Thursday, September 29, 2011

ಸಂಸಾರ

ಅದೆಷ್ಟೋ ಸಣ್ಣ ಸಸಿಗಳು ಕಾಲ್ತುಳಿತಕ್ಕೆ  ಸಿಕ್ಕು ಬಾಡುತ್ತವೆ.
ಅಲ್ಲೊಂದು ಪರಾಲಂಬಿ ಬಳ್ಳಿ ಆ ವೃಕ್ಷವನ್ನೇ  ಬಳಸಿ ಬೆಳಿದಿದೆ
ಅವೆರಡಕ್ಕೂ ಅದೇನು ನಂಟೋ ?

ಕೆಲವಕ್ಕೆ ನೆರಳೂ ಹಿಂಸೆ
ಇನ್ನು ಕೆಲವು ಬಿಸಿಲ ಕಂಡರೆ ಬಾಡುತ್ತವೆ
ಹೂ ಬಿಡುವ ತವಕ ಕೆಲವಕ್ಕೆ, ಹೂವಿನ ಹಂಗೇಕೆ ಎಂಬ ಧೋರಣೆ ಮತ್ತೊಂದರದ್ದು

ಮೈತುಂಬ ಮುಳ್ಳಿಟ್ಟುಕೊಂಡದ್ದು ಆತ್ಮರಕ್ಷಣೆಗೋ?
ಸಿಹಿಯಾದ ಹಣ್ಣ ಬಿಡಿಸಲು ಕಲ್ಲು ಬೀಳುತ್ತದೆಂದು  ಗೊತ್ತಿದು ಹಣ್ಣ ಬಿಟ್ಟಿದ್ದೇಕೆ?
ನೆರಳ  ಪಡೆದವರೇ ಕಡಿಯುತ್ತಾರೆಂದು  ಗೊತ್ತಿದ್ದೂ ಇಷ್ಟು ತಂಪೇಕೆ ?

ಎಲ್ಲಿಂದಲೋ ದನಿ ಬಂತು,
ಎಲ್ಲ ವೈರುಧ್ಯಗಳು ಸೇರಿದರೇನೆ ಕಾಡು !

9 comments:

  1. ಸುಂದರ ಕವಿತೆ.ಕಾಡಿನಲ್ಲಿ ಎಲ್ಲಾ ವೈರುಧ್ಯಗಳು ಹೇಗೆ ಸೇರ್ವೆಯೋ,ಈ ಸಮಾಜದ ವೈರುಧ್ಯಗಳೂ ಹಾಗೆಯೇ ಅಲ್ಲವೇ!?

    ReplyDelete
  2. ಧನ್ಯವಾದಗಳು ಸರ್

    ReplyDelete
  3. ಸ್ವರ್ಣಾ,
    ಕವಿತೆಯ ಆಕೃತಿ ಹಾಗು ತಿರುಳು ತುಂಬ ಚೆನ್ನಾಗಿವೆ. ಅಭಿನಂದನೆಗಳು.

    ReplyDelete
  4. ಧನ್ಯವಾದಗಳು ಸುನಾಥ್ ಸರ್

    ReplyDelete