Monday, October 17, 2011

ಬದುಕು

ಬಾಲ್ಯ ಮತ್ತು ವೃಧ್ಧಾಪ್ಯ  ಎರಡಕ್ಕೂ ಇರುವ ಸಮಾನ ಗುಣ ಹಠ.
ತಾನು ಹೇಳಿದ್ದು ಬಹು ಪಾಲು ವಿಷಯಗಳಲ್ಲಿ  ಹೇಗಾದರೂ ಸರಿ ನಡೆದೇ  ತೀರಬೇಕು.

ಬಾಲ್ಯಕ್ಕೆ ವಿವೇಕವಿಲ್ಲ, ವೃಧ್ಧಾಪ್ಯಕ್ಕೆ ದೇಹ ಮನಸು ಮಾತು ಕೇಳುತ್ತಿಲ್ಲ, ಇತರರಾದರು ಕೇಳಲಿ ಎಂಬಭಾವ ವೇನೋ ?
ಮಧ್ಯ ವಯಸ್ಸಿಗೆ ಬಾಲ್ಯ ಮತ್ತು ವೃಧ್ಧಾಪ್ಯದ ಜವಾಬ್ದಾರಿ :)

ಬನ್ನಂಜೆಯವರು  ಒಂದು ಪ್ರವಚನದಲ್ಲಿ, ಅವಧೂತರೊಬ್ಬರ ಬಗ್ಗೆ ಹೇಳುತ್ತಾರೆ.
ಅವರು ಹೇಳುತ್ತಿದರಂತೆ ಸಾವು ಸುಂದರ !

ದಿನ ದಿನವೂ ಸಿಧ್ಧಗೊಳಿಸುತ್ತದೆ ಬದುಕು
ಸಾವೆಂಬ ಅಂತಿಮ ಪರೀಕ್ಷೆಗಾಗಿ  !
ಇಲ್ಲಿ ಕಲಿತುದರೆಲ್ಲದರ ಪರೀಕ್ಷೆಯಂತೆ ಸಾವಿನಲ್ಲಿ!
ಪಾಠ ಚೆನ್ನಾಗಿ ಅಭ್ಯಾಸ ಮಾಡಿದವರು ನಗುತ್ತಲೇ ಪರೀಕ್ಷೆ  ಎದರಿಸುತ್ತಾರೆ
ಉಳಿದವರು ಪರೀಕ್ಷೆ ಮುಂದೂಡುವ ರೀತಿಗಳನ್ನು ಹುಡುಕುತಿರುತ್ತಾರೆ !

3 comments:

  1. ಹುಟ್ಟು ಸಾವು-ಎರಡೂ ತಿಳಿಯದು.ಗೊತ್ತಿರುವುದು ಬದುಕು ಮಾತ್ರ.ಅದನ್ನು ಪ್ರೀತಿಸೋಣ.ಅದನ್ನು ಸಾಧ್ಯವಾದಷ್ಟು ಅದರ ಎಲ್ಲಾ ಹಂತಗಳನ್ನೂ ಚೆನ್ದವಾಗಿಸೋಣ.ಇಷ್ಟು ಸಾಕಲ್ಲವೇ?

    ReplyDelete
  2. ಬದುಕಿನ ಬಗ್ಗೆ ಪುಟ್ಟದಾಗಿ ಬರೆದು, ಅರ್ಥೈಸಿದ್ದೀರೀ.

    ಸುಖಃಮಯ ಸಾವಿನ ಬಗ್ಗೆ ಸರಿಯಾದ ನಿರ್ವಚನ, ಬ್ಲಾಗೂ ಸೂಪರ್ರೂ.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete
  3. ಕೃಷ್ಣಮೂರ್ತಿ ಸರ್, ನಿಮ್ಮ ಅಭಿಪ್ರಾಯ ಸರಿ.
    ಮೇಲಿನ ಸಾಲುಗಳು ಅವಧೂತರ ಮಾತು ಕೇಳಿದಾಗ ಅನಿಸಿದ್ದು :)
    ಪ್ರತಿಕ್ರಿಯೆಗಾಗಿ ಧನ್ಯವಾದಗಳು

    ಬದರಿನಾಥ್ ಸರ್, ನಿಮ್ಮ ಬ್ಲಾಗುಗಳನ್ನು ನಾನಾಗಲೇ ಓದಿದ್ದೇನೆ :)
    ಪ್ರತಿಕ್ರಿಯಿಸಿಲ್ಲ ಅಷ್ಟೇ. ನಿಮ್ಮ ಕವಿತೆಗಳು ತುಂಬಾ ಚೆನ್ನಾಗಿವೆ.
    ಪ್ರತಿಕ್ರಿಯೆಗಾಗಿ ಧನ್ಯವಾದಗಳು

    ReplyDelete