Thursday, June 14, 2012

ಅವಳಸ್ತಿತ್ವ


ಚಿತ್ರ ಕೃಪೆ  : ಅಂತರ್ಜಾಲ



ಅಪಾರ್ಟ್ಮೆಂಟಿನ ಬಾಲ್ಕನಿಯ ಅಮೃತ ಬಳ್ಳಿ
ಹಬ್ಬ ಬೇಕು, ಮನೆಗೆ ಹಾಕಿದ ಗ್ರಿಲ್ಲುಗಳ ನಡುವೆ.
ಆದರದೇಕೋ ಹಬ್ಬದು ?
ಕಬ್ಬಿಣದೊಂದಿಗಿನ   ನಂಟು ಬೇಡವಾಗಿದೆ ಅದಕೆ

ಎಲ್ಲಿಂದಲೋ ಒಂದು ಮಾರು ಮಾಸಿದ
ಚಳ್ಳೇದುರಿ  ತಂದು ಒಂದು ಮೊಳೆ ಹೊಡೆದು ಕಟ್ಟಿದೆ 
ಅಮೃತಮತಿಗೆನಾನಂದ, ಏರಿದ್ದೆ ಏರಿದ್ದು,
ಅತ್ತ ಒಂದೆಲೆ, ಇತ್ತ ಒಂದೆಲೆ.

ಹೇಗೆ ಹೇಳಲಿ?   ಅಮುದೆಗೆ,
ಕಬ್ಬಿಣದ ನಡುವೆಯೂ ಬೆಳೆಯ ಬಹುದು ,
ಸೀಮೆಂಟಿನ ಕುಂಡದಲ್ಲೂ ಬೇರೂಡ ಬಹುದು.

ಕುಂಡವಾದರೇನು, ಅದರಲ್ಲೂ ಮಣ್ಣಿದೆ.
ಅಪಾರ್ಟ್ ಮೆಂಟಾದರೇನು, ಅಲ್ಲೂ ಮನೆ ಇದೆ !

5 comments:

  1. ಹೇಗೆ ಹೇಳುವುದು? ಬಳ್ಳಿಗೆ ತನ್ನ ಅಸ್ಥಿತ್ವವನ್ನು ಎಲ್ಲಿಯಾದರೂ ಉಳಿಸಿಕೊಳ್ಳ ಬೇಕು. ಇಲ್ಲದಿದ್ದರೆ ಅಳಿಸಿ ಹೋಗುವ ಭಯವೂ ಇದೆ.

    ಇದು ಅಮೃತ ಬಳ್ಳಿಯ ನೆಪದಲ್ಲಿ ನಮ್ಮೆಲ್ಲರ ಬದುಕಿನ ಚಿತ್ರಣ. ಇಷ್ಟು ವರ್ಷಗಳಾದರೂ ಇನ್ನೂ ನನಗೆ ಈ ಬೆಂಗಳೂರು ಒಗ್ಗುವುದೇ ಇಲ್ಲ. ಇವಳು ಒಮ್ಮೆ ಪ್ರೇಯಸಿಯಂತೆ ಮಗದೊಮ್ಮೆ ಹೆತ್ತಮ್ಮನಂತೆ ಕಂಡರೂ ನನಗೆ ನನ್ನ ಹಳ್ಳಿ ಬದುಕಿನ ಸುಲಲಿತವೇ ಶ್ರೇಷ್ಟ.

    ಪ್ರತಿಮೆಯನ್ನು ಅಮೋಘವಾಗಿ ಬಳಸಿಕೊಂಡಿದ್ದೀರ.

    ReplyDelete
  2. ಹೌದು ಬದರಿ ಸರ್
    ಏಕ ಕಾಲಕ್ಕೆ ನಮ್ಮದು ನಮ್ಮದಲ್ಲವೂ ಆಗಬಹುದಾದ ಊರು ಬೆಂಗಳೂರು
    ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್
    ಸ್ವರ್ಣಾ

    ReplyDelete
  3. ಸ್ವರ್ಣಾ,
    ಈ ಕವನವನ್ನು ಓದಿ ತುಂಬ ಖುಶಿಯಾಯಿತು. ಜೀವನಲತೆಯನ್ನು ಎಲ್ಲಾದರೂ ಹಬ್ಬಿಸಬಹುದು, ಅರಳಿಸಬಹುದು; ಇದೇ ಜೀವನದ ಸಾರ ಎನ್ನುವ ಸಂದೇಶವನ್ನು ಪುಟ್ಟ ಕವನದಲ್ಲಿ ಎಷ್ಟು ಚೆನ್ನಾಗಿ ಹೇಳಿದ್ದೀರಲ್ಲ, ಸ್ವರ್ಣಾ! ಕವನವೆಂದರೆ passion concentrated ಎನ್ನುವುದು ಈ ಕವನವನ್ನು ಓದಿದಾಗ ಭಾಸವಾಗುತ್ತದೆ.

    ReplyDelete
  4. ನಾನು ಬರೆದದ್ದಕ್ಕಿಂತ ನಿಮ್ಮ ಕಾಮೆಂಟ್ಗಳು ಚೆನ್ನಾಗಿವೆ.
    ಧನ್ಯವಾದಗಳು ಕಾಕಾ
    ಸ್ವರ್ಣಾ

    ReplyDelete
  5. sundaravaagi barediddeera.. svarna.

    kaviteyalliruva jeevanada guttu chennaagi habbide..!

    ReplyDelete