ವೇದಕಾಲದಿಂದ ತೊಡಗಿ ಇದು ಮಾನವನ ಪ್ರಶ್ನೆ. ನಾನಾವ ದೇವರನ್ನು ನೆನೆಯಲಿ? ಯಾರಿಗೆ ಮೊರೆ ಇಡಲಿ? ಕೂಗಿ ಕರೆಯಲಿ; ಯಾರ ಮುಂದೆ ತೋಡಿಕೊಳ್ಳಲಿ, ಯಾರಿಗೆ ಅರ್ಪಿಸಲಿ ಹವಿಸ್ಸನ್ನು? ಹೆಸರುಗಳು ಬೇರೆ, ರೂಪಗಳು ಬೇರೆ, ಗುಣಗಳು ಬೇರೆ, ಕ್ರಿಯೆ ಪರಿಣಾಮಗಳು ಬೇರೆ- ಒಂದೊಂದು ದೇವರಿಗೂ ಒಂದೊಂದು ಶಾಸ್ತ್ರ- ಎಲ್ಲವೂ ಒಂದು ದೊಡ್ಡ ಕರ್ಮಕಾಂಡ- ಕಸ್ಮೈ ದೇವಾಯ......
ಆಚಾರ್ಯ ಹೇಳಿದರು: ಹೆಸರು ಹಿಡಿದು ಕರೆಯುವುದಕ್ಕೆ ನಿನಗೇನು ಗೊತ್ತು ಮಗು? ನೀನು ನಿಜಕ್ಕೂ ಮೊರೆ ಇಡುತ್ತಿದ್ದಿಯೇನು? ಕಂಬನಿ ಜಿನುಗುತ್ತಿದೆಯೇನು? ಅಳು ಬರುತ್ತಿದೆಯೇನು? ಅತ್ತು ಬಿಡು. ಆ ಅಳುವಿನಲ್ಲಿ ತಾಯ ಹೆಸರಿದೆ!
ಮಗುವಿನ ಅಳುವಿನಲ್ಲಿ ತಾಯಿ ತನ್ನ ಹಾಜರಿ ಹಾಕಿದಳು!
ಆದುದರಿಂದ ಯಾರನ್ನು ನೆನೆಯಬೇಕು ಎಂಬ ಪ್ರಶ್ನೆಗೆ- ನೆನಪನ್ನು ನಮ್ಮಲ್ಲಿ ಇಟ್ಟ ಶಕ್ತಿಯನ್ನು ಎಂದೇ ಉತ್ತರ. ಅದಕ್ಕೆ ’ಶಕ್ತಿ’ ಎನ್ನುವುದೇ ಅನ್ವರ್ಥನಾಮ.
ನೆನಪಿನಲ್ಲಿ ನೆನಪನ್ನು ನಮ್ಮಲ್ಲಿ ಇಟ್ಟ ಶಕ್ತಿಯೇ ರೂಪಾಂತರಗೊಂಡು ಕುಳಿತಿದೆ. ಮಗುವಿನ ಅಳುವಿನಲ್ಲಿ ತಾಯಿ ಇರುವಂತೆ!
ಧ್ಯಾನದ ವಸ್ತುವಿನಲ್ಲಿಯೇ ’ಧ್ಯಾನ’ ಅಡಗಿದೆ. ಅಥವಾ ’ಧ್ಯಾನ’ವೇ ’ಧ್ಯಾನ’ದ ವಸ್ತು ಕೂಡ. ಈ ಸ್ಥಿತಿಯನ್ನು ’ಯುಕ್ತ:’- ಯೋಗ- ಕೂಡಿಕೊಂಡಿರುವ ಸ್ಥಿತಿ ಎಂದು ಗುರುತಿಸಿದರು.

ಕೃಪೆ : ಲಕ್ಷ್ಮೀಶ ತೋಳ್ಪಾಡಿ ಯವರ ಸೌಂದರ್ಯ ಲಹರಿ ಸರಣಿ
"ಧ್ಯಾನ ಧ್ಯಾತೃ ಧ್ಯೇಯಾ ರೂಪಾ, ಧರ್ಮಾಧರ್ಮ ವಿವರ್ಜಿತಾ" : ಲಲಿತಾ ಸಹಸ್ರನಾಮ - ೬೨
"ಧ್ಯಾನ ಧ್ಯಾತೃ ಧ್ಯೇಯಾ ರೂಪಾ, ಧರ್ಮಾಧರ್ಮ ವಿವರ್ಜಿತಾ" : ಲಲಿತಾ ಸಹಸ್ರನಾಮ - ೬೨
ಮಗುವಿನ ಅಳುವಿನಲ್ಲಿ ತಾಯಿ ತನ್ನ ಹಾಜರಿ ಹಾಕಿದಳು!
ReplyDeleteenthaha saalugalu
tumbane touching