Wednesday, October 05, 2011

ಬಣ್ಣ

ಯಾವುದೋ ಊರಿಂದ ಗುಳೆ ಬಂದು ,ಎಲ್ಲರ ಕನಸಿನ ಮನೆಗಾಗಿ,
ಜಲ್ಲಿ ಎತ್ತಿ, ಮರಳ ತಂದು ಮನೆ ಕಟ್ಟಿ ನಗುತ್ತಲೇ ಆ ಮನೆ ಬಿಟ್ಟು ತೆರಳುವ
ಆಕೆಗಾಗಿ :
ಆ ಹುಡುಗಿಯ ಮೊಗದಲ್ಲದೆಷ್ಟೊಂದು ನಗೆ ಇತ್ತು
ಕನಸ ಹೊತ್ತು ಬಂದವಳ ಲಂಗದಲ್ಲದೆಷ್ಟೊಂದು  ಬಣ್ಣವಿತ್ತು

ಬಾಲ್ಯದ ಕನಸು ಮುಗಿಯುವ ಮುನ್ನ ಅವಳ ಕೈಯ್ಯಲಿ ಇನ್ನೊಂದು ಬಾಲ್ಯ ವಿತ್ತು
ದೂರದ ಒಣಗಿದ ಮರದಲ್ಲಿ ಹರಕು ಸೀರೆಯ ಜೋಲಿ ತೂಗುತ್ತಿತ್ತು

ಹರೆಯದ ಕನಸು ಆರಂಭವಾಗುವ ಮುನ್ನವೇ, ಅವನ್ನು ಕರಿಮಣಿಯ ಕಪ್ಪು ತಿಂದಿತ್ತು
ಮತ್ತದೇ ಮರದಲ್ಲಿ ಅವಳದೇ ಕಂದನ ಜೋಲಿ ತೂಗುತ್ತಿತ್ತು

ಹೊತ್ತಿಗೆ ಮುಂಚೆಯೇ ಅವಳ  ವೃಧ್ಧಾಪ್ಯ  ಕರೆದಿತ್ತು
ಸೀರಿಯ ಬಣ್ಣವೆಲ್ಲ ಎಂದೋ ಮಾಸಿತ್ತು
ಆದರೂ   ಆಕೆಯ ಮೊಗದಲ್ಲದೆಷ್ಟೊಂದು  ನಗೆ ಇತ್ತು

2 comments:

  1. ಸ್ವರ್ಣಾ,
    ಕಟು ವಾಸ್ತವವೇ ಕವನವಾಗಿದೆ ಇಲ್ಲಿ. ಅಭಿನಂದನೆಗಳು.

    ReplyDelete
  2. ಧನ್ಯವಾದಗಳು ಸುನಾಥ್ ಸರ್

    ReplyDelete