ಮರದ ಎಲ್ಲ ಎಲೆಗಳೂ ಉದುರಲು ಇನ್ನು ಸ್ವಲ್ಪ ಕಾಲವಿದೆ
ಬಾಗಿ ಧರೆಗುರಳಲು ಕಾಯುತ್ತಿರುವಂತಿದೆ
ಇನ್ನು ಉರುಳಿಲ್ಲವಾದ್ದರಿಂದ ನೀರು ಗೊಬ್ಬರದ ಅಗತ್ಯವಿದೆ.
ಬಾಡಲು ಸಜ್ಜಾಗಿರುವ ಮರವಾದ್ದರಿಂದ ಎಲ್ಲ ತುಸು ಹೆಚ್ಚೆನಿಸುವಷ್ಟೇ ಬೇಕು.
ಮಾಗುವ ಕಾಲ ಬಂದರೂ ಯಾವುದೋ ಕಾಲದಲ್ಲಿ ಕೊಟ್ಟೆನೆಂಬ ಗರ್ವವಿನ್ನು ಅಳಿದಿಲ್ಲ !
ತುಸುದೂರದಲ್ಲೇ ಮೊಳಕೆಯೊಂದು ಚಿಗುರೊಡೆಯಲು ಕಾಯುತ್ತಿದೆ.
ಬೆಳೆವ ಸಸಿಯಾದ್ದರಿಂದ ಎಲ್ಲ ಸರಿಯಾದ ಪ್ರಮಾಣದಲ್ಲೇ ನೀಡಬೇಕು.
ಹೆಚ್ಚು ಗೊಬ್ಬರವೂ ಅಪಾಯಕಾರಿ !
ಸತ್ವವಿರುವ ಮೊಳಕೆಯಾದರೆ ಯಾವ ಪೋಷಣೆಯೂ ಇಲ್ಲದೆ ಬೆಳೆದೀತು
ಇನ್ನು ಬೆಳೆಯದ ಸಸಿಯಾದರೂ ನಾಳಿನ ಭರವಸೆ ನಾನು ಎಂಬ ಭಾವ ಅದಕೆ !
ಮಧ್ಯೆ ನಾನೆಂಬ ಗಿಡ
ಚಿಗುರಿಗೆ ನೆರಳೂ ಬೇಕು, ಬಿಸಿಲೂ ಬೇಕು, ಪೋಷಣೆಯೂ ಬೇಕು
ಅಷ್ಟನ್ನು ವ್ಯವಸ್ಥೆ ಮಾಡುವಷ್ಟರಲ್ಲಿ, ಮರ ಎಲೆ ಉದುರಿಸಿ ಶಬ್ದ ಮಾಡುತ್ತದೆ
ಮರದ ಎಲೆಗಳ ಗೊಬ್ಬರ ಮಾಡಿ, ಎರಡಕ್ಕೂ ಹಂಚುವಷ್ಟರಲ್ಲಿ ಬುಟ್ಟಿ ಎಲ್ಲ ಖಾಲಿ !
ಬಹು ಕಾಲವಾಯಿತು ನನ್ನ ಚಿಗುರ ಕಂಡು !

ಸೃಷ್ಟಿ ನಿರಂತರವಾಗಿ ಸಾಗಬೇಕಾದರೆ ಮೊಳಕೆಯು ಗಿಡವಾಗಿ ಬೆಳೆಯಬೇಕು. ಮರವಾಗಿ ಮಾಗಬೇಕು. ಹಣ್ಣೆಲೆಗಳು ಉದುರಿ ಗೊಬ್ಬರವಾಗಬೇಕು.ಎಲ್ಲ ಜೀವಿಗಳಿಗೂ ಇದು ಅನ್ವಯಿಸುತ್ತದೆ, ಅಲ್ಲವೆ? ಸೃಷ್ಟಿಕ್ರಮವನ್ನು ಸುಂದರವಾಗಿ ಕವನಿಸಿದ್ದೀರಿ. ಕವನದ ಭಾವವು ಸಂಕೀರ್ಣವಾದಾಗಲೂ ಸಹ,ರಚನೆಯನ್ನು ಸರಳವಾಗಿಸುವ ಕಲೆ ನಿಮಗೆ ಸಿದ್ಧಿಸಿದೆ.
ReplyDeleteಧನ್ಯವಾದಗಳು ಸರ್
ReplyDelete