ಅವನಾಗಲೇ ಕಾಲೇಜ್ ಹುಡುಗ, ದೊಡ್ಡವ ಅನಿಸಿತ್ತು. ಅದೇನೋ ಸ್ಕೂಲಿಗೂ
ಕಾಲೇಜಿಗೂ ಒಂದೇ ವರ್ಷದ ಅಂತರವಾದರೂ ಅದು ಸ್ಕೂಲು ಮತ್ತು ಕಾಲೇಜಿನ ಮಕ್ಕಳನ್ನ
ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗುತ್ತೆ.
ಆ ದಿನದ ಪರೀಕ್ಷೆ ಸರಿ ಮಾಡಿರಲಿಲ್ಲ ಅದಕೆ ನಿಲ್ಲಲಿಲ್ಲ ಎಂದ ಮೇಲೆ, ಅವನ ಮುಖದಲ್ಲಿ. ಸುಂದರ ನಗೆ ಇತ್ತು
ಅದರ ಅರ್ಥವೇನು? ಸಧ್ಯ ಪರೀಕ್ಷೆಯಲ್ಲಿ ಹಾಗೇನೂ ಆಗದೆ, ಎಲ್ಲ ಸರಿಯಾಗಿ ಒಳ್ಳೇ ಕಾಲೇಜಿನಲ್ಲಿ ಸೀಟ್
ಸಿಕ್ಕಿದೆ ಎಂಬ ಆನಂದವೇ? ಆ ದಿನ ನಿಲ್ಲಬೇಕೆಂಬ ಮನಸಿದ್ದೂ ನಿಲ್ಲಲಾಗಲಿಲ್ಲ ಎಂದೇ?ಇನ್ನೂ ಹೆಚ್ಚು ಯೋಚಿಸುವ ಮುಂಚೆ ಸ್ಕೂಲಿನ ವ್ಯವಹಾರಗಳು ಶುರುವಾದವು. ಪ್ರತೀ ಟೀಚರ್, ಪ್ರತೀ ಪಿರಿಯಡ್ನಲ್ಲೂ "ನೀವು ಹತ್ತನೇ ತರಗತಿ, ಈ ವರ್ಷ ಪಬ್ಲಿಕ್ ಪರೀಕ್ಷೆ" ಅಂತ ಒಂದು ಮಂತ್ರದಂತೆ ಹೇಳುತ್ತಿದ್ದರು. ಆ ಮಂತ್ರವಿರದಿದ್ದರೆ ಬಹುಶ ನನ್ನಂಥವರು ಪುಸ್ತಕ ತೆಗೆಯುವ ಕಷ್ಟ ತೆಗೆದುಕೊಳ್ಳುತ್ತಲೇ ಇರಲಿಲ್ಲ.
ಈ ಬಾರಿಯೂ ನಾನು ಗೆಳತಿಗೆ ಅವ ಸಿಕ್ಕ ವಿಷಯ ಹೇಳಲಿಲ್ಲ. ಗೆಳತಿಗೇನು, ಬೇರೆ ಯಾರಿಗೂ ಆ ವಿಷಯವನ್ನ ಹೇಳಲಿಲ್ಲ.
ಅವನೇನೂ ಅಂತ ವಿಖ್ಯಾತ ಹುಡುಗನಾಗಿರಲಿಲ್ಲ. ಹಾಗಂತ ಕುಖ್ಯಾತನೂ ಆಗಿರಲಿಲ್ಲ. ನೋಡಲು ಹೀರೋ ಅಲ್ಲದಿದ್ದರೂ
ಸುಂದರವಾಗೇ ಇದ್ದ. ಅದೇನೋ ಮೋಡಿಇತ್ತು ಅವನ ನಗೆಯಲ್ಲಿ, ಇಲ್ಲದಿದ್ದರೆ ನೋಡಿದರೂ ಮಾತಾಡದೆ ಹೋದ ಸಿಟ್ಟನ್ನ ನಾನಷ್ಟು ಬೇಗ ಮರೆಯುತ್ತಿದ್ದೆನೇ?
ಒಮ್ಮೆ ಹೀಗೆ ಸ್ಕೂಲಿಂದ ಮನೆಗೆ ಹೋಗುವಾಗ, ಅವನ ಮನೆ ಕಂಡಿತ್ತು. ತುಸು ದೊಡ್ಡದೆನ್ನಬಹುದಾದ ಮನೆ, ಅಂಗಳದಲ್ಲಿ ಕಾರು, ಕೈ ದೋಟದಲ್ಲಿ ಅವೆಂತೆತವೋ ಗಿಡಗಳು. ಇದು ಬೇರೆಯದೇ ಲೋಕ ಎನಿಸಿತ್ತು .ಈ ಲೋಕಕ್ಕೂ ನಮ್ಮ ಲೋಕಕ್ಕೂ ಸೇತುವೆಗಳಿಲ್ಲ. ಇವು ದ್ವೀಪಗಳು.ಅವ ಕಾಲೇಜಿಂದ ಬೈಕಲ್ಲಿ ಮನೆಕಡೆ ಬರುವುದು ಕಾಣಿಸಿತು. ನಾ ಲಘುಬಗೆಯಿಂದ
ಮನೆ ಕಡೆ ಹೆಜ್ಜೆ ಹಾಕಿದೆ.
**********************************************************************
ಹಾಗೆ ಸುಮ್ಮನೆ ಅಂತ ಶುರು ಮಾಡಿದ ಸರಣಿ ಮುಂದುವರೆಯಿತು.ಇದನ್ನ ಮುಂದುವರೆಸಬೇಕೆ? ಶಾಲೆಯ ಕನಸುಗಳು ಶಾಲೆ ಬಿಟ್ಟ ನಂತರವೂ ಕಾಡುತ್ತವೆ. ಆದರೆ ಅವು ಮುಂದುವರೆಯುತ್ತವೆಯೇ? ಈ ಕಥೆ ಮುಂದುವರೆಯಬೇಕೆ?
ಕನಸಿನ ಕೊನೆ ಅಂತ ಈ ಭಾಗಕ್ಕೆ ಶೀರ್ಷಿಕೆ ಕೊಟ್ಟಿದ್ದೆ, ( ಮತ್ತೆ ಬದಲಾಯಿಸಿ ಬಿಟ್ಟೆ) ಕೊನೆ ಮಾಡಲು ಮನಸು ಒಪ್ಪುತ್ತಿಲ್ಲ :)

ಕನಸುಗಳಿಗೆ ಕೊನೆಯಿದೆಯೆ?
ReplyDeleteಖಂಡಿತ ಇಲ್ಲ ಸುನಾಥ್ ಸರ್, ಕನಸು ಕೊನೆಯಾದಂದೇ ಮನಸು ಕೊನೆಗೊಳ್ಳುತ್ತದೆ ಅಲ್ಲವೇ ?
ReplyDeleteಪ್ರತಿಕ್ರಿಯೆಗಾಗಿ ಧನ್ಯವಾದಗಳು
ಸ್ವರ್ಣಾ
ಕನಸುಗಳಿಗೆ ಕೊನೆಯಿಲ್ಲ ಅನ್ನೋದಕ್ಕೆ ಸಾಕ್ಷಿ..ಭಾವನೆಯಿಲ್ಲದ ಮನಸಿಲ್ಲ ಅನ್ನೋದು...ಸ್ವರ್ಣ..ಚನ್ನಾಗಿದೆ...ಕನಸಿಗೆ ದೂಡುವ ಲೇಖನ.
ReplyDeleteWow... After a long time, reading something which is close to heart... after " Anandobrahma" , it is one which is holding me
ReplyDeleteVijay..
vijayharihara.wordpress.com
Thanks Vijay.
ReplyDelete