ನೀನೊಮ್ಮೆ ನನ್ನ ಹಾಡ ಹಾಡ,
ಕುಣಿತಾವ ಚುಕ್ಕಿ ಚಂದ್ರಮ ನೋಡ.
ಮಜ್ಜನವಾಗಿ ಮಡಿಇಂದ ನಿಂತೇನ ,
ಲಜ್ಜೆಯಿಂ ನಾ ಸಿಂಗರಿಸಿಕೊಂಡೆನ,
ಗೆಜ್ಜೆ ಸಪ್ಪಳ ಮಾಡದ್ಹಾಂಗ ಒಗೆದೆನ ,
ಹೆಜ್ಜೆ ಹೆಜ್ಜೆಗೆ ಹೂವ ಸುರಿದೆನ
ನೀನೊಮ್ಮೆ ಈ ಪಕ್ಕ ಬಂದು ನೋಡ.
ಕುಣಿತಾವ ಚುಕ್ಕಿ ಚಂದ್ರಮ ನೋಡ
ಪದಪದವ ಕೂಡಿ
ಪದಕೊಂದು ಅರ್ಥವ ಮಾಡಿ,
ಅರ್ಥಕೊಂದು ಭಾವವ ತೀಡಿ,
ಭಾವದ ರಾಗವ ಪಾಡಿ,
ನೀನೊಮ್ಮೆ ಹಾಡಿ ನೋಡ.
ಕುಣಿತಾವ ಚುಕ್ಕಿ ಚಂದ್ರಮ ನೋಡ
ಭಾಷೆ ಬೇಲಿಯ ಹಾರಿ
ಭಾವ ಬಂಧವ ಮೀರಿ
ಪಾಪ ಪುಣ್ಯಗಳ ತೋರಿ
ಮನದೆಲ್ಲ ವಿಷವ ಕಾರಿ
ಮನಸಿಂದ ಒಮ್ಮೆ ಕೂಡ
ಕುಣಿತದ ಲೀನ ಆತ್ಮ ನೋಡ
(ಇದು ಸಾಧನ ಕೇರಿಯ ದತ್ತನಿತ್ತ ವರ)
ಈ ರಚನೆಯ ಶೀರ್ಷಿಕೆ ಬದಲಾಯಿಸೋಣವೆಂದು ಪ್ರಯತ್ನ ಪಟ್ಟೆ.
ಯಾಕೋ ಬೇರಾವ ಶೀರ್ಷಿಕೆಯೂ ಇದರಷ್ಟು ಒಪ್ಪಿಗೆಯಾಗಲಿಲ್ಲ
ಕುಣಿತಾವ ಚುಕ್ಕಿ ಚಂದ್ರಮ ನೋಡ.
ಮಜ್ಜನವಾಗಿ ಮಡಿಇಂದ ನಿಂತೇನ ,
ಲಜ್ಜೆಯಿಂ ನಾ ಸಿಂಗರಿಸಿಕೊಂಡೆನ,
ಗೆಜ್ಜೆ ಸಪ್ಪಳ ಮಾಡದ್ಹಾಂಗ ಒಗೆದೆನ ,
ಹೆಜ್ಜೆ ಹೆಜ್ಜೆಗೆ ಹೂವ ಸುರಿದೆನ
ನೀನೊಮ್ಮೆ ಈ ಪಕ್ಕ ಬಂದು ನೋಡ.
ಕುಣಿತಾವ ಚುಕ್ಕಿ ಚಂದ್ರಮ ನೋಡ
ಪದಪದವ ಕೂಡಿ
ಪದಕೊಂದು ಅರ್ಥವ ಮಾಡಿ,
ಅರ್ಥಕೊಂದು ಭಾವವ ತೀಡಿ,
ಭಾವದ ರಾಗವ ಪಾಡಿ,
ನೀನೊಮ್ಮೆ ಹಾಡಿ ನೋಡ.
ಕುಣಿತಾವ ಚುಕ್ಕಿ ಚಂದ್ರಮ ನೋಡ
ಭಾಷೆ ಬೇಲಿಯ ಹಾರಿ
ಭಾವ ಬಂಧವ ಮೀರಿ
ಪಾಪ ಪುಣ್ಯಗಳ ತೋರಿ
ಮನದೆಲ್ಲ ವಿಷವ ಕಾರಿ
ಮನಸಿಂದ ಒಮ್ಮೆ ಕೂಡ
ಕುಣಿತದ ಲೀನ ಆತ್ಮ ನೋಡ
(ಇದು ಸಾಧನ ಕೇರಿಯ ದತ್ತನಿತ್ತ ವರ)
ಈ ರಚನೆಯ ಶೀರ್ಷಿಕೆ ಬದಲಾಯಿಸೋಣವೆಂದು ಪ್ರಯತ್ನ ಪಟ್ಟೆ.
ಯಾಕೋ ಬೇರಾವ ಶೀರ್ಷಿಕೆಯೂ ಇದರಷ್ಟು ಒಪ್ಪಿಗೆಯಾಗಲಿಲ್ಲ
ಸ್ವರ್ಣಾ ಮೇಡಮ್,
ReplyDeleteಸಾಧನಕೇರಿಯ ದತ್ತನ ಹರಕೆ ನಿಮ್ಮ ಮೇಲಿದೆ. ಅಂತೆಲೇ ನಿಮ್ಮ ಈ ಕವನದಲ್ಲಿ ಚುಕ್ಕಿ ಹಾಗು ಚಂದ್ರಮ ಕುಣಿದಿವೆ!
ಶೀರ್ಷಿಕೆ ಹೇಳಿ ಮಾಡಿಸಿದಂತಿದೆ. ಬೇಂದ್ರೆ ಅಜ್ಜನಿಗೆ ಒಳ್ಳೆಯ ಶ್ರದ್ಧಾಂಜಲಿ ಕೊಟ್ಟಿದ್ದೀರಿ. ಸೂಪರ್ರೂ...
ReplyDeleteಮತ್ತೆ ಮತ್ತೆ ಓದಬೇಕೆನಿಸುವ ಕವನ....ಚೆನ್ನಾಗಿದೆ..
ReplyDeleteನಿಮ್ಮೆಲ್ಲರಿಗೂ ಧನ್ಯವಾದಗಳು
ReplyDelete