿ, ಆದರೆ ಯಾವುದೇ ಧರ್ಮದ ದೇವರ ನಿಂದನೆ ಬೇಡ ಎಂಬ ಧ್ವನಿ  ನನ್ನೊಳಗಿಂದ.

No comments:

Post a Comment