ಉಂಡಿದ್ದು ಸಿಹಿಯನ್ನೋ?
ಸಿಹಿಯ ಸವಿಯನ್ನೋ?
ಸವಿಯ ಖುಷಿಯನ್ನೋ?
ಖುಷಿಯ ಭಾವವನ್ನೋ?
ಎಲ್ಲವನ್ನೂ ಉಂಡು, 'ಅ'ಜೀರ್ಣಿಸಿಕೊಳ್ಳುವವ ಮನುಜ
ಭಾವದಲ್ಲೇ ಲೀನವಾದವ ಮನುಜಾಗ್ರಜ
ಪ್ರೀತಿಸಿದ್ದು ಜೊತೆಯನ್ನೋ?
ಜೊತೆಬಂದ ಹೆಜ್ಜೆಯನ್ನೂ?
ಹೆಜ್ಜೆ ಸಾಗಿದ ದಾರಿಯನ್ನೋ?
ದಾರಿ ಸವೆಸಿದ ಪಯಣವನ್ನೋ?
ಎಲ್ಲವನ್ನೂ ಪ್ರೀತಿಸಿ, ಕೊರಗುವವ ಮನುಜ
ಆದರೆ ಪಯಣದಲ್ಲೇ ಲೀನವಾದವ ಮನುಜಾಗ್ರಜ
ನಂಬಿದ್ದು ಮಂತ್ರವನ್ನೋ?
ಮಂತ್ರದ ದೇವರನ್ನೋ?
ದೇವರ ಶಕ್ತಿಯನ್ನೂ?
ಶಕ್ತಿಯ ಇರುವಿಕೆಯನ್ನೋ?
ಎಲ್ಲವನ್ನೂ ನಂಬಿ, ಕೊರಗುವವ ಮನುಜ
ತನ್ನಲ್ಲೇ 'ಶಕ್ತಿ'ಯ ಕಂಡವ ಮನುಜಾಗ್ರಜ
ಸಿಹಿಯ ಸವಿಯನ್ನೋ?
ಸವಿಯ ಖುಷಿಯನ್ನೋ?
ಖುಷಿಯ ಭಾವವನ್ನೋ?
ಎಲ್ಲವನ್ನೂ ಉಂಡು, 'ಅ'ಜೀರ್ಣಿಸಿಕೊಳ್ಳುವವ ಮನುಜ
ಭಾವದಲ್ಲೇ ಲೀನವಾದವ ಮನುಜಾಗ್ರಜ
ಪ್ರೀತಿಸಿದ್ದು ಜೊತೆಯನ್ನೋ?
ಜೊತೆಬಂದ ಹೆಜ್ಜೆಯನ್ನೂ?
ಹೆಜ್ಜೆ ಸಾಗಿದ ದಾರಿಯನ್ನೋ?
ದಾರಿ ಸವೆಸಿದ ಪಯಣವನ್ನೋ?
ಎಲ್ಲವನ್ನೂ ಪ್ರೀತಿಸಿ, ಕೊರಗುವವ ಮನುಜ
ಆದರೆ ಪಯಣದಲ್ಲೇ ಲೀನವಾದವ ಮನುಜಾಗ್ರಜ
ನಂಬಿದ್ದು ಮಂತ್ರವನ್ನೋ?
ಮಂತ್ರದ ದೇವರನ್ನೋ?
ದೇವರ ಶಕ್ತಿಯನ್ನೂ?
ಶಕ್ತಿಯ ಇರುವಿಕೆಯನ್ನೋ?
ಎಲ್ಲವನ್ನೂ ನಂಬಿ, ಕೊರಗುವವ ಮನುಜ
ತನ್ನಲ್ಲೇ 'ಶಕ್ತಿ'ಯ ಕಂಡವ ಮನುಜಾಗ್ರಜ
ಸಾಮಾನ್ಯ ಹಾಗು ಅಸಾಮಾನ್ಯ ವ್ಯಕ್ತಿಗಳ ನಡುವಿನ ಭೇದದ ಒಂದು ಭಾವ ನಿಮ್ಮ ಮನಸ್ಸಿಗೆ ಹೊಳೆದಿದೆ. ಹೊಳೆದದ್ದನ್ನು ಕವನದಲ್ಲಿ ಅಳೆದಿದ್ದೀರಿ. ಉತ್ತಮ ಭಾವ, ಉತ್ತಮ ಕವನ.
ReplyDeleteಸತ್ಯವಾದ ಸತ್ಯವನ್ನು ಸೊಗಸಾಗಿ ಹೇಳಿದ್ದೀರಿ. :)
ReplyDelete