ಹಾಗೂ ಹೀಗೂ ಹತ್ತನೇ ತರಗತಿ ಮುಗಿಯುತ್ತಾ ಬಂತು.ಪರೀಕ್ಷಾ ಸಮಯ ಶುರುವಾಯಿತು. ಪೂರ್ವ ತಯಾರಿ ಪರೀಕ್ಷೆಯೂ ಮುಗಿದು ಹೋಯಿತು. ಎಲ್ಲಿಗೋ ಹೋಗಬೇಕಾಗಿ ಬಂದವಳಿಗೆ ಅವನ ಕಾಲೇಜನ್ನು ದಾಟಿ ಹೋಗಬೇಕಿತ್ತು.
ಅವ ಸಿಕ್ಕರೂ ನಿಲ್ಲ ಬಾರದೆಂದು ನಿರ್ಧರಿಸಿ ಆಗಿತ್ತು . ಎಲ್ಲೂ ನೋಡದೆ, ಅವನ ನೀರಿಕ್ಷಿಸದೆ ಹೊರಟಿದ್ದೆ. ಅನೀರಿಕ್ಷಿತಗಳ ಸರಮಾಲೆಯೇ ಬದುಕಲ್ಲವೇ? ಅವ ಎದುರಿಗೇ ಬಂದ! ನಿರ್ಧಾರ ಸಡಿಲಿಸದೆ ಹಾಗೆ ಮುಂದೆ ಹೋಗುತ್ತಿದ್ದೆ.
"ಏನು ರಿವೇಂಜ್ ತೊಗೊತಾ ಇದ್ದೀಯ? ಅಂತ ಪಕ್ಕಕ್ಕೆ ಬಂದ. ಮತ್ತದೇ ನಗು.
ನಗುವಿನಲ್ಲಿ ಕಳೆದುಹೋಗಿದ್ದೆ ನಾನು. ಏನಂತ ಹೇಳೋದು?
ಅವನೇ ಮತ್ತೆ ಕೇಳಿದ, "preparatory exams ಚೆನ್ನಾಗಾಯ್ತ ?"
"ಹೂಂ" ಅಷ್ಟೇ ಬಾಯಿಂದ ಬಂದಿದ್ದು .
"ಆಲ್ ದಿ ಬೆಸ್ಟ್ " ಹೇಳಿ ಮತ್ತೆ ನಕ್ಕ.
"ಥ್ಯಾಂಕ್ಸ್" ಹೇಳಿ ಏಕೋ ನಗಲಾಗಲಿಲ್ಲ.
ಮಾತು ಮುಂದುವರೆಸುವ ಆಸಇಂದಲೋ ಏನೋ, ಅವ ನಿಂತಿದ್ದ ನನ್ನ ಹೆಜ್ಜೆ ಮುನ್ನಡೆದಾಗಿತ್ತು.
"ನೀ ಯಾರೋ ಏನೋ ಸಖ ಎನಗಾಸರೆ"

ಈ ಧಾರಾವಾಹಿಯ Episodes ಚೆನ್ನಾಗಿ ಬರ್ತಾ ಇವೆ.
ReplyDeleteಯುಗಾದಿಯ ಶುಭಾಶಯಗಳು. ಹೊಸ ಸಂವತ್ಸರ ನಿಮಗೆ ಸುಖ,ಶಾಂತಿ ಹಾಗೂ ಯಶಸ್ಸನ್ನು ತರಲಿ.
ಚಿಕ್ಕ ಅನಿರೀಕ್ಷಿತಗಳಲ್ಲೇ ಬದುಕಿನ ಪುಳಕ ಅಡಗಿದೆ. ಇಂತಹ ತಂತಿ ಮೀಟಿಗೆ ಬದುಕೂ ಶೃತಿಗೆ ಬರುವುದು.
ReplyDeleteಧನ್ಯವಾದಗಳು ಬದರಿ ಸರ್ ಮತ್ತು ಸುನಾಥ್ ಸರ್ ಅವರಿಗೆ.
ReplyDeleteನಂದನ ನಾಮ ಸಂವತ್ಸರದ ಶುಭಕಾಮನೆಗಳು
ಸ್ವರ್ಣಾ