ಅನ್ನವನು ಇಕ್ಕುವುದು
ನನ್ನಿಯನು ನುಡಿಯುವುದು,
ತನ್ನಂತೆ ಪರರ ಬಗೆದೊಡೆ ,
ಕೈಲಾಸ ಬಿನ್ನಾಣವಕ್ಕು ಸರ್ವಜ್ಞ
ಬಹುಶ ಈ ತ್ರಿಪದಿ ನಮ್ಮ ೫-೬ ನೇ ತರಗತಿ ಪಾಠ ದಲ್ಲಿತ್ತು.
ಆಗ ನಾನಂದುಕೊಂಡಿದ್ದೆ , ಬೇರೆಯವರನ ನಮ್ ಹಾಗೆ ತಿಳ್ಕೋಬಹುದು
(ಅದ್ರಲ್ ಏನಿದೆ ಹೋಗೋ ಗಂಟು? ) ಅಲ್ಪ ಸ್ವಲ್ಪ ಸತ್ಯನೂ ನುಡಿಬಹುದು
(೫-೬ ಕ್ಲಾಸಲ್ಲಿ ಇನ್ನು ಅಷ್ಟೊಂದ್ ಸುಳ್ ಹೇಳಲ್ಲ :-) ) ಆದ್ರೆ ನಮಗೆ ಇಷ್ಟ ಆಗಿರೋ
ತಿಂಡಿ ಇದ್ರೆ, ಯಾರದ್ರೂ ಹಸ್ದಿರೋರ್ ಕಂಡ್ರೆ? ಏನ್ ಮಾಡದು? ಹೇಗೆ ಅದ್ನ ಕೊಟ್ಟ್ ಬಿಡದು?
ನಂಗಿಷ್ಟ ಆಗಿದ್ ಬಿಸ್ಕತ್ನ ತಂಗಿ ಇಂದ ಏನಾರ ಮಾಡಿ ಕಸ್ಕೊಂಡ್ ತಿಂತಾ ಇದ್ದಿದ್ ನಂಗೆ ಇದೊಂದ್
ಬಿಡಿಸಲಾಗದ ಕಗ್ಗಂಟಾಗಿತ್ತು . ಆದ್ರೆ ಈಗ, ತಿನ್ನೋದನ್ನಾದ್ರು ಕೊಟ್ಟ್ ಕೈ ತೊಳ್ಕೋ ಬಹುದು ,
ಬೇರೆಯವರು ನಂ ಹಾಗೆ ಅಂತ ಹೇಗೆ ತಿಳ್ಕೊಳದು ಅಂತ ತಿಳಿವಲ್ದು
ತುಂಬಾ ಕೆಟ್ಟವಳು ನಾನು ಅಂತ ಅಲ್ಲ, ಆದ್ರೆ ನಾನ್ ಮಾಡಿದ್ರೆ ಆದ ತಪ್ಪಲ್ಲ ಅಥವ ಅದು ಗೊತ್ತಾಗದೆ
ನಡೆದ ತಪ್ಪು ಅನ್ನೋ ನಾನು ಅದೇ ಕಾರ್ಯ ಬೇರೆಯವರು ಮಾಡಿದ್ರೆ ಊರು ಕೇರಿ ಒಂದ್ ಮಾಡ್ತೀನಿ.
ಯಾಕೆ?

No comments:
Post a Comment