Tuesday, November 08, 2011

ಧಾತ್ರಿ ಹವನ

ನಿನ್ನೆ ನಮ್ಮನೆ ತುಳಸಿಗೆ ಮತ್ತೆ
ಕೃಷ್ಣನೊಂದಿಗೆ ಮದುವೆ !
ಕಬ್ಬಿನ ಚಪ್ಪರದ ಕೆಳಗೆ
ಧಾತ್ರಿ ಹವನ
ಹತ್ತಾರು ಪ್ರಣತಿಗಳ ಮಂದ ಬೆಳಕಲ್ಲಿ
ಸೇವಂತಿಗೆ, ಮಲ್ಲಿಗೆ ಗಳ ಘಮದಲ್ಲಿ
ಸೀ ಅವಲಕ್ಕಿ, ಕಾಯಿಸಿದ ಹಾಲಿನ ನೈವೆದ್ಯದೊಂದಿಗೆ
ನಮ್ಮನೆ ಹುಡುಗಿ ಮತ್ತೆ ವಾಸುದೇವನ ಮಡದಿಯಾದಳು
ಮದುವೆ ಮಾಡಿ ಸುಸ್ತಾಗಿ ಮಲಗಿ,
ಮರು ಮುಂಜಾನೆ  ಅಪಾರ್ಟ್  ಮೆಂಟಿನ  ಬಾಲ್ಕಾನಿ ಇಂದ ನೋಡಿದರೆ
ಯಾವ ಚಪ್ಪರದ,  ಬೆಳಕಿನ, ಘಮದ, ನೈವೇದ್ಯದ ಹಂಗಿಲ್ಲದೆ
ಬೀದಿಯಲ್ಲಿ ಬೆಳೆದ ಅದೆಷ್ಟೋ ತುಳಸಿಯರಿಗೆ ಕೃಷ್ಣ ಮಳೆಯ ಮುತ್ತನಿಡುತ್ತಿದ್ದ!

4 comments:

  1. ಸ್ವರ್ಣಾ,
    ಒಂದು ಸಾಮಾನ್ಯವೆನ್ನಿಸಬಹುದಾದ ಘಟನೆಯು ನಿಮ್ಮ ಕುಂಚದಲ್ಲಿ ಅಸಾಮಾನ್ಯ ಚಿತ್ರವಾಗುತ್ತದೆ. ಅಭಿನಂದನೆಗಳು.

    ReplyDelete
  2. ಧನ್ಯವಾದಗಳು ಸುನಾಥ್ ಸರ್.

    ReplyDelete
  3. ಓಹ್ !. ತುಂಬ ಚೆನ್ನಾಗಿದೆ.

    ReplyDelete
  4. ಧನ್ಯವಾಗಳು ಸರ್

    ReplyDelete