" ಕವಿ ಜೀವನದ ಬ್ಯಾಸರ ಹರಿಸಾಕ, ಹಾಡ ನುಡಿಸಾಕ
ಒಂದು ಹೂತ ಹುಣಸಿ ಮರ ಸಾಕ "
-- ಬೇಂದ್ರೆಯವರ ಜೋಗಿ ಕವನದಿಂದ
" ಅರ್ಥವಿಲ್ಲ ಸ್ವಾರ್ಥ ವಿಲ್ಲ ಬರಿಯ ಭಾವಗೀತ "
--ಬೇಂದ್ರೆಯವರದೇ ಕವಿತೆ ಇಂದ , ಕವಿತೆಯ ಹೆಸರು ಗೊತ್ತಿಲ್ಲ :-)
ಎರಡೂ ಕೇಳಿದ್ದು ಬನ್ನಂಜೆಯವರ ಮಾತಲ್ಲಿ
ಸೃಷ್ಟಿಸಿದೆನೆಂಬ ಗರ್ವ ಬೇಡ
ಹೊಗಳಿಕೆಗಾಗಿ ಪರ್ವ ಬೇಡ
ಪದಗಳಲ್ಲಿದ್ದ ಎಲ್ಲ ಭಾವ ದಕ್ಕದು ಯಾರಿಗೂ
ಸ್ವತಹ ಅದನ ಬರೆದವನಿಗೂ!
ನಿನ್ನ ಸ್ಫುರಣ ಹೇಳಿದ್ದೊಂದು
ನಿನ್ನ ಮನ ಅರ್ಥೈಸಿದ್ದೊಂದು
ಪದ ಪ್ರಾಸ ಗಳ ಸುಳಿಯಲ್ಲಿ ಸಿಕ್ಕಿ
ನೀ ಬರೆದ್ದದೊಂದು
ಆದ್ದರಿಂದ
ಸೃಷ್ಟಿಸಿದೆನೆಂಬ ಗರ್ವ ಬೇಡ
ಹೊಗಳಿಕೆಗಾಗಿ ಪರ್ವ ಬೇಡ
ಓದ್ವ ಅವನಾರೋ ?
ಬರೆದ ನೀನ್ಯಾರೋ ?
ಮನ ಮನಗಳ ನಡುವಿನ ಅಂತರ ದಲ್ಲಿ
ಅದೆಷ್ಟು ಭಾವಗಳು ಕಳೆದವೋ ?
ಆದ್ದರಿಂದ
ಸೃಷ್ಟಿಸಿದೆನೆಂಬ ಗರ್ವ ಬೇಡ
ಹೊಗಳಿಕೆಗಾಗಿ ಪರ್ವ ಬೇಡ
ವರಕವಿಯ ಕರದಲ್ಲಿ ಹುಣಸಿ ಮರದಲ್ಲೂ ಕವಿತೆ
ನಿನ್ನಿಂದ ಆ ಎತ್ತರಕ್ಕೆ ಎರಲಾದಿತೆ ?
ಒಂದು ಪ್ರಯತ್ನ ನಡೆಯಲಿ ಸಾಧನ ಕೇರಿ ಎಡೆಗೆ
ಎಡೆ ಯಾಗಲಿ ನಿನ್ನೆಲ್ಲ ಅಹಂಕಾರ
ನೀನೆ ಇಲ್ಲದ ಮೇಲೆ ಗರ್ವವೆಲ್ಲಿಂದ?
ಒಂದು ಹೂತ ಹುಣಸಿ ಮರ ಸಾಕ "
-- ಬೇಂದ್ರೆಯವರ ಜೋಗಿ ಕವನದಿಂದ
" ಅರ್ಥವಿಲ್ಲ ಸ್ವಾರ್ಥ ವಿಲ್ಲ ಬರಿಯ ಭಾವಗೀತ "
--ಬೇಂದ್ರೆಯವರದೇ ಕವಿತೆ ಇಂದ , ಕವಿತೆಯ ಹೆಸರು ಗೊತ್ತಿಲ್ಲ :-)
ಎರಡೂ ಕೇಳಿದ್ದು ಬನ್ನಂಜೆಯವರ ಮಾತಲ್ಲಿ
ಸೃಷ್ಟಿಸಿದೆನೆಂಬ ಗರ್ವ ಬೇಡ
ಹೊಗಳಿಕೆಗಾಗಿ ಪರ್ವ ಬೇಡ
ಪದಗಳಲ್ಲಿದ್ದ ಎಲ್ಲ ಭಾವ ದಕ್ಕದು ಯಾರಿಗೂ
ಸ್ವತಹ ಅದನ ಬರೆದವನಿಗೂ!
ನಿನ್ನ ಸ್ಫುರಣ ಹೇಳಿದ್ದೊಂದು
ನಿನ್ನ ಮನ ಅರ್ಥೈಸಿದ್ದೊಂದು
ಪದ ಪ್ರಾಸ ಗಳ ಸುಳಿಯಲ್ಲಿ ಸಿಕ್ಕಿ
ನೀ ಬರೆದ್ದದೊಂದು
ಆದ್ದರಿಂದ
ಸೃಷ್ಟಿಸಿದೆನೆಂಬ ಗರ್ವ ಬೇಡ
ಹೊಗಳಿಕೆಗಾಗಿ ಪರ್ವ ಬೇಡ
ಓದ್ವ ಅವನಾರೋ ?
ಬರೆದ ನೀನ್ಯಾರೋ ?
ಮನ ಮನಗಳ ನಡುವಿನ ಅಂತರ ದಲ್ಲಿ
ಅದೆಷ್ಟು ಭಾವಗಳು ಕಳೆದವೋ ?
ಆದ್ದರಿಂದ
ಸೃಷ್ಟಿಸಿದೆನೆಂಬ ಗರ್ವ ಬೇಡ
ಹೊಗಳಿಕೆಗಾಗಿ ಪರ್ವ ಬೇಡ
ವರಕವಿಯ ಕರದಲ್ಲಿ ಹುಣಸಿ ಮರದಲ್ಲೂ ಕವಿತೆ
ನಿನ್ನಿಂದ ಆ ಎತ್ತರಕ್ಕೆ ಎರಲಾದಿತೆ ?
ಒಂದು ಪ್ರಯತ್ನ ನಡೆಯಲಿ ಸಾಧನ ಕೇರಿ ಎಡೆಗೆ
ಎಡೆ ಯಾಗಲಿ ನಿನ್ನೆಲ್ಲ ಅಹಂಕಾರ
ನೀನೆ ಇಲ್ಲದ ಮೇಲೆ ಗರ್ವವೆಲ್ಲಿಂದ?
ಸ್ವರ್ಣಾ,
ReplyDeleteನಿಮ್ಮ ಸ್ಫುರಣ ಹೇಳಿದ ಭಾವ ನನ್ನ ಮನಕ್ಕೆ ಹೊಳೆದಿದೆ ಎಂದು ತಿಳಿಯಲೆ?
ಬನ್ನಂಜೆಯವರ ‘ಮಾತಿನಲ್ಲಿ’ ಕೆಲವೊಂದು ತಪ್ಪುಗಳು ನುಸುಳಿವೆ ಎಂದು ಎನ್ನಿಸುತ್ತದೆ. ಸರಿಯಾದ ಮಾಹಿತಿ ಹೀಗಿದೆ:
(೧)‘ಅರ್ಥವಿಲ್ಲ ಸ್ವಾರ್ಥವಿಲ್ಲ...’ ಎನ್ನುವ ಸಾಲು ಬೇಂದ್ರೆಯವರ ‘ಭಾವಗೀತೆ’ ಕವನದಲ್ಲಿದೆ. ಈ ಕವನವು ‘ನಾದಲೀಲೆ’ ಸಂಕಲನದಲ್ಲಿದೆ.
(೨)‘ಹೂತದ ಹುಣಸಿಮರ..’ಕವನವು ‘ಸಖೀಗೀತ’ಎನ್ನುವ ಕವನಸಂಕಲನದಲ್ಲಿದೆ.
(೩)‘ಜೋಗಿ’ ಕವನವು ‘ಗಂಗಾವತರಣ’ ಕವನಸಂಕಲನದಲ್ಲಿದೆ.
ವರಕವಿಯ ಸ್ಫುರಣ ಅರ್ಥೈಸಿವವರಿಗೆ ಇದು ಸುಲಭ ಸಾಧ್ಯ ಸರ್.
ReplyDeleteದೊಡ್ಡ ಮಾತು.
ಪ್ರತಿಕ್ರಿಯೆ ಮತ್ತು ಮಾಹಿತಿಗಾಗಿ ಧನ್ಯವಾದಗಳು
" ಅರ್ಥವಿಲ್ಲ ಸ್ವಾರ್ಥ ವಿಲ್ಲ ಬರಿಯ ಭಾವಗೀತ "
ReplyDelete--ಬೇಂದ್ರೆಯವರದೇ ಕವಿತೆ ಇಂದ , ಕವಿತೆಯ ಹೆಸರು ಗೊತ್ತಿಲ್ಲ :-)
ಭೃಂಗದ ಬೆನ್ನೇರಿ ಬಂತು
ಕವಿ : ದ.ರಾ.ಬೇಂದ್ರೆ (ಅಂಬಿಕಾತನಯದತ್ತ)
ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ
ಏನು ಏನು? ಜೇನು ಜೇನು? ಎನೆ ಗುನ್ ಗುನ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುನತೆ ತಾಲಾ ಭಾಲಾ
ಉಸಿರಿನಿಂದೆ ಹುಡುಕುವಂತೆ ತನ್ನ ಬಾಳ ಮೇಲಾ
ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮುಳುಗುವೊಲು ಸ್ವತಂತ್ರಾ
ಎಲ್ಲೆಲ್ಲೂ ಸೃಷ್ಟಿದೇವಿಗಿತ್ತ ದೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ಡಾಂಗುಡಿಗಳ ಬಿಡುತಲಿತ್ತು ಅರಳುತಿತ್ತು ಪ್ರೇಮಾ
ವಜ್ರಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ
ನೀರ ಹೀರಿ ಹಾರುತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
ಗಾಳಿಯೊಡನೆ ತಿಳ್ಳಿಯಾಡುತಾಡುತದರ ಓಟಾ
ದಿಕ್ತತಿಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕಿಯೊಡನೆ ಬೆಳೆಸುತಿತ್ತು ಕೂಟಾ
ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
'ಬಂತೆಲ್ಲಿಗೆ?' ಕೇಳುತಿದ್ದನೀಯನಂತ ಕಾಳಾ
ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ
ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ..... *GOLD*
ಧನ್ಯವಾದಗಳು, ಈ ಬರಹ ಬರೆದ ನಂತರ ನಾನೂ ಇದನ್ನ ಓದಿದೆ.
Delete